ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎನ್ನಲಾದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. ಲೋಕಸಭಾ ಚುನಾವಣಾ ಕಾವು ಒಂದು ಕಡೆಯಾದ್ರೆ, ಇನ್ನೊಂದು ಕಡೆ ರಾಜ್ಯ ರಾಜಕಾರಣದಲ್ಲಿ ಮಾತ್ರವಲ್ಲದೇ ರಾಷ್ಟ್ರ ಮಟ್ಟದಲ್ಲೂ ಸಹ ಪ್ರಜ್ವಲ್‌ ರೇವಣ್ಣ ಅವರು ಪ್ರಕರಣ ಕರ್ನಾಟಕದಲ್ಲಿ ಸಂಚಲನ ಮೂಡಿಸಿದೆ

ಹೌದು, ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು ಪಕ್ಷದಿಂದ ಜೆಡಿಎಸ್‌ ಅಮಾನತುಗೊಳಿಸಿದೆ. ಜೆಡಿಎಸ್‌ ಕೋರ್‌ ಕಮಿಟಿ ಈ ಬಗ್ಗೆ ಚರ್ಚೆ ನಡೆಸಿದ್ದು, ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷರಾದ ಹೆಚ್‌ ಡಿ ಕುಮಾರಸ್ವಾಮಿ ಅವರು ಪ್ರಜ್ವಲ್‌ ರೇವಣ್ಣ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ ಎಂದು ಹೇಳಿದ್ದಾರೆ.

ಇದರ ಬೆನ್ನಲ್ಲಿಯೇ ಪ್ರಜ್ವಲ್‌ ರೇವಣ್ಣ ಅವರ ಮುಂದಿನ ರಾಜಕೀಯ ಜೀವನ ಹೇಗಿರಲಿದೆ? ಎನ್ನುವ ಪ್ರಶ್ನೆ ಉದ್ಭವಿಸಿದೆ.ಪ್ರಜ್ವಲ್‌ ರೇವಣ್ಣ ಅವರ ವಿರುದ್ಧ ತೀವ್ರ ಮಟ್ಟದಲ್ಲಿ ರಾಜ್ಯಾದ್ಯಂತ ಟೀಕೆ ಟಿಪ್ಪಣಿಗಳು ಹೆಚ್ಚಾಗಿವೆ.

ಈ ನಡುವೆ ರಾಜ್ಯ ಮಹಿಳಾ ಆಯೋಗ ಸರ್ಕಾರಕ್ಕೆ ತನಿಖೆ ನಡೆಸುವಂತೆ ಆಗ್ರಹಿಸಿತ್ತು. ಈ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಎಸ್‌ಐಟಿ ತನಿಖೆಗೆ ಆದೇಶಿಸಿದ್ದು, ತನಿಖೆ ನಡೆಯುತ್ತಿದೆ. ಇತ್ತ ಪಕ್ಷದಿಂದ ಅಮಾನತಾಗಿರುವ ಪ್ರಜ್ವಲ್‌ ರೇವಣ್ಣ ಅವರು ಈ ಬಾರಿಯ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ. ಸಂಸದ ಸ್ಥಾನ ಉಳಿಯುತ್ತಾ ಅಥವಾ ಅನರ್ಹವಾಗುವುದಿಲ್ಲವೇ ಎಂಬ ಪ್ರಶ್ನೆ ಮೂಡಿದೆ.

ಪ್ರಜ್ವಲ್‌ ರೇವಣ್ಣ ಅವರನ್ನು ಪೆನ್‌ ಡ್ರೈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇವಲ ಪಕ್ಷದಿಂದ ಮಾತ್ರ ಉಚ್ಛಾಟನೆ ಮಾಡಲಾಗಿದೆ. ಪಕ್ಷದಿಂದ ಉಚ್ಛಾಟನೆ ಮಾಡಿದ ತಕ್ಷಣ ಅವರ ಸಂಸದ ಸ್ಥಾನ ಅನರ್ಹವಾಗುವುದಿಲ್ಲ, ಅವರು ಸಂಸದರಾಗಿ ಮುಂದುವರೆಯುತ್ತಾರೆ. ಪ್ರಸ್ತುತ ಅವರ ಸಂಸದ ಸ್ಥಾನದ ಅವಧಿ ಜೂನ್‌ನಲ್ಲಿ ಮುಗಿಯುವುದರಿಂದ ಸಂಸದ ಸ್ಥಾನದಿಂದ ಅನರ್ಹರಾಗುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ.

ನಮ್ಮ ಭಾರತ ಸಂವಿಧಾನದ ಪ್ರಕಾರ ಒಂದು ಪಕ್ಷದಿಂದ ಉಚ್ಛಾಟನೆಯಾದ ವ್ಯಕ್ತಿಯು ಸಂಸದ ಸ್ಥಾನದಲ್ಲಿ ಮುಂದುವರಿಯಬಹುದು. ಸಂಸದ ಸ್ಥಾನ ಅಭಾದಿತ. ಅವರು ಪಕ್ಷೇತರರಾಗಿ ಸಂಸತ್‌ನಲ್ಲಿ ಕುಳಿತುಕೊಳ್ಳಬಹುದು, ಅಥವಾ ಬೇರೆ ಪಕ್ಷವನ್ನು ಸೇರಬಹುದು.

ಪಕ್ಷದ ಸದಸ್ಯತ್ವ ಹಾಗೂ ಸಂಸತ್‌ನ ಸದಸ್ಯತ್ಯ ಎರಡು ಬೇರೆ ಬೇರೆಯಾಗಿರುವುದರಿಂದ ಪಕ್ಷದಿಂದ ಉಚ್ಛಾಟನೆಯಾದರೆ ಸಂಸತ್‌ ಸದಸ್ಯತ್ವದಿಂದ ಅನರ್ಹರಾಗುವುದಿಲ್ಲ.

ಜೆಡಿಎಸ್‌ ಪಕ್ಷದಿಂದ ಅಮಾನತಾಗಿರುವ ಪ್ರಜ್ವಲ್‌ ರೇವಣ್ಣ ಅವರು 2024 ರ ಲೋಕಸಭಾ ಚುನಾವಣೆಯಲ್ಲಿ ಗೆದ್ದರೆ ಸಂಸದ ಸ್ಥಾನದಲ್ಲಿ ಮುಂದುವರಿಯುತ್ತಾರೆ. ಪಕ್ಷದ ನಿರ್ಧಾರವೂ ಅವರ ಸಂಸದ ಸ್ಥಾನದ ಮೇಲೆ ಪ್ರಭಾವ ಬೀರುವುದಿಲ್ಲ.

ಸಂಸದ ಸ್ಥಾನದಿಂದ ಅನರ್ಹ ಆಗಬೇಕು ಎಂದರೆ ಲೋಕಸಭೆಯ ಸ್ಪೀಕರ್‌ ಅವರು ಆ ನಿರ್ಧಾರ ತೆಗೆದುಕೊಳ್ಳಬೇಕು. ಪ್ರಜ್ವಲ್‌ ರೇವಣ್ಣ ಒಂದು ವೇಳೆ ಗೆದ್ದರೆ ಸಂಸದರಾಗಿ ಮುಂದುವರಿಯುತ್ತಾರೆ.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed