ಬೇಲೂರು.ಏಪ್ರಿಲ್.೨೯“ನಾಗರೀಕತೆ ಸಮಾಜದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಶೋಚನೀಯ” ;-ಪಂಷ್ಪಗಿರಿ ಜಗದ್ಗುರುಗಳು ಬೇಸರ ;- ಅಧುನಿಕ ಸಮಾಜದಲ್ಲಿ ಸ್ತ್ರೀ ಎಲ್ಲಾ ಕ್ಷೇತ್ರದಲ್ಲಿ ತನ್ನದೆಯಾದ ಛಾಪು ಮೂಡಿಸಿದರೂ ಕೂಡ ನಾಗರೀಕ ಸಮಾಜದಲ್ಲಿ ಇಂದಿಗೂ ಮಹಿಳೆಯರ ಮೇಲೆ ದೌರ್ಜನ್ಯ, ದಬ್ಬಾಳಿಕೆ ಮತ್ತು ಶೋಷಣೆ ನಡೆಯುತ್ತಿರುವುದು ನಿಜಕ್ಕೂ ಶೋಚನೀಯವಾಗಿದೆ

ಪುಷ್ಪಗಿರಿ ಮಹಾಸಂಸ್ಥಾನ ಮಠದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮೀಜಿಗಳು ತಿಳಿಸಿದರು.

ತಾಲ್ಲೂಕಿನ ಹಳೇಬೀಡು ಸಮೀಪದ ಪುಷ್ಪಗಿರಿ ಮಹಾಸಂಸ್ಥಾನ ಮಠದಲ್ಲಿ ಶ್ರೀಕ್ಷೇತ್ರ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ಹಾವೇರಿ ಜಿಲ್ಲೆ ಮಹಿಳಾ ಸದಸ್ಯರಿಗೆ ನಡೆದ ಮೂರು ದಿನದ ಕಾರ್ಯಾಗಾರ ಸಮಾರಂಭ ಉದ್ಘಾಟನೆ ನಡೆಸಿ ಮಾತನಾಡಿದ ಅವರು ೧೨ ನೇ ಶತಮಾನದಲ್ಲಿ ಹೆಣ್ಣಿಗೆ ದೈವ ಸ್ವರೂಪವನ್ನು ನೀಡುವ ಮೂಲಕ ಪೂಜ್ಯನೀಯವಾದ ಸ್ಥಾನ ನೀಡಿದ ಭಾರತದಂತಹ ದೇಶದಲ್ಲಿ ಹೆಣ್ಣು ಮಕ್ಕಳ ಮೇಲಿನ ಶೋಷಣೆಯನ್ನು ಸರ್ವರೂ ಕೂಡ ಖಂಡಿಸುವ ಮೂಲಕ ಸಂಬಂಧ ಪಟ್ಟ ಸರ್ಕಾರಗಳು ಕಠಿಣ ಕ್ರಮಗಳನ್ನು ಜಾರಿಗೊಳಿಸಬೇಕಿದೆ ಎಂದ ಅವರು

ಮಹಿಳೆಯರ ಸಬಲೀಕರಣದ ಉದ್ದೇಶದಿಂದಲೇ ನಾವುಗಳು ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯನ್ನು ೨೦೨೦ ರಲ್ಲಿ ಸ್ಥಾಪನೆ ಮಾಡಲಾಗಿದ್ದು, ರಾಜ್ಯದಲ್ಲಿ ಸಾವಿರಾರು ಮಹಿಳಾ ಸ್ವಸಹಾಯ ಸಂಘಗಳನ್ನು ಸ್ಥಾಪಿಸಿ ಸಂಘದ ಸದಸ್ಯರಿಗೆ ಸ್ವ-ಉದ್ಯೋಗ ಪರಿಕಲ್ಪನೆ ಅಡಿಯಲ್ಲಿ ಕೌಶಲ್ಯ ತರಬೇತಿ, ಬದುಕಿನ ಶಿಕ್ಷಣ,ಯೋಗ , ಆರೋಗ್ಯ, ಆಹಾರ ಪದ್ದತಿಯ ಬಗ್ಗೆ ಶಿಕ್ಷಣ ನೀಡುವ ದಿಸೆಯಲ್ಲಿ ಮಹಿಳಾ ಸಂಘದ ಸದಸ್ಯರಿಗೆ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ.

ಈಗಾಗಲೇ ಹಾಸನ ಜಿಲ್ಲೆಯ ಸದಸ್ಯರಿಗೆ ನಡೆದ ಮೂರು ದಿನದ ಕಾರ್ಯಾಗಾರ ಯಶಸ್ವಿಯಾದ ಬಳಿಕ ಹಾವೇರಿ ಜಿಲ್ಲೆಯ ಸದಸ್ಯರಿಗೆ ಇಂದು ಮೂರು ದಿನದ ಕಾರ್ಯಾಗಾರ ನಡೆಸಿದ್ದು, ಮುಂದಿನ ದಿನದಲ್ಲಿ ದಾವಣಿಗೆರೆ ಜಿಲ್ಲೆಗೆ ಸದ್ಯದಲ್ಲಿಯೇ ಕಾರ್ಯಾಗಾರ ನಡೆಸು ಇಂಗಿತವನ್ನು ವ್ಯಕ್ತ ಪಡಿಸಿದರು. ಈ ಮೂರು ದಿನದ ಕಾರ್ಯಾಗಾರದಲ್ಲಿನ ವಿಷಯಗಳನ್ನು ಸದಸ್ಯರಿಗೆ ಸದ್ಬಳಿಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ಪುಷ್ಪಗಿರಿ ಮಹಾಸಂಸ್ಥಾನದ ಕಾರ್ಯದರ್ಶಿ ಗ್ರಾನೈಟ್ ರಾಜಶೇಖರ್ ಮಾತನಾಡಿ, ರಾಜ್ಯದಲ್ಲಿ ಐದು ಸಾವಿರಕ್ಕೂ ಹೆಚ್ಚಿನ ಮಠ-ಮಾನ್ಯಗಳು ಇಂದಿಗೂ ತ್ರಿವಿದ ದಾಸೋಹ ನಡೆಸುತ್ತಾ ಬಂದಿದೆ. ಆದರೆ ಪುಷ್ಪಗಿರಿ ಜಗದ್ಗುರುಗಳು ತ್ರಿವಿದ ದಾಸೋಹದ ಜೊತೆಗೆ ಮಹಿಳಾ ಸಬಲೀಕರಣಕ್ಕೆ ಎಂದೇ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯನ್ನು ಸ್ಥಾಪಿಸಿ,ಹಣಕಾಸು ವಹಿವಾಟು ಜೊತೆಗೆ ಅವರಿಗೆ ಜೀವನದ ಮೌಲ್ಯಯುಕ್ತ ಶಿಕ್ಷಣ ನೀಡುತ್ತಾ ಬಂದಿದ್ದಾರೆ. ಒಂದು ಜಾತಿ,ಧರ್ಮ,ವರ್ಗಕ್ಕೆ ಸೀಮಿತವಾಗದೆ ಸರ್ವರನ್ನು ಅಪ್ಪಿಕೊಳ್ಳುವ ಪುಷ್ಪಗಿರಿ ಮಹಾಸಂಸ್ಥಾನ ಮುಂದಿನ ದಿನದಲ್ಲಿ ಇನ್ನು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಹಳೇಬೀಡು ಗ್ರಾಮ ಪಂಚಾಯಿತಿ ಅಧ್ಯಕ್ಷ ನಿತ್ಯನಾಂದ್, ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಕಾರ್ಯನಿರ್ವಾಃಹಕ ನಿರ್ದೇಶಕ ನಾಗಯ್ಯ, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲಾ ಯೋಜನಾಧಿಕಾರಿ ವಿನುತಧನಂಜಯ್, ಬೇಲೂರು ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಬ್ಬಾಳು ಹಾಲಪ್ಪ, ಮಠದ ಭಕ್ತರಾದ ಸಿದ್ದಾಪುರ ಗುರುವಣ್ಣ ಹಾಜರಿದ್ದ ಕಾರ್ಯಕ್ರಮದಲ್ಲಿ ಪುಷ್ಪಗಿರಿ ಕಲಾ ತಂಡ ಚಂದನ್ ಕುಮಾರ್ ಸುಗಮ ಸಂಗೀತ ನಡೆಸಿಕೊಟ್ಟರು.

ಬಾಕ್ಸ್ ನ್ಯೂಸ್ : ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಈಗಾಗಲೇ ರಾಜ್ಯದ ಹತ್ತು ಜಿಲ್ಲೆಯಲ್ಲಿ ಸಾವಿರಾರು ಸಂಘ ಸ್ಥಾಪನೆಯಾಗಿದೆ. ಸದ್ಯ ಹಾಸನ,ಹಾವೇರಿ,ಶಿವಮೊಗ್ಗ ಜಿಲ್ಲೆಯಲ್ಲಿ ಬೃಹತ್ ಮಹಿಳಾ ಸಮಾವೇಶದಲ್ಲಿ ನಡೆಸಿದೆ. ವಿಶೇಷವಾಗಿ ಸಾಲ ಸೌಲಭ್ಯ, ಕೌಶಲ್ಯತರಬೇತಿ, ಸ್ವ ಉದ್ಯೋಗ, ಗೃಹ ಉತ್ಪನ್ನಗಳ ತಯಾರಿಕೆಗೆ ಪರಮಪೂಜ್ಯ ಪುಷ್ಪಗಿರಿ ಜಗದ್ಗುರುಗಳು ಸಹಕಾರ ನೀಡುತ್ತಾ ಬಂದಿದ್ದಾರೆ ಎಂದು ಬೇಲೂರು ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಬ್ಬಾಳು ಹಾಲಪ್ಪ ತಿಳಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *