ಹಾಸನ : ಜೈವಿಕ ಬಲವರ್ಧನೆ ಎಂದರೆ ಬೆಳೆಯ ತಳಿಗಳಲ್ಲಿ ಪೋಷಕಾಂಶಗಳ ಪ್ರಮಾಣವನ್ನು ಜೈವಿಕ ತಂತ್ರಜ್ಞಾನದ ಮೂಲಕ ಹೆಚ್ಚಿಸುವ ಪ್ರಕ್ರಿಯೆಯಾಗಿದೆ.ಈ ತಂತ್ರಜ್ಞಾನವನ್ನು ಆಹಾರದ ಪೋಷಕಾಂಶಗಳನ್ನು ಹೆಚ್ಚಿಸಲು ಮತ್ತು ಜನರ ಆರೋಗ್ಯದ ಸಮಸ್ಯೆಗಳನ್ನು ಕಡಿಮೆಮಾಡಲು ಬಳಸಲಾಗುತ್ತದೆ ಎಂದು ವಿದ್ಯಾ ರವರು ತಿಳಿದರು.

ಹಾಸನ ತಾಲೂಕಿನ ದುದ್ದ ಹೋಬಳಿಯ ಜೋಡಿಕೃಷ್ಣಾಪುರ ಗ್ರಾಮದಲ್ಲಿ ಕಾರೇಕೆರೆ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ.ಎಸ್.ಸಿ(ಅನಾರ್ಸ) ಕೃಷಿ ಮತ್ತು ಜೈವಿಕ ತಂತ್ರಜ್ಞಾನ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯನುಭವ ಶಿಬಿರ ೨೦೨೪-೨೫ ರ ಅಂಗವಾಗಿ ಜೈವಿಕ ಬಲವರ್ಧಿತ ತಳಿಗಳ ಬಗ್ಗೆ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಜೈವಿಕ ಬಲವರ್ಧನೆ ಮುಖಾಂತರ ಬೆಳೆಯ ತಳಿಗಳಲ್ಲಿ ಪೋಷಕಾಂಶಗಳಾದ ಸತು, ಪೊಟ್ಟಾಸಿಯಂ, ಕಬ್ಬಿಣ, ವಿಟಮಿನ್ ಎ ಮತ್ತು ಇತರೆ ಪೋಷಕಾಂಶಗಳನ್ನು ಬೆಳೆಗಳಲ್ಲಿ ಹೆಚ್ಚಿಸಬಹುದು.ಈ ಬೆಳೆಗಳ ಮುಖ್ಯ ಉದ್ದೇಶವೆಂದರೆ ಜನಸಾಮಾನ್ಯರಲ್ಲಿ ಪೋಷಕಾಂಶಗಳ ಕೊರತೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಯನ್ನು ಜೈವಿಕ ಬಲವರ್ಧಿತ ತಳಿಗಳನ್ನು ಬೆಳೆಯುದರ ಮುಖಾಂತರ ಕಡಿಮೆ ಮಾಡಬಹುದು.

ಈ ಬಲವರ್ಧಿತ ತಳಿಗಳನ್ನು ಉತ್ಪಾದಿಸಲು ಪ್ರಮುಖ ಕಾರಣಗಳೆಂದರೆ ಪೋಷಕಾಂಶ ಕೊರತೆಯನ್ನು ತಡೆಹಿಡಿಯಲು, ಆರೋಗ್ಯ ಸಮಸ್ಯೆಯನ್ನು ಕಡಿಮೆಮಾಡಲು, ಆರೋಗ್ಯದ ಗುಣಮಟ್ಟವನ್ನು ಸುಧಾರಿಸಲು ಎಂದು ಡಾ.ಆಕಾಶ್.ಡಿ ರವರು ತಿಳಿಸಿದರು.

ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಜೈವಿಕ ತಂತ್ರಜ್ಞಾನ ವಿಭಾಗದ ಡಾ.ಆಕಾಶ್.ಡಿ ಅವರು ಆಗಮಿಸಿ ರೈತರಿಗೆ ಇದ್ದ ಸಂದೇಹಗಳನ್ನು ಬಗೆಹರಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *