
ಶ್ರೀ ಅಧಿಶಕ್ತಿ ದೇವಿರಮ್ಮನವರ ದೇವಸ್ಥಾನ ಸಮಿತಿ ಉದೇವಾರ, ಸಕಲೇಶಪುರ ತಾಲ್ಲೂಕು, ಹಾಸನ ಜಿಲ್ಲೆ. 573 127. ಸುಗ್ಗಿ ಮಹೋತ್ಸವ ಆಹ್ವಾನ ಪತ್ರಿಕೆ
ಸ್ವಸ್ತಿ ಶ್ರೀ ಕ್ರೋಧಿನಾಮ ಸಂವತ್ಸರೇ ಉತ್ತರಾಯಣೇ ವಸಂತ ಋತು ಚೈತ್ರಮಾಸ ಕೃಷ್ಣಪಕ್ಷ ದಂದು ಶ್ರೀ ಆಧಿಶಕ್ತಿ ದೇವಿರಮ್ಮನವರ ಸುಗ್ಗಿ ಉತ್ಸವದ ಪ್ರಾರಂಭ ದಿನಾಂಕ : 03-05-2024ನೇ ಶುಕ್ರವಾರ ದಂದು ಸಂಜೆ ದಶಮಿ ಉತ್ತರಾಬಾದ್ರ ನಕ್ಷತ್ರ ದಂದು ಮಾರಿಯಮ್ಮನವರ ಪೂಜಾ ಕಾರ್ಯಕ್ರಮದಿಂದ ಪ್ರಾರಂಭಗೊಂಡು ದಿನಾಂಕ : 14-05-2024ನೇ ಮಂಗಳವಾರದ ವರೆಗೆ ಹಣ್ಣು-ಕಾಯಿ, ಪ್ರಸಾದ ವಿನಿಯೋಗ ಮತ್ತು ಮಹಾಮಂಗಳಾರತಿಯೊಂದಿಗೆ ಶ್ರೀ ಆಧಿಶಕ್ತಿ ದೇವಿರಮ್ಮನವರ ಸನ್ನಿಧಿಯಲ್ಲಿ ಸುಗ್ಗಿ ಮಹೋತ್ಸವವನ್ನು ನಡೆಸಲು ತೀರ್ಮಾನಿಸಲಾಗಿದೆ
ಈ ಮೇಲ್ಕಂಡ ಶ್ರೀ ಆಧಿಶಕ್ತಿ ದೇವಿರಮ್ಮನವರ ಸುಗ್ಗಿ ಮಹೋತ್ಸವಕ್ಕೆ ತಾವುಗಳು ಬಂಧು-ಮಿತ್ರರೊಡನೆ ಆಗಮಿಸಿ, ತೀರ್ಥ ಪ್ರಸಾದ ಸ್ವೀಕರಿಸಿ, ಶ್ರೀ ದೇವಿರಮ್ಮನವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ. ಸಮಸ್ತ ಸದ್ಭಕ್ತರಿಗೂ ಆದರದ ಸುಸ್ವಾಗತ ಕೋರುವವರು ಶ್ರೀ ಅಫಿಶಕ್ತಿ ದೇವಿರಮ್ಮನವರ ದೇವಸ್ಥಾನ ಸಮಿತಿ


