ಬೇಲೂರು : ಯಗಚಿ ಜಲಾಶಯದಿಂದ‌ ನೀರನ್ನು ಆಲೂರು ಮತ್ತು ಇನ್ನಿತರ ಭಾಗಗಳಿಗೆ ಹರಿಸುತ್ತಿರುವುದನ್ನು ಖಂಡಿಸಿ ಪ್ರಗತಿಪರ ಸಂಘಟನೆಗಳ ವತಿಯಿಂದ ಯಗಚಿ ಜಲಾಶಯದ ಮುಂಭಾಗದಲ್ಲಿ ಅಧಕಾರಿಗಳ ವಿರುದ್ಧ ಹಾಗೂ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಗತಿಪರ ಸಂಘಟನೆಗಳ ಅಧ್ಯಕ್ಷರಾದ ಕರವೇ ಚಂದ್ರಶೇಖರ್,ಜಯಕರ್ನಾಟಕ ರಾಜು,ಡಾ ರಾಜ್ ಸಂಘದ ತೀರ್ಥಂಕರ್ ಹಾಗೂ ಕರವೆ ಕಾರ್ಯದರ್ಶಿ ಖಾದರ್ ಮಾತನಾಡಿ ಈಗಾಗಲೇ ಬೇಲೂರು ತಾಲೂಕಿನಲ್ಲಿ ಇರುವ ಒಂದೆ ಜಲಾಶಯದಿಂದ ಬೇಲೂರು ಸೇರಿದಂತೆ ಹಾಸನ,ಹೊಳೆನರಸೀಪುರ, ಚಿಕ್ಕಮಗಳೂರು ತಾಲೂಕಿಗೆ ಕುಡಿಯಲು ನೀರನ್ನು ನೀಡುತ್ತಿದ್ದೇವೆ. ಆದರೆ ಮಳೆ ಇಲ್ಲದೆ ನಮ್ಮ ತಾಲೂಕಿನ ಜನರು ಹಾಗೂ ಪುರಸಭೆ ೨೩ ವಾರ್ಡ್ ನ ಜನರು ನೀರಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಈಗಾಗಲೇ ಎರಡು ದಿನಗಳಿಗೊಮ್ಮೆ ಕುಡಿಯಲು ನೀರು ನೀಡುತ್ತಿದ್ದಾರೆ.ಇದೇ ರೀತಿ ಬೇರೆ ತಾಲೂಕುಗಳಿಗೆ ಇದೇ ರೀತಿ ಕದ್ದು ಮುಚ್ಚಿ ನೀರನ್ನು ನೀಡಿದರೆ ಕುಡಿಯಲು ನೀರು ಇರುವುದಿಲ್ಲ ಹಾಗೂ ತೊಳೆಯಲು ನೀರಿರುವುದಿಲ್ಲ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಚಾನಲ್ ಮೂಲಕ ಆಲೂರು ಪಟ್ಟಣಕ್ಕೆ ನೀರನ್ನು ಹರಿಸುತ್ತಿರುವುದನ್ನು ನಿಲ್ಲಿಸಬೇಕು .

೧೫ ದಿನಗಳ ಕಾಲ ನೀರನ್ನು ಬಿಡಲು ಅಧಿಕಾರಿಗಳು ನಿರ್ಧರಿಸಿದ್ದು ಇದರಿಂದ. ೦.೦೩೦ ಟಿಎಂಸಿ ನೀರನ್ನು ಹರಿಸಿದರೆ ಪಟ್ಟಣದ ಜನತೆಗೆ ಕುಡಿಯಲು ನೀರಿಲ್ಲದ ಪರಿಸ್ಥಿತಿ ಉಂಟಾಗುತ್ತದೆ.ಇನ್ನೆರಡು ದಿನಗಳಲ್ಲಿ ಪರಿಸ್ಥಿತಿಯನ್ನು ಅಧಿಕಾರಿಗಳಿಗೆ ನೀರು ಹರಿಸುವುದನ್ನು ನಿಲ್ಲಿಸದಿದ್ದರೆ ಅಹೋರಾತ್ರಿ ಧರಣಿ ನಡೆಸಲಾಗುವುದು ಹಾಗೂ ಬೇಲೂರು ಬಂದ್ ಕರೆದು ಎಲ್ಲಾ ಸಂಘಟನೆಗಳ ಜೊತೆಯಲ್ಲಿ ಉಗ್ರರೀತಿಯಲ್ಲಿ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದರು.

ನಂತರ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಯಗಚಿ ಜಲಾಶಯದ ಅಧಿಕಾರಿಗಳಾದ ಪುನೀತ್ ಹಾಗೂ ಶಿವಕುಮಾರ್ ಸಂಘಟನೆ ಪ್ರಮುಖರಿಗೆ ಮಾಹಿತಿ ತಿಳಿಸಿ ಮಾತನಾಡಿ ಯಗಚಿ ಜಲಾಶಯದಲ್ಲಿ ಈಗಾಗಲೇ ಕುಡಿಯುವ ನೀರಿಗಾಗಿ ಮಾತ್ರ ನೀತನ್ನು ಶೇಕರಿಸಲಾಗಿದ್ದು ಸರ್ಕಾರದ ಆದೇಶದಂತೆ ಮೇಲಾಧಿಕಾರಿಗಳ ಸೂಚನೆಯಂತೆ ಆಲೂರು ಪಟ್ಟಣಕ್ಕೆ ಕುಡಿಯುವ ನೀರಿಗಾಗಿ ನೀರನ್ನು ೦.೦೩೦ ಕ್ಯೂ ಸೆಕ್ಸ್ ನೀರನ್ನು ಬಿಡಲಾಗುತ್ತಿದೆ.

ನಮಗೆ ೨೪ ರಿಂದ ೮ ನೇ ತಾರೀಕಿನವರೆಗೂ ನೀರನ್ನು ಹರಿಸಲು ನಮಗೆ ಆದೇಶ ನೀಡಿದ್ದಾರೆ.ನಮಗೆ ಇಲ್ಲಿ ೧.೦೧ ಟಿಎಂಸಿ ನೀರು ಕುಡಿಯಲು ಯೋಗ್ಯವಾಗಿದ್ದು ಇನ್ನು ಉಳಿದಿರುವ ೧.೦೫ ಟಿಎಂಸಿ ನೀರು ಡಸ್ಟ್ ಸ್ಟೋರೇಜ್ ನಲ್ಲಿದ್ದು ಇದರಿಂದ ನಮ್ಮ ತಾಲೂಕಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಅದಕ್ಕಾಗಿ ಸ್ವಲ್ಪ ಪ್ರಮಾಣದಲ್ಲಿ ಮಾತ್ರ ನೀರನ್ನು ಚಾನಲ್ ಮೂಲಕ ಆಲೂರು ಪಟ್ಟಣಕ್ಕೆ ಹರಿಸುತ್ತಿದ್ದೇವೆ.

ನಾವು ಯಾವುದೇ ಕಾರಣಕ್ಕೂ ರೈತರು ತಮ್ಮ ಬೆಳೆಗಳಿಗೆ ಚಾನಲ್ ಹಾಗೂ ನದಿಪಾತ್ರದಿಂದ ತಮ್ಮ ಜಮೀನುಗಳಿಗೆ ಹಾಯಿಸದಂತೆ ಸೂಚನೆ ನೀಡಲಾಗಿದೆ.

ಬೇಲೂರು ಹಾಗೂ ಆಲೂರು ತಾಲೂಕು ಬರಪೀಡಿತ ಪ್ರದೇಶವೆಂದು ಘೋಷಣೆಯಾಗಿರುವುದರಿಂದ ಸರ್ಕಾರದ ಆದೇಶವನ್ನು ಪಾಲನೆ ಮಾಡುತ್ತಿದ್ದು ಕುಡಿಯುವ ನೀರಿಗೆ ಯಾವುದೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಕರವೇ ಮುಖಂಡರಾದ ಮಾಳೆಗೆರೆ ತಾರನಾಥ್, ಮೋಹನ್,ಪ್ರಸನ್ನ, ಹನೀಫ್,ಆಟೋ ಚಾಲಕ ಸಂಘದ ಅಧ್ಯಕ್ಷ ದೀಪು,ಮಂಜು,ಪುಟ್ಟರಾಜು,ಸ್ವಾಮಿ ಹಾಗು ಪುರಸಭೆ ಸದಸ್ಯರು ಹಾಜರಿದ್ದರು.

ಯಾವುದೆ ರೀತಿಯಲ್ಲಿ ಅಹಿತಕರ ಘಟನೆ ನಡೆಯದಂತೆ ಬೇಲೂರು ವೃತ್ತನಿರೀಕ್ಷಕ ಸುಬ್ರಹ್ಮಣ್ಯ ನೇತೃತ್ವದಲ್ಲಿ ಭಿಗಿ ಬಂದೋಬಸ್ತ್ ಮಾಡಲಾಗಿತ್ತು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed