
ಸಕಲೇಶಪುರ : ಕಾಡಾನೆ ಹಾಗೂ ಮಾನವ ಸಂಘರ್ಷ ಮಲೆನಾಡಿನಲ್ಲಿ ಮಿತಿಮೀರಿದ್ದು ಮನುಷ್ಯರು ಉಳಿಯಬೇಕು ಆನೆಗಳು ಜೀವಿಸಬೇಕು ಇದಕ್ಕೆ ಸರ್ಕಾರ ಕ್ರಮವಹಿಸಬೇಕುಏಕೆಂದರೆ ಆನೆಗಳು ಅರಣ್ಯ ಪ್ರದೇಶಗಳಲ್ಲಿ ಸ್ವತಂತ್ರವಾಗಿ ಬದುಕಬೇಕು ಇತ್ತ ಕಡೆ ಆನೆಗಳು ನಾಡಿನತ್ತ ಮುಖಮಾಡಿ ರೈತರು ಬೆಳೆದ ಬೆಳೆಗಳಿಗೆ ನಷ್ಟ ಉಂಟು ಮಾಡುವುದಲ್ಲದೆ,ರೈತರ ಮೇಲೆ ದಾಳಿ ಮಾಡಿ, ರೈತರನ್ನು ಬಲಿ ಪಡೆಯುತ್ತಿವೆ,ಅರಣ್ಯ ಇಲಾಖೆ ಹಾಗೂ ಸರ್ಕಾರಗಳು ರೈತರು ಹಾಗೂ ಆನೆಗಳನ್ನು ರಕ್ಷಣೆ ಮಾಡುವ ಕೆಲಸವನ್ನು ಮಾಡಬೇಕೆಂದುದು ಕರವೇ ಜಿಲ್ಲಾ ಕಾರ್ಯದರ್ಶಿ ರಘು ಆಕ್ರೋಶ ವ್ಯಕ್ತಪಡಿಸಿದ್ದಾರೆ.
