ಬಾಳೆಹೊನ್ನೂರು : ಶ್ರೀ ರಂಭಾಪುರೀ ಪೀಠದಲ್ಲಿ ‍ಹುಣ್ಣಿಮೆ ಅಂಗವಾಗಿ ಇಂದು ಗುರುವಾರ ಪೂರ್ಣೀಮೇಯಂದು ನಡೆದ ಧಾರ್ಮಿಕ ಸಭೆಯಲ್ಲಿ ಕಾಲ ಜ್ಞಾನ ಪುಸ್ತಕ ಬಿಡುಗಡೆ ಮಾಡಿದ ಬಾಳೇಹೋನ್ನೂರು ಶ್ರೀ ರಂಭಾಪುರೀ ಮಠದ ಮಠಾಧೀಶರಾದ ಶ್ರೀ ಜಗದ್ಗುರು ರೇಣುಕಾಚಾರ್ಯ ಶಿವಾಚಾರ್ಯ ಮಹಾಸ್ವಾಮಿಗಳು

ಬಿಡುಗಡೆ ಮಾಡಿ ಅಶ್ರೀವಚನ ಮಾಡಿದ ಅವರು ಹಿಂದೂ ಧರ್ಮದ ಉಳಿವಿಗಾಗಿ ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ. ಮಠ ಮಾನ್ಯಗಳು ಅನ್ನ ದಾಸೋಹ, ಉಚಿತ ವಸತಿ, ವಿದ್ಯಾಬ್ಯಾಸ, ಧಾರ್ಮಿಕ ಆಚರಣೆಗಳು, ಧರ್ಮಜಾಗೃತಿ ನಿಡುವ ಮೂಲಕ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

ವೀರಶೈವ ಲಿಂಗಾಯತ ಸಮಾಜದ ಒಗ್ಗಟ್ಟು ಅಗತ್ಯವಾಗಿರುತ್ತದೆ.ಇಂದು ಸೀಗೆ ಹುಣ್ಣಿಮೆ ಅಂಗವಾಗಿ ಮಠದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ಬೆಳಿಗ್ಗೆಯಿಂದ ನಡೆದಿದೆ ಎಂದು ತಿಳಿಸಿದರು

ರಂಭಾಪುರಿ ಮಠ ನಿರಂತರವಾಗಿ ಧಾರ್ಮಿಕ ಆಚರಣೆಗಳು, ಧಾರ್ಮಿಕ ವಿಚಾರಗಳು ಜನರನ್ನು ಕೂಡಿಸುವ ಕೆಲಸ ರಂಭಾಪುರಿ ಪೀಠ ಮಾಡುತ್ತೀದೆ , ನಾವು ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಸಮಾಜದಲ್ಲಿ ಸದೃಢ ಸಾಮಾಜಿಕ ಚಿಂತನೆ ವಂತರಾಗಬೇಕು ಎಂದು ತಿಳಿಸಿದರು.

ಇದೆ ಸಂದರ್ಭದಲ್ಲಿ ಅರಸೀಕೆರೆ ವೀರಶೈವ ಲಿಂಗಾಯತ ಸಮಾಜದವರು ಇದೆ ಡಿಸೆಂಬರ್ 2- ರಂದು ಅರಸೀಕೆರೆಯಲ್ಲಿ ಶ್ರೀ ರಂಭಾಪುರಿ ಶ್ರೀಗಳ ಸಾಮೂಹಿಕ ಇಷ್ಟಲಿಂಗ ಪೂಜೆ ಧಾರ್ಮಿಕ ಕಾರ್ಯಕ್ರಮಕ್ಕೆ ಆಹ್ವಾನ ಮಾಡಿದರು ಹಾಸನದ ಶ್ರೀ ಸೋಮೇಶ್ವರ ಕಾಂಪ್ಲೆಕ್ಸ್ ಮೆಲ್ಬಾಗದಲ್ಲಿ ವೀರಶೈವ ಬಡ ವಿದ್ಯಾರ್ಥಿಗಳಿಗೆ ಉಚಿತ ಹಾಸ್ಟೆಲ್ ಸೌಲಭ್ಯ ಸದ್ದದಲ್ಲೆ ಮಾಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಯಡಿಯೂರಿನ ಶ್ರೀ ರಂಭಾಪುರಿ ಶಾಖ ಮಠದ ಮಠಾಧೀಶರಾದ ರೇಣುಕಾ ಶಿವಾಚಾರ್ಯ ಮಹಾಸ್ವಾಮಿಗಳು. ಕೆ ಆರ್ ನಗರ ತಾಲ್ಲೂಕಿನ ಕರ್ಪೂರಹಳ್ಳಿ ಮಠದ ಮಠಾಧೀಶರಾದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ. ಹಾಸನ ತಣ್ಣೀರು ಹಳ್ಳ ಮಠದ ಮಠಾಧೀಶರಾದ ಶ್ರೀ ವೀಜಯ ಕುಮಾರ್ ಸ್ವಾಮಿಜಿ. ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಅರಸೀಕೆರೆಯ ನಿರ್ವಾಹಣ ಸ್ವಾಮಿ. ಷಡಕ್ಷರಯ್ಯ. ಅರಸೀಕೆರೆ ತಾಲ್ಲೂಕು ವೀರಶೈವ ಸಮಾಜದ ಅಧ್ಯಕ್ಷರಾದ ಶಿವಯ್ಯ. ಹಾಸನ ತಾಲ್ಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾದ ಕಟ್ಟಾಯ ಶಿವಕುಮಾರ್ ,ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಹೆಚ್ ಎನ್ ನಾಗೇಶ್ , ಸುನಿಲ್ ಶಾಸ್ತ್ರಿ. ಅರಸೀಕೆರೆ ವೀರಶೈವ ಲಿಂಗಾಯತ ಸಮಾಜದ ಮುಖಂಡರು. ಭಕ್ತರು ಪಾಲ್ಗೊಂಡಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *