ಅರೇಹಳ್ಳಿ: ಬೇಲೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ ನಾರಾಯಣ್ ಅರೇಹಳ್ಳಿಯ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿದರು.
ಪರೀಕ್ಷೆ ನಡೆಯುತ್ತಿರುವ ೧೨ ಕೊಠಡಿಗಳನ್ನು ಬಹಳ ಸೂಕ್ಷ್ಮವಾಗಿ ಗಮನಿಸಿದರು.
ಶನಿವಾರ ನಡೆದ ವಿಜ್ಞಾನ ಪರೀಕ್ಷೆಯ ಪೂರ್ವ ತಯಾರಿಯ ಕುರಿತು ಪ್ರತಿ ಶಾಲೆಯ ವಿದ್ಯಾರ್ಥಿಗಳ ಬಳಿ ತೆರಳಿ ಅಭಿಪ್ರಾಯ ಪಡೆದುಕೊಂಡರು.
ಟಾರ್ಗೆಟ್-೪೦ ಎಂಬ ವಿನೂತನ ಎರಡು ಸರಣಿ ಪುಸ್ತಕ ಹಾಗೂ ಗಣಿತ,ವಿಜ್ಞಾನ ಸೂತ್ರಗಳು ಮತ್ತು ಚಿತ್ರಗಳಿರುವ ಪುಸ್ತಕವನ್ನು ಉಚಿತವಾಗಿ ಎಲ್ಲಾ ವಿದ್ಯಾರ್ಥಿಗಳಿಗೆ ನೀಡಿದ್ದು ಬಹಳ ಅನುಕೂಲವಾಯಿತು ಎಂದು ವಿದ್ಯಾರ್ಥಿಗಳು ಹಾಗೂ ಪೋಷಕ ಸೋಮಯ್ಯ ಹೇಳಿದರು.
ಭಯಪಡದೇ ಧೈರ್ಯವಾಗಿ ಪರೀಕ್ಷೆ ಬರೆಯುವಂತೆ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಪರೀಕ್ಷಾ ಕೊಠಡಿಗೆ ಕಳುಹಿಸಿಕೊಟ್ಟರು.
ಈ ವೇಳೆ ತಾ.ಪಂ.ಸದಸ್ಯ ಸೋಮಯ್ಯ,ಇಸಿಒ ಶಿವಪ್ಪ ಹಾಗೂ ಗೋಪಾಲ್, ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ಶಿವಕುಮಾರ್ ಎಸ್,ಎನ್ ಸೇರಿದಂತೆ ಹಲವರಿದ್ದರು.