ಸಂವಿಧಾನ ಶಿಲ್ಪಿ ಡಾ: ಬಿ.ಆರ್. ಅಂಬೇಡ್ಕರ್ ರವರ 134 ನೇ ಜನ್ಮದಿನವನ್ನ ಬಹಳ ವಿಶಿಷ್ಟವಾಗಿ ಆಚರಿಸಿದ ಸಂಘದ ಅಧ್ಯಕ್ಷರಾದ ಸತೀಶ್. ಬಿ. ಇವರ ನೇತ್ರತ್ವದಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರು ಮತ್ತು ಊರಿನ ಎಲ್ಲಾ ನಾಗರೀಕರ ಸಮ್ಮುಖದಲ್ಲಿ ನಡೆದ ಸಮಾರಂಭದಲ್ಲಿ, ಮುಖ್ಯ ಅತಿಥಿಗಳಾಗಿ ಬಿ ಎಸ್ ಪಿ ಜಿಲ್ಲಾ ಸಂಚಾಲಕರಾದ, ಲಕ್ಷ್ಮಣ್ ಕೀರ್ತಿ, ತಾ: ಬಿ ಎಸ್ ಪಿ ಅಧ್ಯಕ್ಷರಾದ ವೀರೇಶ್ ಕಲ್ಗಣೆ, ಪ್ರ,ಕಾರ್ಯದರ್ಶಿ ಮಂಜುನಾಥ್ ಗುಡಾಣ್ ಕೆರೆ ,ಮುಖಂಡರಾದ ಉಮೇಶ್ ಸಕಲೇಶಪುರ, ಮತ್ತು ಹಾನುಬಾಳು ಗ್ರಾ ಪಂ,ಸದಸ್ಯರು, ಸ್ಥಾಯೀ ಸಮಿತಿಯ ಅಧ್ಯಕ್ಷರಾದ ಮೋಹನ್ ಕುಮಾರ್ ಅಚ್ಚರಡಿ,ಮತ್ತು ಹಾನುಬಾಳು ಗ್ರಾ,ಪಂ ನ ಮಾಜಿ ಅಧ್ಯಕ್ಷರಾದ ಅರುಣ್ ಹೆಚ್.ಕೆ.(ಅಣ್ಣು) ಹಾನುಬಾಳು ಗ್ರಾ,ಪಂ ಮಾಜಿ ಸದಸ್ಯರಾದ ಸುಬ್ಬಯ್ಯ ಬಾಚನಹಳ್ಳಿ ಮತ್ತು ಜಿಲ್ಲಾ ಆದಿದ್ರಾವಿಡ ತುಳು ಸಮಾಜದ ಜಿಲ್ಲಾಧ್ಯಕ್ಷರಾದ ರವಿನಾರಯಣ್ ಹಾಗು ಗ್ರಾಮದ ಹಿರಿಯ ಮಹಿಳಾ ಮುಖಂಡರಾದ ಶ್ರೀಮತಿ ನೀಲಮ್ಮರವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಲಕ್ಷ್ಮಣ್ ಕೀರ್ತಿಯವರು ನೆರವೇರಿಸಿದರು. ಪ್ರಾಸ್ತಾವಿಕ ನುಡಿಯನ್ನು ಮೋಹನ್ ಕುಮಾರ್ ಅಚ್ಚರಡಿ ನಡೆಸಿಕೊಟ್ಟರು.

ವೇದಿಕೆಯಲ್ಲಿಯಲ್ಲಿದ್ದ ಎಲ್ಲಾ ಗಣ್ಯರು ಡಾ: ಬಿ.ಆರ್.ಅಂಬೇಡ್ಕರ್ ರವರ ಜೀವನಗಾಥೆ ಮತ್ತು ದೇಶಕ್ಕೆ‌ ಸಂವಿಧಾನದ ಮೂಲಕ ನೀಡಿದ ಕೊಡುಗೆಯನ್ನು ಸ್ಮರಿಸಿ ಅದರ ಗುಣಗಾನ ಮಾಡಿದರು.

ಹಾಗೆ ವಿಶೇಷವಾಗಿ ಈ ಸಾಲಿನಲ್ಲಿ ಎಸ್,ಎಸ್,ಎಲ್,ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ‌ಅಂಕಪಡೆದ‌ ಸ್ಥಳೀಯ ಸಮೂದಾಯದ ವಿಧ್ಯಾರ್ಥಿಗಳನ್ನ ಗೌರವಿಸಲಾಯಿತು. ಜನುಮುದಿನದ ವಿಶೇಷವಾಗಿ ‌ಕೆಲವು ಗ್ರಾಮೀಣ ಕ್ರೀಡೆಯನ್ನ ಆಯೋಜನೆ ಮಾಡಿ ಅದರಲ್ಲಿ ವಿಜೇತರಾದ ಊರಿನ ಪ್ರತಿಭೆಗಳಿಗೆ ಬಹುಮಾನ ನೀಡಿ ಎಲ್ಲರಿಗೂ ಸಂತಸದ ಕಾರ್ಯಕ್ರಮವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಯುವ ಮುಖಂಡ ಸುನಿಲ್ ಸೇರಿದಂತೆ ವಿಶ್ವನಾಥ್ ಹರೀಶ್ ಆನಂದ್ ಹೆಚ್ ಜೆ, ಲೋರೇಶ್ ಸುನಿಲ್ ರೈಟರ್ ಗ್ರಾಮಸ್ಥರು ಇತರರು ಹಾಜರಿದ್ದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *