ಬೇಲೂರು : ತಾಲೂಕಿನ ನಾರ್ವೆ ಗ್ರಾಪಂ ವ್ಯಾಪ್ತೀಯ ಬಿರಡಹಳ್ಳಿ ಕಿರು ಸೇತುವ ಸಂಪೂರ್ಣವಾಗಿ ಜಲಾವೃತವಾಗಿದ್ದು ಕೆಲಸದ ನಿಮಿತ್ತ ದರ್ಶನ್ ಹಾಗೂ ಸ್ನೇಹಿತ ಎಂಬುವರು ವಾಪಸ್ಸು ತಮ್ಮ ಗ್ರಾಮಕ್ಕೆ ಹಿಂದಿರುಗುತ್ತಿರುವ ಸಂದರ್ಭದಲ್ಲಿ ಸೇತುವೆ ಮೇಲೆ ನೀರು ಹರಿಯುತ್ತಿರುವುದನ್ನು ಗಮನಿಸದೆ ಸೇತುವೆ ದಾಟುವ ಸಂದರ್ಭದಲ್ಲಿ ಮದ್ಯ ಭಾಗದಲ್ಲಿ ಕಾರು ನೀರಿನ ರಭಸಕ್ಕೆ ಕಾರು ಮುಂದೆ ಸಾಗದೆ ಎಳೆಯುತ್ತಿತ್ತು.

ತಕ್ಷಣ ಗ್ರಾಮದ ಯುವಕರಿಗೆ ದೂರವಾಣಿ ಮೂಲಕ ವಿಷಯ ತಿಳಿಸಿ ತಕ್ಷಣ ಟ್ರಾಕ್ಟರ್ ಹಾಗು ಆಪೆ ಆಟೋಗಳ ಮೂಲಕ ಕಾರನ್ನು ಹೊರಗೆಳೆದಿದ್ದಾರೆ.

ಈ ವೇಳೆ ಮಾತನಾಡಿದ ಗ್ರಾಮದ ಯುವ ಶ್ರೀಕಾಂತ್ ನಮ್ಮ ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಅಪಾರ ಆಸ್ತಿ ಹಾನಿಯಾಗಿದ್ದು ಇದರ ಜೊತೆ ನಮ್ಮ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆ ಈಗಾಗಲೇ ಮಳೆಯಿಂದ ಸಂಪೂರ್ಣ ಸೇತುವೆ ಮುಳುಗಿಹೋಗಿದ್ದು ವಾಹನ ಸವಾರರು ನಮ್ಮ ಗ್ರಾಮಕ್ಕೆ ಬರಲು ಪರದಾಡುತ್ತಿದ್ದು ೨೦ ಕಿಮೀ ಸುತ್ತಿ ಬರುವ ಸ್ಥಿತಿ ನಿರ್ಮಾಣವಾಗಿದೆ.

ದಯಮಾಡಿ ಯಾರು ಸಹ ಈ ರಸ್ತಯಲ್ಲಿ ಗ್ರಾಮಕ್ಕೆ ಬರದಂತೆ ಮನವಿ ಮಾಡಿದರಲ್ಲದೆ ನಮ್ಮ ಕೊರಲು ಗದ್ದೆ ಗ್ರಾಮದಲ್ಲಿ ಮಂಜುನಾಥ್ ,ಸಾರ್ಥಕ್ ಶಶಾಂಕ್ ಎಂಬುವವರಿಗೆ ದೇರಿದ ನಾಟಿ ಗದ್ದೆ ಸುಮಾರು ೫೦ ಎಕರೆ ಭತ್ತದ ಬಿತ್ತನೆ ಮಾಡುವ ನಾಟಿ ಸಂಪೂರ್ಣ ಕೊಚ್ಚಿ ಹೋಗಿದೆ ಎಂದರು.

ಈ ಸಂದರ್ಭದಲ್ಲಿ ಸಂತೋಷ್ ,ಪ್ರಜ್ವಲ್,ಭಾರ್ಗವ್ಣಸಂದೀಪ್,ತೇಜು,ದರ್ಶನ್ ಹಾಜರಿದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *