ಬೇಲೂರು.ಏಪ್ರಿಲ್,೧“ನಕಾರಾತ್ಮಕ ಅಲೋಚನೆಗಳು ಮನುಷ್ಯನ ಅವನತಿಗೆ ಮುನ್ನುಡಿ”

ಪೂಜ್ಯ ಶ್ರೀ ಶ್ರೀ ಶಂಭುನಾಥಸ್ವಾಮೀಜಿ.. ;-ಮನುಷ್ಯ ಜನ್ಮದಲ್ಲಿ ಹುಟ್ಟಿರುವುದು ನಮ್ಮಲ್ಲರ ಪುಣ್ಯದಫಲ, ಇಂತಹ ಸಂದರ್ಭದಲ್ಲಿ ಉತ್ತಮ ಕೆಲಸಕ್ಕ ಮಾತ್ರ ಒತ್ತು ನೀಡಬೇಕು. ಅದನ್ನು ಬಿಟ್ಟು ಸದಾ ದ್ವೇಷ, ಅಸೂಯೆ ಹಾಗೂ ನಕಾರಾತ್ಮಕ ಅಲೋಚನೆಗಳಿಂದ ಮನುಷ್ಯನ ಜೀವನವನ್ನು ಹಾಳು ಮಾಡಿಕೊಳ್ಳದೆ ಸಕಾರಾತ್ಮಕ ಅಲೋಚನೆಗಳಿಗೆ ಮಹತ್ವ ನೀಡಬೇಕು ಎಂದು ಅದಿಚುಂಚನಗಿರಿ ಹಾಸನ ಶಾಖಾ ಮಠದ ಪೂಜ್ಯರ ಶ್ರೀ ಶ್ರೀ ಶಂಭುನಾಥಸ್ವಾಮೀಜಿಗಳು ಹೇಳಿದರು.

ತಾಲ್ಲೂಕಿನ ಅರೇಹಳ್ಳಿ ಹೋಬಳಿ ನವಿಲಹಳ್ಳಿ ಗ್ರಾಮದ ನೂತನ ಶ್ರೀ ಅಂಜನೇಯಸ್ವಾಮಿ ದೇಗುಲ ಲೋಕಾರ್ಪಣೆ, ಪುನರ್ ಪ್ರಾಣ ಪ್ರತಿಷ್ಠಾಪನೆ ಮಹೋತ್ಸವ ಹಾಗೂ ವಿಮಾನ ಗೋಪುರ ಕಲಶಸ್ಥಾಪನೆ ಅಂಗವಾಗಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಅಧುನಿಕ ಕಾಲಘಟ್ಟದಲ್ಲಿ ಮನುಷ್ಯ ಎಲ್ಲಾ ಕ್ಷೇತ್ರದಲ್ಲಿ ಅದ್ವಿತೀಯವಾದ ಕೆಲಸವನ್ನು ಮಾಡುತ್ತಿರುವುದು ಸಂತೋಷ. ಆದರೆ ಇಲ್ಲ-ಸಲ್ಲದ ವಿಚಾರಗಳಿಗೆ ಮತ್ತು ಸಾಮರಸ್ಯವನ್ನು ಹಾಳುವ ಮಾಡುವ ವಿಚಾರಕ್ಕೆ ಮುನ್ನಣೆ ನೀಡಬಾರದು ಎಂದ ಅವರು ಮೊದಲು ಪೋಷಕರು ತಮ್ಮ ಮಕ್ಕಳಿಗೆ ಅಂಕಗಳಿಸುವ ಜೊತೆಗೆ ಸಂಸ್ಕಾರವನ್ನು ನೀಡುವ ಕಡೆ ಗಮನ ನೀಡಬೇಕಿದೆ.

ಅಂಕ ಉದ್ಯೋಗವನ್ನು ಮಾತ್ರ ನೀಡುತ್ತದೆ, ಸಂಸ್ಕಾರ ಜೀವನ ದರ್ಶನ ಮಾಡುತ್ತದೆ. ನಾಗಲೋಟದ ಜೀವನದಲ್ಲಿ ಮಾನವ ಒತ್ತಡದಿಂದ ಹೆಚ್ಚು ಹೆಚ್ಚು ಆನಾರೋಗ್ಯ ಸೇರಿದಂತೆ ಹೊಸ ಕಾಯಿಲೆಗಳಿಂದ ನರಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಮನಸ್ಸಿಗೆ ನೆಮ್ಮದಿ ಮತ್ತು ಶಾಂತಿ ನೀಡುವ ದೇಗುಲಗಳನ್ನು ಸ್ವಚ್ಛತೆಗೆ ಒತ್ತು ನೀಡಬೇಕಿದೆ. ಕೇವಲ ದೇಗುಲ ಕಟ್ಟಿದರೆ ಸಾಲದು ಅಲ್ಲಿ ಪ್ರತಿನಿತ್ಯ ಭಕ್ತಿಯ ಚಟುವಟಿಕಗಳಿಗೆ ನಡೆಸಬೇಕಿದೆ ಎಂದರು.

ಶಿವಪಥವರಿವಡೆ ಗುರುಪಥವೇ ಮೊದಲು ಎಂದು ಬಸವಣ್ಣವರು ಹೇಳಿದಂತೆ ಪ್ರತಿಯೊಬ್ಬರು ಕೂಡ ಗುರುವಿನ ಅನುಗ್ರಹಕ್ಕೆ ಪಾತ್ರರಾಗಬೇಕಿದೆ. ಗುರು ನಿಮಗೆ ಉತ್ತಮ ಸಮಾಜಕ್ಕೆ ಶ್ರೀಕಾರ ಹಾಕಲು ಸಹಕಾರಿಯಾಗುತ್ತನೆ. ಧರ್ಮ ಉಳಿದರೆ ಮಾತ್ರ ಭಕ್ತರು ಉಳಿಯಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ನವಿಲುಹಳ್ಳಿ ಗ್ರಾಮಸ್ಥರು ಸೇರಿ ಸುಂದರವಾದ ಶ್ರೀ ಅಂಜನೇಯಸ್ವಾಮಿ ದೇಗುಲ ನಿರ್ಮಿಸಿ ಇಂದು ಲೋಕಾರ್ಪಣೆ ನಡೆಸಿದ್ದು ನಮಗೆ ಅತೀವ ಸಂತೋಷ ಉಂಟು ಮಾಡಿದೆ ಎಂದು ಗ್ರಾಮಸ್ಥರ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.

ಈ ಸಂದರ್ಭದಲ್ಲಿ ಬೇಲೂರು ಶಾಸಕ ಹೆಚ್.ಕೆ.ಸುರೇಶ್, ಮಾಜಿ ಶಾಸಕ ಕೆ.ಎಸ್.ಲಿಂಗೇಶ್, ಹೆಚ್ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎ.ನಾಗರಾಜ್, ದೇಗುಲ ಸಮಿತಿ ಅಧ್ಯಕ್ಷ ಕುಮಾರ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಾಣಸವಳ್ಳಿ ಆಶ್ವಥ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಮಿತಶೆಟ್ಟಿ,ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಶಶಿಕುಮಾರ್ ಸೇರಿದಂತೆ ಇನ್ನು ಮುಂತಾದವರು ಹಾಜರಿದ್ದರು,

ನೂತನ ದೇಗುಲದ ಪೂಜಾಕೈಂಕರ್ಯವನ್ನು ವೇ,ಲಕ್ಷ್ಮಿನರಸಿಂಹಸ್ವಾಮಿ ಮತ್ತು ಜೈ ಮಾರುತಿ ಆಚಾರ್ಯ, ರಾಘವೇಂದ್ರ ಆಚಾರ್ಯ, ಮೋಹನ್ ಸ್ವಾಮಿ, ರವಿ ನಡೆಸಿಕೊಟ್ಟರು.

ಇದಕ್ಕೂ ಮೊದಲು ಗ್ರಾಮದ ಮುಖ್ಯ ದ್ವಾರದ ಬಳಿ ಪರಮಪೂಜೆ ಸ್ವಾಮೀಜಿ ಅವರನ್ನು ಪೂರ್ಣ ಕುಂಭಾ ಸ್ವಾಗತದೊಂದಿಗೆ ಗ್ರಾಮಕ್ಕೆ ಬರಮಾಡಿಕೊಳ್ಳಲಾಯಿತು ಬಂದಂತಹ ಸಾವಿರಾರು ಭಕ್ತರಿಗೆ ದಾಸೋಹದ ವ್ಯವಸ್ಥೆಯನ್ನು ಗ್ರಾಮಸ್ಥರು ನೆರವೇರಿಸಿದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *