ಬೇಲೂರು : ಪಟ್ಟಣದಲ್ಲಿರುವ ತಾಲೂಕು ಒಕ್ಕಲಿಗರ ಸಂಘದಲ್ಲಿ ಕಳೆದ 2 ವರ್ಷಗಳಿಂದ ಆಡಳಿತ ಮಂಡಳಿ ಮತ್ತು ಒಕ್ಕಲಿಗರ ಸಂಘದ ಸದಸ್ಯರ ನಡುವೆ ನಡೆಯುತ್ತಿದ್ದ ಆಂತರಿಕ ಗುದ್ದಾಟದಿಂದ ಜಿಲ್ಲಾ ಸಹಕಾರ ನಿಬಂಧಕರ ಕಚೇರಿಯಲ್ಲಿ ಆಡಳಿತ ಮಂಡಳಿಯ ವಿರುದ್ಧ ಒಕ್ಕಲಿಗರ ಸಂಘದ ಗುಂಪೊಂದು ದೂರು ನೀಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ಸಮಗ್ರ ದಾಖಲಾತಿಗಳ ಪರಿಶೀಲನೆ ನಡೆಸಿ

ಸಮಿತಿಯ ವಿರುದ್ಧ ಅಡಾಕ್ ಕಮಿಟಿಯ ಆಡಳಿತ ಮಂಡಳಿ ವಿರುದ್ಧ ಈ ಹಿಂದೆ ನೋಟಿಸ್ ಜಾರಿ ಮಾಡಿ ಒಕ್ಕಲಿಗರ ಸಂಘದ ವ್ಯವಹಾರಕ್ಕೂ ಯಾವುದೇ ಸಂಬಂಧ ಇರುವುದಿಲ್ಲ ಕೂಡಲೇ ಸಂಘದ ಎಲ್ಲಾ ಚಟುವಟಿಗಳನ್ನು ಸ್ಥಗಿತಗೊಳಿಸಿ ಸಹಕಾರ ನಿಬಂಧಕರ ಕಚೇರಿಯ ಸುಪರ್ದಿಗೆ ನೀಡುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಹಾಲಿ ಇದ್ದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶೈಲೇಶ್ ಗೌಡ, ಕಾರ್ಯದರ್ಶಿ ಸುರೇಶ್ ಸೇರಿದಂತೆ ಇತರರು ಅಡಾಕ್ ಕಮಿಟಿ ವಜಾ ಗೊಳಿಸಿದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದ ಹಿನ್ನೆಲೆಯಲ್ಲಿ ಸಂಘದ ಎಲ್ಲಾ ಕಾರ್ಯಚಟುವಟಿಕೆಗಳು ಎಂದಿನಂತೆ ನಡೆಯುತ್ತಿತ್ತು ಇದನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ ಕಾರಣ ನ್ಯಾಯಾಲಯ ಹಾಸನ ಜಿಲ್ಲಾ ಸಹಕಾರ ನಿಬಂಧಕರ ಅಧಿಕಾರಿಗಳಿಗೆ ಬೇಲೂರು ತಾಲೂಕು ಒಕ್ಕಲಿಗರ ಸಂಘದ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ತಮ್ಮ ಸುಪರ್ತಿಗೆ ಪಡೆಯುವಂತೆ ಆದೇಶ ನೀಡಿತು

ಈ ಪ್ರಕಾರ ಹಾಲಿ ಇದ್ದಂತ ಅಡಾಕ್ ಕಮಿಟಿ ಆಡಳಿತ ಮಂಡಳಿಯವರಿಗೆ ಸಹಕಾರ ನಿಬಂಧಕರ ಅಧಿಕಾರಿಗಳು ನೋಟಿಸ್ ನೀಡಿ ಸಂಘದ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ನಿಲ್ಲಿಸಿ ನಮ್ಮ ಸುಪರ್ದಿಗೆ ನೀಡುವಂತೆ ತಿಳಿಸಿದರು

ಕಮಿಟಿಯವರು ಸುಪರ್ದಿಗೆ ನೀಡದ ಹಿನ್ನೆಲೆಯಲ್ಲಿ ಎಂದಿನಂತೆ ಸಂಘದ ವ್ಯವಾರಗಳ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದರು ಇಂದು ಏಕಾಏಕಿ ಹಾಸನ ಜಿಲ್ಲಾ ಸಹಕಾರ ನಿಬಂಧಕರ ಕಚೇರಿಯ ಮೇಲಾಧಿಕಾರಿಗಳ ಆದೇಶದ ಮೇರೆಗೆ ಕಚೇರಿಯ ಪ್ರಥಮ ದರ್ಜೆ ಸಹಾಯಕರಾದ ಲೀಲಾ ಮತ್ತು ಅವರ ತಂಡ ಪೊಲೀಸ್ ಇಲಾಖೆಯ ಸಿಬ್ಬಂದಿಗಳ ಸಹಕಾರದೊಂದಿಗೆ ಒಕ್ಕಲಿಗರ ಸಂಘದ ಬಳಿ ಬಂದು ಕಚೇರಿಯ ಬೀಗ ಹೊಡೆದು ಒಳಗೆ ತೆರಳಿ ಕಚೇರಿಯ ಒಳಗಿದ್ದ ಎಲ್ಲಾ ವಸ್ತುಗಳು ಮತ್ತು ದಾಖಲಾತಿಗಳನ್ನು ವಸಪಡಿಸಿಕೊಳ್ಳುವ ಮೂಲಕ ಅವರ ಸುಪರ್ದಿಗೆ ಪಡೆದರು.

ಈ ಸಂದರ್ಭ ಹಾಸನ ಜಿಲ್ಲಾ ಸಹಕಾರ ನಿಬಂಧಕರ ಕಚೇರಿಯ ಪ್ರಥಮ ದರ್ಜೆ ಸಹಾಯಕರಾದ ಲೀಲಾ ಪತ್ರಿಕೆಯೊಂದಿಗೆ ಮಾತನಾಡಿ ನಮ್ಮ ಕಚೇರಿಯ ಮೇಲಾಧಿಕಾರಿಗಳ ಆದೇಶದಂತೆ ಬೇಲೂರು ತಾಲೂಕು ವಕ್ಕಲಿಗರ ಸಂಘದ ಆಡಳಿತ ಅಧಿಕಾರಿಯಾಗಿ ನನ್ನನ್ನು ನೇಮಕ ಮಾಡಲಾಗಿದೆ ಅದರಂತೆ ಈ ಹಿಂದೆ ಹಾಲಿ ಇದ್ದಂತಹ ಆಡಳಿತ ಸಮಿತಿಗೆ ನೋಟಿಸ್ ನೀಡಿ ಸಂಘದ ಎಲ್ಲಾ ವ್ಯವಹಾರವನ್ನು ನಮ್ಮ ಸುಪರ್ದಿಗೆ ನೀಡುವಂತೆ ತಿಳಿಸಿದರು

ನಮಗೆ ಸಹಕಾರ ನೀಡಿದ ಹಿನ್ನಲೆಯಲ್ಲಿ ಇಂದು ಕಾನೂನು ಪ್ರಕಾರ ಪೊಲೀಸ್ ಇಲಾಖೆಯ ಸಿಬ್ಬಂದಿಗಳ ನೆರವಿನೊಂದಿಗೆ ನಮ್ಮ ಸುಪರ್ದಿಗೆ ಪಡೆದುಕೊಳ್ಳಲಾಗಿದೆ ಎಂದರು.

ಇಂದಿನಿಂದ ಮೇಲಾಧಿಕಾರಿಗಳ ಸೂಚನೆ ಬರುವವರೆಗೆ ನಾವು ಸಹ ಆಡಳಿತ ಅಧಿಕಾರಿಗಳಾಗಿ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದೇವೆ ಎಂದರು

ಈ ಸಂದರ್ಭದಲ್ಲಿ ಖಾಲಿದ್ ಹಾಗೂ ಕುಮಾರ್ ಬೇಲೂರು ವೃತ ನಿರೀಕ್ಷಕರಾದ ಸುಬ್ರಮಣ್ಯ ಪಿಎಸ್ಐ ನಿಂಗರಾಜು ಇತರರು ಹಾಜರಿದ್ದರು

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed