ಹಾಸನ: ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಅಡಿಯಲ್ಲಿ ಬರುವ ಕೃಷಿ ಮಹಾವಿದ್ಯಾಲಯ, ಕಾರೇಕೆರೆ, ಹಾಸನದ ವತಿಯಿಂದ ಆಯೋಜಿಸಲಾದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ 2023-24ರ ಅಂಗವಾಗಿ ಅಂತಿಮ ವರ್ಷದ ಆಹಾರ ತಂತ್ರಜ್ಞಾನ ವಿದ್ಯಾರ್ಥಿಗಳಿಂದ ದೊಡ್ದಯರಗನಾಳು ಗ್ರಾಮದಲ್ಲಿ ‘ಆಹಾರ ಕಲಬೆರಕೆ’ ಕುರಿತಾದ ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅಂಗವಾಗಿ ಆಹಾರ ಕಲಬೆರಕೆ ಎಂದರೇನು ?, ಆಹಾರ ಕಲಬೆರಕೆ ವಿಧಗಳ ಹಾಗೂ ಆಹಾರ ಕಲಬೆರಕೆಯ ದುಷ್ಪರಿಣಾಮಗಳ ಬಗ್ಗೆ ಪೂಜ. ಆರ್. ಎ ಅವರು ತಿಳಿಸಿದರು.
ನಂತರ ತಮ್ಮ ಪ್ರತಿ ನಿತ್ಯ ಜೀವನದಲ್ಲಿ ಯಾವ ರೀತಿಯ ಕಲಬೆರಕೆ ನಡೆಯುತ್ತಿದೆ ಎಂಬುದನ್ನು, ಹಾಗೂ ಸಾಮಾನ್ಯ ಕಲಬೆರಕೆ ಆಹಾರಗಳಾದ ಬೇಳೆ,ಹಾಲು,ಹಸಿರು ಬಟಾಣಿ,ಅಯೋಡಿಕರಿಸಿದ ಉಪ್ಪು ಹಾಗೂ ಮುಂತಾದ ಆಹಾರ ಪದಾರ್ಥಗಳ ಬಗ್ಗೆ ದರ್ಶನ್.ಎಂ.ಡಿ ಅವರು ತಿಳಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ವಿವಿಧ ಆಹಾರ ಕಲಬೆರಕೆಯನ್ನು ಕಂಡು ಹಿಡಿಯುವ ವೈಜ್ಞಾನಿಕ ಕ್ರಮಗಳನ್ನು ಗ್ರಾಮಸ್ಥರ ಮುಂದೆ ವಿದ್ಯಾರ್ಥಿಗಳು ಮಾಡಿದ ಸಾಕ್ಷ್ಯಚಿತ್ರ ವೀಡಿಯೊ ಮೂಲಕ ಪ್ರಸ್ತುತ ಪಡಿಸಲಾಯಿತು