ಹಾಸನ: ಹೇಮಾವತಿ ನಗರದಲ್ಲಿರುವ ರಾಯಲ್ ಅಪೋಲೊ ಶಾಲೆಯಲ್ಲಿ ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ಮತ್ತು ಪತ್ನಿ ಜೊತೆ ಬಂದು ಮತದಾನ ಮಾಡಿದರು. ಪತ್ನಿ ಹೆಸರು ಮತದಾರರ ಪಟ್ಟಿಯಲ್ಲಿ ಹುಡುಕಲು ಪರದಾಡಿದ ಬಗ್ಗೆ ಶಾಸಕರು ಅಸಮಧಾನವ್ಯಕ್ತಪಡಿಸಿದರು.
ಮತದಾನ ಮಾಡಿದ ನಂತರ ಹೊರ ಭಾಗದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಬೆಳಿಗ್ಗೆ ೭ ಗಂಟೆಗೆ ನನ್ನ ಪತ್ನಿ ಜೊತೆ ಬಂದು ಮತದಾನ ಮಾಡಲಾಗಿದೆ. ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಜನರು ಒಲವು ತೋರಿದ್ದು, ಎಲ್ಲಾ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕು.
ಮತದಾನ ನಮ್ಮ ಹಕ್ಕು. ಯಾರು ಕೂಡ ಮತದಾನ ಮಾಡದೇ ಹೊರಗೆ ಉಳಿಯಬಾರದು ಎಂದು ಮನವಿ ಮಾಡಿದರು.
ಎನ್.ಡಿ.ಎ. ಅಭ್ಯರ್ಥಿ ಪ್ರಜ್ವಲ್ ರೇವಣ್ಣ ನೂರಕ್ಕೆ ನೂರು ಭಾಗ ಗೆಲುವು ಪಡೆಯುತ್ತಾರೆ ಎಂದು ವಿಶ್ವಾಸವ್ಯಕ್ತಪಡಿಸಿದರು.
ಇನ್ನು ರಾಜ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ಮೂರು ಕಡೆ ಸ್ಪರ್ದೆ ಮಾಡಲಾಗಿದ್ದು, ರಾಜ್ಯದಲ್ಲಿ ೨೮ ಸ್ಥಾನಕ್ಕೆ ೨೮ ಕೂಡ ಗೆಲ್ಲುತ್ತಾರೆ. ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಅಭಿವೃದ್ಧಿಯಿಂದ ನಮಗೆ ಪೂರಕವಾಗಿದೆ ಎಂದರು. ಹಾಸನ ಕ್ಷೇತ್ರದಲ್ಲಿ ೨೦ ಸಾವಿರ ಅಂತರದಲ್ಲಿ ಹೆಚ್ಚಿನ ಮತಗಳು ಸಿಗಲಿದೆ ಎಂದು ಹೇಳಿದರು.
ನನ್ನ ಕ್ಷೇತ್ರದಲ್ಲಿ ರಾಯಲ್ ಅಪೋಲೊ ಶಾಲೆ ಆವರಣದಲ್ಲಿ ನಾನು ಮತ್ತು ಪತ್ನಿ ಮತ ಹಾಕಲು ಬಂದಾಗ ಇಲ್ಲಿರುವ ನಾಲ್ಕು ಮತಗಟ್ಟೆಗಳಲ್ಲಿ ೮ ಗಂಟೆ ಆದರೂ ಇನ್ನೂ ಕೂಡ ಇಬ್ಬರೂ ಬಿ.ಎಲ್.ಓ.ಗಳು ಕರ್ತವ್ಯಕ್ಕೆ ಹಾಜರಾಗಿರುವುದಿಲ್ಲ. ಈ ಕಾರಣದಿಂದಲೇ ಸಲ್ಪ ಗೊಂದಲದ ವಾತವರಣ ಇಲ್ಲಿ ನಡೆದಿದೆ.
ಈಗಾಗಲೇ ನಾನು ಕರೆ ಮಾಡಿದ್ದು, ನಂತರ ಒಬ್ಬರೂ ಅಧಿಕಾರಿಗಳು ಬಂದಿದ್ದು, ಇನ್ನೊಬ್ಬರೂ ಬಂದಿಲ್ಲ. ಬೇರೆ ಮತಗಟ್ಟೆಗಳಲ್ಲೂ ಇದೆ ಪರಿಸ್ಥಿತಿ ಇರಬಹುದಾ ಎಂಬುದನ್ನು ತಿಳಿಯಲು ಜಿಲ್ಲಾಧಿಕಾರಿಗಳು ಪರಿಶೀಲನೆ ಮಾಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಯಸ್ಸಾದ ವೃದ್ಧರು ಬಂದಾಗಲೂ ಇದೆ ಪರಿಸ್ಥಿತಿ ಉಂಟಾಯಿತು. ಬಿಸಿಲಿನಲ್ಲಿ ನಿಂತಿದ್ದ ವೃದ್ಧರನ್ನು ಪೊಲೀಸರು ತಮ್ಮ ಛೇರ್ ನಲ್ಲಿ ಕೂರಿಸಿದ ಪ್ರಸಂಗ ನಡೆಯಿತು.