ಹಾಸನ ಜಿಲ್ಲೆ, ಆಲೂರು ತಾಲೂಕಿನ ಕುಂದೂರು ಹೋಬಳಿಯ ಕಾಮೇನಹಳ್ಳಿ ಗ್ರಾಮದಲ್ಲಿ ತಂತಿಯ ಹುರುಳಿಗೆ ಸಿಲುಕಿದ ಚಿರತೆ.
ಮೇ 1ನೇ ಬುಧವಾರ ರಾತ್ರಿ ಯಾವುದೋ ಪ್ರಾಣಿಯನ್ನು ಬೇಟೆಯಾಡಲು ಹೋಗಿ ಸಿಲುಕಿರುವ ಸಾಧ್ಯತೆ.
ಸುಮಾರು ನಾಲ್ಕರಿಂದ ಐದು ವರ್ಷ ವಯಸ್ಸಿನ ಗಂಡು ಚಿರತೆ.
ಸ್ಥಳೀಯ ಗ್ರಾಮಸ್ಥರ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಅರಣ್ಯಾಧಿಕಾರಿಗಳು.
ಬೋನಿನಲ್ಲೇ ಅರಣ್ಯ ಸಿಬ್ಬಂದಿ ಮೇಲೆ ಆಕ್ರೋಶ ತೋರುತ್ತಿರುವ ಚಿರತೆ.
ಎರಡು ಮೂರು ಬಾರಿ ತಾಲೂಕಿನ ಕುಂದೂರು ಮಗ್ಗೆ ಸುತ್ತಮುತ್ತ ಕರುಗಳನ್ನು ಬೇಟೆಯಾಡಿ ಆತಂಕ ಸೃಷ್ಟಿಸಿದ್ದ ಚಿರತೆ.
ಹುರಳಿಗೆ ಬಿದ್ದಿದ್ದ ಚಿರತೆಯನ್ನು ಪಶು ವೈದ್ಯಾಧಿಕಾರಿಗಳ ಸಹಾಯದಿಂದ ಅರಿವಳಿಕೆ ಚುಚ್ಚು ಮದ್ದು ನೀಡಿ ಬೋನಿನಲ್ಲಿ ಸೆರೆ ಹಿಡಿಯಲಾಯಿತು.
ಕಾರ್ಯಾಚರಣೆಯಲ್ಲಿ ತಾಲೂಕಿನ ವಲಯ ಅರಣ್ಯ ಅಧಿಕಾರಿ ಯತೀಶ್ ಕುಮಾರ್ ಪಶುವೈದ್ಯಾಧಿಕಾರಿ ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಪ್ರದೀಪ್, ವೇಣುಗೋಪಾಲ್, ಹಾಗೂ ನಾಗಪ್ಪ, ಮುಂತಾದವರು ಹಾಜರಿದ್ದರು.