ಆಲೂರು: ತಾಲೂಕಿನ ಕೆ. ಹೊಸಕೋಟೆ ಹೋಬಳಿ ಕಾಡ್ಲೂರು ಗ್ರಾಮದಲ್ಲಿ ಶ್ರೀ ಕೆಂಚಾಂಬಿಕೆ ದೇವಿಯವರ ಸುಗ್ಗಿ ಮತ್ತು ಕೆಂಡೋತ್ಸವ ಅದ್ದೂರಿಯಾಗಿ ಜರುಗಿತು.

ಈ ಸಂದರ್ಭದಲ್ಲಿ ಶ್ರೀ ಕೆಂಚಂಬಾ ದೇವಸ್ಥಾನದ ಸಮಿತಿಯ ಅಧ್ಯಕ್ಷ ಕೆ ಬಿ ರುದ್ರೇಶ್ ಮಾತನಾಡಿ ಕಾಡ್ಲೂರು ಗ್ರಾಮದಲ್ಲಿ ಒಂದು ವಾರದಿಂದಲೂ ಶ್ರೀ ಕೆಂಚಾಂಬಿಕೆ ದೇವಿಯವರ ಸುಗ್ಗಿ ನಡೆಯುತ್ತಿದ್ದು ಪ್ರತಿದಿನ ಸಂಜೆ ಶ್ರೀ ಕೆಂಚಾಂಬಿಕೆ ದೇವಿಯವರ ಮುಖ ಒಡವೆಗಳನ್ನು ಇಟ್ಟು ವಿಶೇಷ ಪೂಜೆ ನೆರವೇರುತ್ತದೆ. ಬುದುವಾರ ರಾತ್ರಿ ಅಮ್ಮನವರ ಮುಖ ಮತ್ತು ಒಡವೆಗಳನ್ನು ಗ್ರಾಮದಲ್ಲಿರುವ ದೇವರ ಬಾವಿ ಹತ್ತಿರ ತಂದು ದೇವರೇ ಜೀವಕೊಳ ತುಂಬವ ವಿಶೇಷ ಪೂಜೆ ನೆರವೇರುತ್ತದೆ. ನಂತರ ವಾದ್ಯಗೋಷ್ಠಿಯ ಮೂಲಕ ದೇವರನ್ನು ಸುಗ್ಗಿ ಕಟ್ಟೆಗೆ ತಂದು ದೇವಸ್ಥಾನದಲ್ಲಿರುವ ನಂದಿ ಕಂಬಕ್ಕೆ ಮುಖ ಒಡವೆ ಸೀರೆಗಳನ್ನುಡಿಸಿ ಭವ್ಯವಾಗಿ ಅಲಂಕರಿಸಿ ವಿಶೇಷ ಪೂಜೆ ಮಹ ಮಂಗಳಾರತಿ ನೆರವೇರುತ್ತದೆ.

ಇದೇ ರೀತಿ ಎಂಟು ದಿನಗಳ ಕಾಲ ವಿಶೇಷ ಪೂಜೆ ನೆರವೇರುತ್ತದೆ . ದೇವಸ್ಥಾನದ ಅರ್ಚಕರು ಕೆ ಜಿ ನಾಗೇಶ್ ಮಾತನಾಡಿ ಕೆ. ಹೊಸಕೋಟೆ ಹೋಬಳಿಯಲ್ಲಿ48 ಹಳ್ಳಿಗಳಲ್ಲಿ ಪುರಾತನ ಕಾಲದಿಂದಲೂ ಸುಗ್ಗಿ ಪೂಜಾ ಕಾರ್ಯಕ್ರಮ ನಡೆಯುತ್ತಿದ್ದು. ಕಾಡ್ಲೂರು ಗ್ರಾಮದಲ್ಲಿ ವಿಶೇಷ ಸುಗ್ಗಿ ಕೆಂಡೋತ್ಸವ ನಡೆಯುತ್ತದೆ.

ಎಂಟು ದಿನಗಳು ನಡೆಯುವ ಸುಗ್ಗಿ ಶನಿವಾರ ರಾತ್ರಿ ಅಮ್ಮನವರಿಗೆ ವಿಶೇಷ ಪೂಜೆ, ಮಹಾಮಂಗಳಾರತಿ, ಕಳಶೋತ್ಸವ, ನಡೆದು ಭಾನುವಾರ ಬೆಳಗ್ಗೆ ಕೆಂಡೋತ್ಸವ ನಡೆಯುತ್ತದೆ. ಈ ಕೆಂಡೋತ್ಸವ ಕ್ಕೆ ಬೇರೆ ಬೇರೆ ಜಿಲ್ಲೆಗಳಿಂದ ಭಕ್ತಾದಿಗಳು ಬಂದು ದೇವಿಗೆ ವಿಶೇಷ ಪೂಜೆ ಹರಕೆ ಸಲ್ಲಿಸುತ್ತಾರೆ.

ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಎಲ್ಲಾ ಸದಸ್ಯರುಗಳು, ಗ್ರಾಮದ ಹಿರಿಯ ಮುಖಂಡರಾದ ಕೆ ಜಿ ಪರಮೇಶ್, ಕೆ ಬಿ ಕುಮಾರ್, ಗ್ರಾಾ.ಪಂ.ಸದಸ್ಯ ಚಂದನ್, ಚಂದ್ರಶೇಖರ್, ಧರ್ಮಪ್ಪ, ಸುರೇಶ್, ಹರ್ಷವರ್ಧನ್, ಉಪಸ್ಥಿತರಿದ್ದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed