ಹಾಸನ : ನಗರದ ಚನ್ನಪಟ್ಟಣ ನಿವಾಸಿ ಶಿಕ್ಷಕ ಕೃಷ್ಣೇಗೌಡ ಅವರು ಅಂಕಪುರದಿಂದ ಹಾಸನಕ್ಕೆ ಬುಲೆಟ್ ಬೈಕಿನಲ್ಲಿ ಬರುವಾಗ ಹೊಳೆನರಸೀಪುರ ರಸ್ತೆಯ ಚನ್ನಪಟ್ಟಣ ಬಳಿ ಹಾಸನ ಹಾಲು ಒಕ್ಕೂಟದ ಪಶು ಆಹಾರ ಘಟಕದ ಹತ್ತಿರ ಶನಿವಾರ ಸಂಜೆ ಲಾರಿಗೆ ಡಿಕ್ಕಿಯಾಗಿ ಅಪಘಾತದಲ್ಲಿ ನಿಧನರಾದರು.

ಅವರಿಗೆ ೫೭ ವರ್ಷ ವಯಸ್ಸಾಗಿತ್ತು. ಇವರು ಪ್ರಸ್ತುತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚನ್ನಪಟ್ಟಣ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಇವರ ಪತ್ನಿ ಜಯಲಕ್ಷ್ಮಿ ರವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಾಯ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇವರಿಗೆ ಪತ್ನಿ, ಒಬ್ಬ ಮಗ, ಮಗಳು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. ಅಪಘಾತ ನಂತರ ನಗರದ ಮಂಗಳ ಆಸ್ಪತ್ರೆಗೆ ಸೇರಿಸಲಾಯಿತು.

ವೈದ್ಯರು ಪರೀಕ್ಷಿಸಿ ಅಪಘಾತ ನಡೆದ ಸ್ಥಳದಲ್ಲೇ ನಿಧನರಾಗಿದ್ದಾರೆ ಎಂದು ತಿಳಿಸಿದ ನಂತರ ಶ್ರೀ ಚಾಮರಾಜೇಂದ್ರ ಸರ್ಕಾರಿ ಆಸ್ಪತ್ರೆ ಶವಗಾರದಲ್ಲಿ ಇಡಲಾಯಿತು.

ಬೆಳಗ್ಗೆ ಮರಣೋತ್ತರ ಪರೀಕ್ಷೆ ನಂತರ ಪಾರ್ಥಿವ ಶರೀರವನ್ನು ಚನ್ನಪಟ್ಟಣದ ಅವರ ನಿವಾಸದಲ್ಲಿ ಸಾರ್ವಜನಿಕರ ದರ್ಶನಕ್ಕೆ ಭಾನವಾರ ಬೆಳಿಗ್ಗೆ ೧೧ ಗಂಟೆಗೆ ಇಡಲಾಗಿ ೧೨ ಗಂಟೆ ನಂತರ ಅವರ ಹುಟ್ಟೂರಾದ ಅಂಕಪುರದಲ್ಲಿ ಸಂಜೆಯ ವೇಳೆಗೆ ಅಂತ್ಯಕ್ರಿಯೆ ಮಾಡಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಇವರ ನಿಧನಕ್ಕೆ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ಡಾ. ನಾಯಕರಹಳ್ಳಿ ಮಂಜೇಗೌಡ, ಗೌರವಾಧ್ಯಕ್ಷರಾದ ರವಿನಾಕಲಗೂಡು, ಕಲ್ಲಹಳ್ಳಿ ಹರೀಶ, ಕತ್ತಿಮಲ್ಲೇನಹಳ್ಳಿ ಪರಮೇಶ, ಹರಳಹಳ್ಳಿ ರಂಗಸ್ವಾಮಿ, ಕಸಾಪ ನಿಕಟಪೂರ್ವ ಆಲೂರು ತಾಲ್ಲೂಕು ಅಧ್ಯಕ್ಷರಾದ ಗಂಗರ ಶ್ರೀಕಾಂತ, ನಂದಕುಮಾರ.ಪಿ, ಸೋಮನಾಯಕ, ದಿಬ್ಬೂರು ರಮೇಶ ಮತ್ತು ಜಿಲ್ಲಾ ವಚನ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಚೈತ್ರ ನಾಯಕರಹಳ್ಳಿ ಮುಂತಾದವರು ಸಂತಾಪ ಸೂಚಿಸಿದ್ದಾರೆ.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *