ಸಕಲೇಶಪುರ: ತಾಲ್ಲೂಕಿನ ಹೊಸೂರು ನಲ್ಲಿ ಕಾಡೆಮ್ಮೆಯೊಂದನ್ನು ಮಾಂಸಕ್ಕಾಗಿ ಅಕ್ರಮವಾಗಿ ಕೋವಿಯಿಂದ ಶೂಟ್ ಮಾಡಿ ಮಾಂಸವನ್ನು ಸೇವಿಸಿದ ಪ್ರಕರಣದಲ್ಲಿ ಅರಣ್ಯ ಇಲಾಖೆ ತಂಡ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ತಾಲೂಕಿನ ಒಸೂರು ಎಸ್ಟೇಟ್ ಸಮೀಪ ಅಕ್ರಮವಾಗಿ ಕಾಡೆಮ್ಮೆಯೊಂದನ್ನು ಮಾಂಸಕ್ಕಾಗಿ ಬಂದೂಕಿನಿಂದ ಶೂಟ್ ಔಟ್ ಮಾಡಿ ಮಾಂಸ ಸೇವನೆ ಮಾಡುವಾಗ ಖಚಿತ ಮಾಹಿತಿ ಮೇರೆಗೆ ವಲಯ ಅರಣ್ಯಾಧಿಕಾರಿ ಶಿಲ್ಪಾ ನೇತೃತ್ವದ ತಂಡ ದಾಳಿ ನಡೆಸಿ ಕಾಡೆಮ್ಮೆಯ ಸುಮಾರು 10 ಕೆ.ಜಿಯಷ್ಟು ತಲೆ ಮಾಂಸ ಹಾಗೂ ಇತರ ಅಂಗಾಂಗಗಳನ್ನು ವಶ ಪಡಿಸಿಕೊಂಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಸೂರು ಎಸ್ಟೇಟ್‌ನ ಉಮೇಶ್, ರವಿ ಎಂಬುವರನ್ನು ಬಂಧಿಸಿದ್ದು ಮಧು, ಆಕಾಶ್, ಅಜೀಜ್, ಸೋಮಣ್ಣ, ಇಕ್ಕೀಲ್ ಎಂಬುವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಶಿಲ್ಪಾ, ಉಪ ವಲಯ ಅರಣ್ಯಾಧಿಕಾರಿಗಳಾದ ದಿನೇಶ್,ಮಹಾದೇವ್ ಅರಣ್ಯ ವೀಕ್ಷಕರಾದ ಲೋಕೇಶ್, ಯೋಗೇಶ್, ಅರುಣ್, ಸ್ಟೀವನ್, ಸಾಗರ್ ‘ಬಾಗಿಯಾಗಿದ್ದರು.