ಹಾಸನ: ಲೋಕಸಭಾ ಚುನಾವಣೆ ಶುಕ್ರವಾರ ಶಾಂತಿಯುತವಾಗಿ ನಡೆಯಲೆಂದು ಪೂರ್ಣ ತಯಾರಿ ಮಾಡಿಕೊಂಡಿದ್ದರೇ ನಗರದ ಸಂತೇಪೇಟೆ ಸರಕಾರಿ ಪದವಿಪೂರ್ವ ಕಾಲೇಜು ಆವರಣದ ಮತಗಟ್ಟೆ ಸಂಖ್ಯೆ ೧೮೯ ರಲ್ಲಿ ಎರಡು ಬಾರಿ ಮತಯಂತ್ರ ಕೆಟ್ಟು ನಿಂತಿದೆ. ಇನ್ನು ಚಿಪ್ಪಿನಕಟ್ಟೆ ಭಾಗದ ಮತಯಂತ್ರ ಕೂಡ ಇದೆ ಸಮಸ್ಯೆ ಆಗಿ ಮತದಾರರು ಆಕ್ರೋಶವ್ಯಕ್ತಪಡಿಸಿ ವಾಪಸ್ ಹೋಗಿದ್ದಾರೆ.
ಏಪ್ರಿಲ್ ೨೬ರ ಶುಕ್ರವಾರದಂದು ಲೋಕಸಭಾ ಚುನಾವಣೆಯ ಮತದಾನ ಬೆಳಿಗ್ಗೆ ೭ ಗಂಟೆಗೆ ಪ್ರಾರಂಭವಾಗಿದ್ದು, ನಗರದ ಸಂತೇಪೇಟೆ, ವಲ್ಲಭಾಯಿ ರಸ್ತೆ ಬಳಿ ಇರುವ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ೧೮೯ ಮತಗಟ್ಟೆ ಸಂಖ್ಯೆಯಲ್ಲಿ ೭ ಗಂಟೆಯಲ್ಲಿ ಮತಯಂತ್ರ ಕೆಟ್ಟು ನಿಂತಿದೆ. ಒಂದು ಗಂಟೆಗಳ ಕಾಲ ಸರಿಯಾಗಲಿಲ್ಲ. ನಂತರ ಸರಿ ಮಾಡಲಾಗಿದೆ. ಇದಾದ ನಂತರ ಮದ್ಯಾಹ್ನ ಸುಮಾರು ೨ ಗಂಟೆಯ ಸಮಯದಲ್ಲಿ ಮತ್ತೆ ಮತಯಂತ್ರ ಕೈಕೊಟ್ಟಿದೆ. ಮತ್ತೊಮ್ಮೆ ಅದ್ನು ಸರಿಪಡಿಸಲಾಯಿತು.
ಬೆಳಗಿನಿಂದ ಎರಡು ಬಾರಿ ಒಂದೆ ಮತಗಟ್ಟೆಯಲ್ಲಿ ಮತಯಂತ್ರ ಕೈಕೊಟ್ಟಿದ್ದು, ಇದರಿಂದ ಸುಮಾರು ಎರಡು ಗಂಟೆಗಳ ಕಾಲ ಮತಯಂತ್ರ ಕೆಲಸ ಮಾಡಿರುವುದಿಲ್ಲ. ಬಿಸಿಲು ಇರುವುದರಿಂದ ನೆರಳಿನಲ್ಲಿ ನಿಲ್ಲಲು ಹೋದರೇ ಅರೆ ಮಿಲ್ಟ್ರಿ ಪಡೆ ಅವರನ್ನು ಹೊರಗೆ ತಳ್ಳಿದರು. ಬಿಸಿಲು ಇದೆ ನೆರಳಿನಲ್ಲಿ ಇರಲು ಅವಕಾಶ ಕೊಡಿ ಎಂದು ಕೇಳಿದರೂ ಅರೆ ಮಿಲ್ಟ್ರಿ ಪಡೆಯವರು ಕರುಣೆ ತೋರದೆ ಅಲ್ಲಿಂದ ಕಳುಹಿಸಲಾಯಿತು.
ಸರದಿ ಸಾಲಿನಲ್ಲಿ ನಿಂತ ಅನೇಕರು ಬಿಸಿಲಿನ ತಾಪ ತಾಳಲಾರದೇ ಮನೆಗೆ ವಾಪಸ್ ಹೋಗಬೇಕಾಯಿತು. ಎರಡು ಗಂಟೆಗಳ ಕಾಲ ಯಾವ ಮತದಾನ ಆಗದೆ ಇರುವುದರಿಂದ ಮತದಾನ ಮಾಡಲು ನಿಗದಿ ಸಮಯಕ್ಕಿಂತ ಹೆಚ್ಚಿನ ಸಮಯ ನೀಡುವಂತೆ ಸರದಿ ಸಾಲಿನಲ್ಲಿದ್ದವರು ಮನವಿ ಮಾಡಿದರು.
ಅಬ್ದೂಲ್ ಮುಜಾಮಿಲ್ ಮಾಧ್ಯಮದೊಂದಿಗೆ ಮಾತನಾಡಿ, ೨೮ನೇ ವಾರ್ಡ್ ಬೂತ್ ಸಂಖ್ಯೆ ೧೮೯ ರಲ್ಲಿ ಬೆಳಿಗ್ಗೆ ೭ ರಿಂದ ೮:೩೦ರ ವರೆಗೂ ಮತಯಂತ್ರ ಪ್ರಾಬ್ಲಂ ಆಗಿದ್ದು, ಇದನ್ನ ಸರಿಪಡಿಸಲು ಅಧಿಕಾರಿಗಳು ಕೂಡ ಬೇಗ ಬರಲಿಲ್ಲ. ನಂತರ ಬಂದು ದುರಸ್ತಿಪಡಿಸಿದರು.
ಈಗ ಮದ್ಯಾಹ್ನ ಮತ್ತೆ ಕೆಟ್ಟು ನಿಂತಿದೆ. ಈ ಬಗ್ಗೆ ಕರೆ ಮಾಡಿದರೂ ಯಾರು ಕೂಡ ಸ್ಪಂದಿಸುತ್ತಿಲ್ಲ. ಜನರು ಎಲ್ಲಾ ವಾಪಸ್ ಹೋಗುತ್ತಿದ್ದಾರೆ. ಬದಲಿ ವ್ಯವಸ್ಥೆ ತಕ್ಷಣ ಮಾಡಬೇಕು. ೩ರ ವರೆಗೂ ಶೇಕಡ ೪೩ ಪಸೇಂಟ್ ಮತದಾನವಾಗಿದೆ ಎಂದರು. ಸರದಿ ಸಾಲಿನಲ್ಲಿ ನಿಂತವರು ಬಿಸಿಲಿನ ತಾಪ ತಾಳಲಾರದೇ ವಾಪಸ್ ಮನೆಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.
ಮತದಾನ ನಮ್ಮ ಹಕ್ಕು ಎಂದು ಹೇಳುತ್ತಾರೆ. ಆದರೇ ಅಧಿಕಾರಿಗಳು ಈತರ ಲೇಸಿ ಮಾಡಿದರೇ ಸಾಮಾನ್ಯ ಜನರು ಏನು ಮಾಡಬೇಕು ಎಂದು ಪ್ರಶ್ನಿಸಿದರು. ನಿಗಧಿ ಸಮಯಕ್ಕಿಂತ ಒಂದು ಗಟೆಗಳ ಕಾಲ ಸಮಯ ನೀಡಬೇಕು. ಇಲ್ಲಿರುವ ಮಿಲ್ಟ್ರಿಯವರಿಗೆ ಕನ್ನಡ ಬರಲ್ಲ. ಹಿಂದಿ ಮಾತನಾಡುತ್ತಾರೆ. ನೆರಳಿಗಾಗಿ ಮೇಲೆ ಹೋದರೇ ದಬ್ಬಾಳಿಕೆ ಮಾಡಿ ನಮ್ಮನ್ನು ಬಿಸಿಲಿಗೆ ಕಳುಹಿಸುತ್ತಿದ್ದಾರೆ ಎಂದು ಆರೋಪಿಸಿದರು.
ಇನ್ನು ಚಿಪ್ಪಿನಕಟ್ಟೆಯಲ್ಲಿರುವ ಎರಡು ಬೂತ್ ಗಳಲ್ಲೂ ಇದೆ ಸಮಸ್ಯೆ. ಮತಯಂತ್ರ ನಿಂತು ಅನೇಕ ಸಮಯದ ನಂತರ ಸರಿಪಡಿಸಲಾಗಿದೆ. ಮತಯಂತ್ರದ ತೊಂದರೆ ಎಲ್ಲೆಲ್ಲಿ ಆಗಿದೆ ಆ ಭಾಗದಲ್ಲಿ ಹೆಚ್ಚಿನ ಸಮಯ ನೀಡಿ ಮತದಾನಕ್ಕೆ ಅವಕಾಶ ಮಾಡಿಕೊಡುವಂತೆ ಮತದಾರರ ಆಗ್ರಹವಾಗಿದೆ.