ಹಾಸನ: ನಗರದ ಗಾಂಧಿ ಬಜಾರಿನ ಬಳಿ ಇರುವ ದೇಗುಲದಲ್ಲಿ ೫ನೇ ದಿವಸದಂದು ಶ್ರೀ ಕ್ಷೇತ್ರ ಕಾಳಿಕಾಂಬ-ಕಮಠೇಶ್ವರ ರಥೋತ್ಸವವು ವಿವಿಧ ಸಾಂಸ್ಕೃತಿಕ ಕಲಾತಂಡದೊಡನೆ ವಿಜೃಂಭಣೆಯಿಂದ ನೆರೆವೇರಿತು.

ಜಿಲ್ಲಾ ಪಂಚಾಯತ್ ಶಿಕ್ಷಣ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಭವಾನಿ ರೇವಣ್ಣರವರು ಬಾಗಿಯಾಗಿ ದೇವರಿಗೆ ಪುಷ್ಫಾರ್ಚನೆ ನೆರವೇರಿಸಿದರು.

ನಂತರ ಭವಾನಿ ರೇವಣ್ಣರವರು ಮಾಧ್ಯಮದೊಂದಿಗೆ ಮಾತನಾಡಿ, ವಿಶ್ವಕರ್ಮ ಸಮಾಜದವರು ಒಗ್ಗಟ್ಟಾಗಿ ಶ್ರೀ ಕಾಳಿಕಾಂಬ ದೇವಸ್ಥಾನದ ಜಾತ್ರೆ ನೆರವೇರಿಸಲಾಗುತ್ತಿದ್ದು, ಉರಿ ಬಿಸಿಲನ್ನು ಲೆಕ್ಕಿಸದೇ ದೇವರ ರಥೋತ್ಸವದಲ್ಲಿ ನೂರಾರು ಸಂಖ್ಯೆಯಲ್ಲಿ ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ.

ಅರಕಲಗೂಡು ತಾಲೂಕಿನ ಅರೇಮಾದನಹಳ್ಳಿ ಮಠದ ಶ್ರೀ ಶಿವಸುಜ್ಞಾನತೀರ್ಥ ಮಹಾಸ್ವಾಮಿಜಿಗಳು ಆಗಮಿಸಿದ್ದು, ನೂತನವಾಗಿ ನಿರ್ಮಿಸಿರುವ ಕ್ಷೇತ್ರ ಕಾಳಿಕಾಂಬ-ಕಮಠೇಶ್ವರ ದೇವಾಲಯ ತುಂಬ ಚನ್ನಾಗಿ ಮೂಡಿಬಂದಿದೆ. ಎಲ್ಲಾರಿಗೂ ದೇವರು ಒಳ್ಳೆಯದನ್ನು ಮಾಡಲಿ ಎಂದು ಶುಭ ಹಾರೈಸಿದರು.

ಶ್ರೀ ಕಾಳಿಕಾಂಬ-ಕಮಠೇಶ್ವರ ದೇವಾಲಯ ನವೀಕರಣ ಸಮಿತಿ ಪ್ರಧಾನ ಕಾರ್ಯದರ್ಶಿ ಎಚ್.ವಿ. ಹರೀಶ್ ಮಾತನಾಡಿ, ಮಾರ್ಚ್ ೨೬ ರಿಂದ ಮಾರ್ಚ್ ೩೦ರ ವರೆಗೂ ಹಾಸನ ನಗರದ ಗಾಂಧಿ ಬಜಾರಿನ ಬಳಿ ಇರುವ ಶ್ರೀ ಕ್ಷೇತ್ರ ಕಾಳಿಕಾಂಬ-ಕಮಠೇಶ್ವರ ದೇವಾಲಯದ ಬಿಂಬ ಪ್ರತಿಷ್ಠಾಪನೆ ಹಾಗು ಬ್ರಹ್ಮ ಕಳಶೋತ್ಸವ ಸಂಭ್ರಮದಿಂದ ನೆರವೇರಿದೆ.

ಕಾರ್ಯಕ್ರಮದ ಕೊನೆಯ ದಿವಸದಂದು ಅರೇಮಾದನಹಳ್ಳಿ ಮಠದ ಶ್ರೀ ಶಿವಸುಜ್ಞಾನತೀರ್ಥ ಮಹಾಸ್ವಾಮಿಜಿಗಳು ನೇತೃತ್ವದಲ್ಲಿ ಶ್ರೀ ಕಾಳಿಕಾಂಬ ದೇವರ ಉತ್ಸವ ನಗರದ ರಾಜಬೀದಿಗಳಲ್ಲಿ ಸಾಗುತ್ತಿದೆ ಎಂದರು. ಇದಕ್ಕೆ ಮೊದಲು ಬೆಳಗಿನಿಂದ ರುದ್ರಹೋಮ, ಗುರುಹೋಮ, ವೆಂಕಟೇಶ್ವರ ಹೋಮ, ಆಂಜನೇಯ ಹೋಮ, ನವಗ್ರಹ ಹೋಮ, ಮಹಾಪೂಜೆ, ಆಚಾರ್ಯ ಪೂಜೆ, ದಂಪತಿ ಪೂಜೆ, ಪೂರ್ಣಾಹುತಿ ಎಲ್ಲಾವು ಗುರುಗಳ ಸಮಕ್ಷಮದಲ್ಲಿ ವೈದಿಕ ಫಲಮಂತ್ರಾಕ್ಷತೆ ವೈಧಿಕ ಸಂಭಾವನೆ, ಕರ್ಮಸಮಾಪ್ತಿ ನಂತರ ಮಹಾಪ್ರಸಾದ ನೆರವೇರಿದೆ ಎಂದು ಹೇಳಿದರು.

ಸಂಜೆ ಶ್ರೀಕಾಳಿಕಾಂಬ ದೇವಾಲಯದ ಲೋಕಾರ್ಪಣೆ ನೆರವೇರಿದೆ ಎಮದು ಮಾಹಿತಿ ನೀಡಿದರು. ರಥೋತ್ಸವದಲ್ಲಿ ನಾದಸ್ವರ, ಚಂಡೆವಾದ, ಡೋಲು, ವೀರಗಾಸೆ ಸೇರಿದಂತೆ ನಾನಾ ಸಾಂಸ್ಕೃತಿಕ ಕಲಾತಂಡಗಳು ಆಕರ್ಷಿಸಿದವು. ಇನ್ನು ಒಂದೆ ತರಹದ ವಸ್ತ್ರವನ್ನು ಮಹಿಳೆಯರು ಧರಿಸಿ ಮೆರವಣಿಗೆಯಲ್ಲಿ ಗಮನಸೆಳೆದರು.

ಇದೆ ವೇಳೆ ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡರಾದ ಗಿರೀಶ್ ಚನ್ನವೀರಪ್ಪ, ವಿಶ್ವಕರ್ಮ ಸಮಾಜದ ಅಧ್ಯಕ್ಷ ಹೆಚ್.ಬಿ. ಕುಮಾರಚಾರ್, ಶ್ರೀ ಕಾಳಿಕಾಂಬ-ಕಮಠೇಶ್ವರ ದೇವಾಲಯ ನವೀಕರಣ ಸಮಿತಿ ಅಧ್ಯಕ್ಷ ಎಚ್.ಕೆ.ಆನಂದಾಚಾರ್, ಉಪಾಧ್ಯಕ್ಷ ಎಚ್.ಎಚ್.ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಎಚ್.ವಿ.ಹರೀಶ್, ಮುಖಂಡರಾದ ಬ್ಯಾಟರಂಗಚಾರ್, ಕೇಶವಪ್ರಸಾದ್, ಅನಿಲ್ ಪದ್ಮನಾಬ್, ಹೆಚ್.ಕೆ. ಸತೀಶ್, ಶ್ರೀನಿವಾಸ್, ಗೋಪಾಲಚಾರ್, ಶ್ರೀಕಂಠಮೂರ್ತಿ, ಲೋಕೇಶ್, ಸುರೇಶ್, ಆನಂದ್, ನಾಗೇಶ್ ಮತ್ತು ಮೋಹನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *