ಆಲೂರು : ಆಲೂರು ರಸ್ತೆ ಬದಿಯಲ್ಲಿ ರಾಶಿ ರಾಶಿ ಕಸ : ಸಂಕ್ರಾಮಿಕ ರೋಗದ ಭಯದಲ್ಲಿ ನಾಗರೀಕರು
ಕಣ್ಣುಮುಚ್ಚಿ ಕುಳಿತ ಪಟ್ಟಣ ಪಂಚಾಯಿತಿ ಅಧಿಕಾರಿಗಳು
ಸ್ವಚ್ಚತೆಯೇ ಜೀವನಮಾಲಿನ್ಯವೆ ಮರಣ
ಕೊಳಕು ಇದ್ದಲ್ಲಿ ನರಕ ಸ್ವಚ್ಛತೆಯೇ ಸ್ವರ್ಗ
ಸ್ವಚ್ಛ ಸುಂದರ ಹಾಗೂ ಸ್ಮಾರ್ಟ್ ಸಿಟಿ ಕನಸು ಕಾಣುತ್ತಿರುವ ಅಧಿಕಾರಿಗಳು ಪಟ್ಟಣದಲ್ಲಿ ಕಸ ವಿಲೇವಾರಿ ಮಾಡುವುದನ್ನು ಮರೆತಂತೆ ಕಾಣುತ್ತಿದೆ ಪರಿಣಾಮ ಪಟ್ಟಣದಲ್ಲಿ ತ್ಯಾಜ್ಯ ವಿಲೇವಾರಿಯಾಗದೆ ರಸ್ತೆ ಯುದ್ಧಕ್ಕೂ ಕಸದ ರಾಶಿ ರಾರಾಜಿಸುತ್ತಿದೆ .
ಆಲೂರು, ಕೊನೆಪೇಟೆ ಬಿಕ್ಕೋಡು ಮುಖ್ಯ ರಸ್ತೆಯ ಬಳಿ ಜನರು ಕಸ ಮತ್ತು ಪ್ಲಾಸ್ಟಿಕ್ ಹಾಗೂ ಚೀಲದಲ್ಲಿ ಕಸ ತಂದು ಹಾಕುತ್ತಿದ್ದು ಸಮಸ್ಯೆ ತಲೆದೋರಿದೆ, ಮುಖ್ಯರಸ್ತೆ ಬದಿಯಲ್ಲಿ ಪ್ಲಾಸ್ಟಿಕ್ ಮತ್ತು ಗೋಣಿ ಚೀಲಗಳಲ್ಲಿ ತುಂಬಿದ ಕಸ ಹಾಗೂ ಎಸೆಯುವ ತರಕಾರಿಗಳು ಕೊಳೆತು ನಾರುತಿದ್ದು ನಾಯಿಗಳು ರಸ್ತೆಗೆ ಎಳೆದು ತಂದು ತಿನ್ನುತ್ತಿವೆ, ಇದರಿಂದ ಸುತ್ತಮುತ್ತಲಿನ ಪರಿಸರ ದುರ್ವಾಸನೆಯಿಂದ ಕೂಡಿದ್ದು ವಾಹನಸವಾರರು ಸಾರ್ವಜನಿಕರು ಹಾಗೂ ನಾಗರೀಕರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದ್ದು, ಕಸ ತ್ಯಾಜ್ಯ ಒಟ್ಟಾಗಿ ಕೊಳೆತು ದುರ್ವಾಸನೆ ಬೀರುತ್ತಿದ್ದು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.
ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರತಿ ಬಡಾವಣೆಯಲ್ಲಿ ಮನೆ ಮನೆಗೆ ಹೋಗಿ ಕಸ ಸಂಗ್ರಹಿಸುವ ವಾಹನ ವ್ಯವಸ್ಥೆ ಇದ್ದರೂ ನಾಗರೀಕರು ಮಾತ್ರ ರಸ್ತೆ ಬದಿಯಲ್ಲಿ ಕಸ ತ್ಯಾಜ್ಯ ಸುರಿಯುತ್ತಿರುವುದು ಬೇಸರದ ಸಂಗತಿ, ಪ್ರಧಾನಮಂತ್ರಿಯವರ ಸ್ವಚ್ಛ ಭಾರತ ಪರಿಕಲ್ಪನೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡದೆ ರಸ್ತೆ ಬದಿ ಕಸ ಹಾಕಬಾರದೆಂಬ ಮನವಿಗೆ ಕಿವಿಕೊಡದ ಪ್ರಜ್ಞಾವಂತ ಸುಶಿಕ್ಷಿತ ನಾಗರೀಕರು ಕಸ ಎಸೆಯುತ್ತಿದ್ದಾರೆ.
ಇದರಿಂದ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದ್ದು ಸ್ವಚ್ಛತೆಯನ್ನು ಕಾಪಾಡುವಲ್ಲಿ ಸಾರ್ವಜನಿಕರ ಹಾಗೂ ಗ್ರಾಮಸ್ಥರ ಸಹಕಾರ ಅತಿ ಅಗತ್ಯವಾಗಿದೆ, ತ್ಯಾಜ್ಯ ವಿಲೇವಾರಿ ಲೋಪ ಪ್ರತಿ ವರ್ಷ ಪಟ್ಟಣ ಪಂಚಾಯಿತಿ ಕಸ ವಿಲೇವಾರಿ ಗಾಗಿ ಲಕ್ಷಗಟ್ಟಲೆ ಹಣ ವ್ಯಯ ಮಾಡಲಾಗುತ್ತಿದೆ ಎನ್ನುವ ಅಧಿಕಾರಿಗಳು ಬಿಡುಗಡೆಯಾದ ಅನುದಾನ ಸರಿಯಾಗಿ ಬಳಕೆಯಾಗುತ್ತಿದೆಯೇ ಎಂಬ ಬಗ್ಗೆ ಗಮನಹರಿಸುತ್ತಿಲ್ಲ ಅಧಿಕಾರಿಗಳ ಕರ್ತವ್ಯ ಲೋಪದಿಂದ ದಿನೇ ದಿನೇ ಕಸದ ಸಮಸ್ಯೆ ದ್ವಿಗುಣಗೊಳ್ಳುತ್ತಿದೆ ಪರಿಣಾಮ ಸ್ಮಾರ್ಟ್ ಸಿಟಿಯ ಕನಸು ಇನ್ನೂ ಕಗ್ಗಂಟಾಗುತ್ತಿದೆ
ಈ ಬಗ್ಗೆ ಮೇಲಾಧಿಕಾರಿಗಳು ಶೀಘ್ರ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ,
ಜನರ ಅರೋಗ್ಯಕಿಲ್ಲ ರಕ್ಷಣೆ : ಪಟ್ಟಣದ ನಾನಾ ಬಡಾವಣೆಯ ರಸ್ತೆ ಬದಿಗಳಲ್ಲಿ ಖಾಲಿ ಇರುವ ಜಾಗಗಳು ಕಸ ಹಾಕುವ ತಾಣಗಳಾಗಿ ಮಾರ್ಪಟ್ಟಿವೆ ಅಲ್ಲದೇ ಅನೇಕ ಸಮಸ್ಯೆಗಳನ್ನು ಸೃಷ್ಟಿ ಮಾಡುತ್ತಿದೆ ಕಸ ಹಾಕುವುದರಿಂದ ಅದು ಅಲ್ಲೇ ಕೊಳೆತು ದುರ್ವಾಸನೆ ಉಂಟಾಗುತ್ತಿದೆ ಇದರಿಂದ ಅಕ್ಕಪಕ್ಕದ ನಿವಾಸಿಗಳ ಅರೋಗ್ಯದ ಮೇಲೆ ವಿಪರೀತ ಪರಿಣಾಮ ಬಿರುತ್ತಿದೆ, ಅಲ್ಲದೇ ರಸ್ತೆ ಬದಿಯಲ್ಲಿ ಕಸ ಹಾಕುತ್ತಿರುವುದರಿಂದ ತ್ಯಾಜ್ಯವೆಲ್ಲಾ ರಸ್ತೆಗೆ ಬರುತ್ತಿದೆ ಈ ಬಗ್ಗೆ ಸೂಕ್ತ ಕ್ರಮ ಕೈ ಗೊಳ್ಳುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ ಎನ್ನುವುದು ಸಾರ್ವಜನಿಕರ ಆರೋಪ,
ಪಟ್ಟಣ ಪಂಚಾಯಿತಿ ಅಧಿಕಾರಿಗಳು ಶೀಘ್ರವೆ ಎತ್ತೇಚ್ಚುಕೊಂಡು ಕಸ ವಿಲೇವಾರಿ ನಿರ್ವಹಣೆಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
ಆ ಮೂಲಕ ಪಟ್ಟಣದ ಸ್ವಚ್ಛತೆ ಸೌಂದರ್ಯ ಕಾಪಾಡುವ ಮೂಲಕ ಪಟ್ಟಣದಲ್ಲಿ ಅರೋಗ್ಯಕರ ವಾತಾವರಣ ನಿರ್ಮಾಣಕ್ಕೆ ಆದ್ಯತೆ ನೀಡಬೇಕಿದೆ.
ಜನತೆ ತ್ಯಾಜ್ಯವನ್ನು ಎಲ್ಲಂದರೆ ಬಿಸಾಡದೇ ಪಟ್ಟಣ ಪಂಚಾಯಿತಿಯಿಂದ ನಿಯೋಜಿಸಿರುವ ಆಟೋ, ಟಿಪ್ಪರ್, ಗಳಿಗೆ ಹಾಕಬೇಕು ಈ ಮೂಲಕ ನಗರವನ್ನು ಸ್ವಚ್ಛ, ಸುಂದರ ಹಾಗೂ ಉತ್ತಮ ಆರೋಗ್ಯಕರ ವಾತಾವರಣ ನಿರ್ಮಾಣ ಮಾಡಲು ನಾಗರೀಕರು ಕೈಜೋಡಿಸಬೇಕು ,,ರಸ್ತೆ ಬದಿಯಲ್ಲಿ ಸ್ವಲ್ಪ ಖಾಲಿ ಪ್ರದೇಶ ಇದ್ದರೆ ಸಾಕು ಸಾರ್ವಜನಿಕರು ಕಸ ಸುರಿಯುತ್ತಿದ್ದಾರೆ ಜೊತೆಗೆ ಪ್ಲಾಸ್ಟಿಕ್ ಕವರ್ ನಲ್ಲಿ ಕಟ್ಟಿ ಕಸವನ್ನು ಸುರಿಯುತ್ತಿದ್ದಾರೆ ಇದರಿಂದ ಪಟ್ಟಣದಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಾಗುತ್ತಿದೆ,
ಪಟ್ಟಣ ಪಂಚಾಯಿತಿ ನಿಯೋಜಸಿರುವ ಆಟೋ, ಟಿಪ್ಪರ್ ಗಳು ಪ್ರತಿನಿತ್ಯ ಸಮರ್ಪಕವಾಗಿ ಕಸ ನಿರ್ವಹಣೆ ಮಾಡುತ್ತಿದ್ದರು ನಗರದ ಪಟ್ಟಣದ ರಸ್ತೆಗಳ ಅಕ್ಕಪಕ್ಕದಲ್ಲಿ ಇಷ್ಟೊಂದು ಕಸ ಹೇಗೆ ಬರುತ್ತದೆ ಎಂಬುದು ಸಾರ್ವಜನಿಕರ ವಾದ ಹಾಗೂ ರಾಶಿ ರಾಶಿ ಕಸವನ್ನು ಇಲ್ಲಿ ಯಾರು ತಂದು ಸುರಿಯುತ್ತಾರೆ ಎಂಬುದು ನಾಗರೀಕರ ಪ್ರಶ್ನೆ…..?
ಇನ್ನೂ ಪಟ್ಟಣ ಪಂಚಾಯಿತಿಯವರು ಅನೇಕ ಬಾರಿ ಈ ಕಸವನ್ನು ವಿಲೇವಾರಿ ಮಾಡಿದರು ಕೂಡ ದಿನದಿಂದ ದಿನಕ್ಕೆ ಕಸದರಾಶಿ ದ್ವೀಗುಣಗೊಳ್ಳುತ್ತಿದೆ,, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಅಲ್ಲದೆ ಆಟೋ ಟಿಪ್ಪರ್ ಗಳಲ್ಲಿ ಧ್ವನಿ ವರ್ಧಕ ಮೂಲಕ ಜನರಿಗೆ ಎಷ್ಟೇ ಮಾಹಿತಿ ನೀಡಿದರು ಯಾವುದೇ ಪ್ರಯೋಜನವಾಗುತ್ತಿಲ್ಲ,,
ಸ್ವಚ್ಛತೆಯೇ ಜೀವನ … ಮಾಲಿನ್ಯವೇ ಮರಣ.. ಕೊಳಕು ಇದ್ದಲ್ಲಿ ನರಕ ಸ್ವಚ್ಛತೆಯಲ್ಲಿ ಸ್ವರ್ಗ ಎಂಬ ಮಾತುಗಳು ಕೇಳುವುದಕ್ಕೆ ಮಾತ್ರ ಚಂದ ಅದನ್ನು ಕಾರ್ಯರೂಪಕ್ಕೆ ರೂಡಿಸಿಕೊಳ್ಳುವುದು ಹಗಲು ಗನಸು ಏನಿಸುತ್ತಿದೆ.,,
ಮುಂದಾದರು ಕಸವನ್ನು ರಸ್ತೆ ಬದಿ ಬಿಸಾಡದೆ ಆಟೋ ಟಿಪ್ಪರ್ ಗಳಿಗೆ ನೀಡಿ ಸ್ವಚ್ಛತೆಯನ್ನು ಕಾಪಾಡಬೇಕೆಂಬುದು ಎಲ್ಲರ ಆಶಯ ಹಾಗೂ ಸಾರ್ವಜನಿಕರ ಆರೋಗ್ಯದ ಹಿತ ದೃಷ್ಟಿಯಿಂದ ಕೂಡಲೇ ಕಸವನ್ನು ವಿಲೇವಾರಿ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.