ಹಾಸನ : ಮಲೆನಾಡು ಇಂಜಿನೀಯರಿಂಗ್ ಕಾಲೇಜಿನ ರೋಟ್ರೇಕ್ಟ ಕ್ಲಬ್ ವತಿಯಿಂದ ಕಾಲೇಜಿನ ಆವರಣದಲ್ಲಿ ಇದೆ ಮೊದಲನೆ ಬಾರಿಗೆ ಮಲೆನಾಡು ಇಂಜಿನೀಯರಿಂಗ್ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಕಾರ್ ಜೀಪ್ ಬ್ಯೆಕ್ ಗಳ ಪ್ರದರ್ಶನ ಆಟೋ ಎಕ್ಸ್ ಪೋ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ವಿವಿಧ ರೀತಿಯ ದುಭಾರಿ ಬೆಲೆಯ ಕಾರುಗಳು ನೋಡುಗರ ಗಮನಸೆಳೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಹಾಸನ ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಎ.ಜೆ. ಕೃಷ್ಣಯ್ಯ ರವರು ಮಾತನಾಡಿ, ನಮ್ಮ ಕಾಲೇಜಿನ ರೋಟ್ರೇಕ್ಟ ಕ್ಲಬ್ ವತಿಯಿಂದ ಈ ಸಾರಿ ಮೊಟ್ಟ ಮೊದಲ ಬಾರಿಗೆ ಆಟೊ ಎಕ್ಸ್ ಪೋ-೨೦೨೪ ಎಂಬ ಹೆಸರಿನಲ್ಲಿ ವಾಹನಗಳ ಪ್ರದರ್ಶನ ಏರ್ಪಡಿಸಲಾಗಿರುವುದು ವಿಶೇಷವಾದ ಕಾರ್ಯಕ್ರಮವಾಗಿದೆ ಎಂದರು.
ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಸ್ಪೂರ್ತಿ ತಂದಿದೆ ಎಂದು ತಿಳಿಸಿದರು.
ಹಾಸನ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ನಿರ್ದೇಶಕ ರಾದ ಚೌಡುವಳ್ಳಿ ಜಗದೀಶ್ ಅವರು ಈ ಪ್ರದರ್ಶನಕ್ಕೆ ಶುಭಕೋರಿದರು. ಕಾಲೇಜಿನ ವಿದ್ಯಾರ್ಥಿಗಳು ಕ್ಲಬ್ ಗಳನ್ನು ರಚಿಸಿಕೊಂಡು ಹಲವು ಕಾರ್ಯಕ್ರಮಗಳನ್ನು ಮಾಡುವ ಮೂಲಕ ನಮ್ಮ ಕಾಲೇಜಿನ ಯಶಸ್ವಿಗೆ ಕಾರಣರಾಗಿದ್ದಾರೆ ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಹಾಸನ ರೋಟರಿ ಕ್ಲಬ್ ಅಧ್ಯಕ್ಷರಾದ ಉದ್ಯಮಿಗಳಾದ ಗೀರಿಶ್ ನೆರವೇರಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ. ಹೆಚ್.ಎಸ್. ನರಸಿಂಹನ್, ಡಾ ರಾಜಣ್ಣ, ಶಿವಣ್ಣ ಹಾಗೂ ಕಾಲೇಜಿನ ರೋಟರಿ ಕ್ಲಬ್ ಪದಾಧಿಕಾರಿಗಳು ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.