ಬೇಲೂರು : ತಾಲೂಕು ಒಕ್ಕಲಿಗರ ಸಂಘದ ಕಚೇರಿಯ ಬಳಿ ಆಗಮಿಸಿದ ಹಾಸನ ಜಿಲ್ಲಾ ಸಹಕಾರ ನಿಬಂಧಕರ ಕಚೇರಿ ಅಧಿಕಾರಿಗಳು ಪೊಲೀಸ್ ಇಲಾಖೆಯ ಸಿಬ್ಬಂದಿಗಳ ಸಹಕಾರದೊಂದಿಗೆ ಒಕ್ಕಲಿಗರ ಸಂಘದ ಕಚೇರಿಯ ಬೀಗ ಮುರಿದು ಸಂಘದ ಕಚೇರಿಯ ವ್ಯವಹಾರವನ್ನು ತಮ್ಮ ಸುಪರ್ದಿಗೆ ಪಡೆದುಕೊಂಡ ಅಧಿಕಾರಿಗಳ ವಿರುದ್ಧ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಶೈಲೇಶ್ ಗೌಡ, ಕಾರ್ಯದರ್ಶಿ ಸುರೇಶ್ ಮತ್ತು ಉಪಾಧ್ಯಕ್ಷ ಜಿಕೆ ಕುಮಾರ್ ಖಂಡಿಸಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು

ತಾಲೂಕು ಒಕ್ಕಲಿಗರ ಸಂಘದ ಆಡಳಿತ ಮಂಡಳಿ ಇದುವರೆಗೂ ಉತ್ತಮ ಆಡಳಿತ ಮಾಡುತ್ತಾ ಬಂದಿದ್ದು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ ಅಲ್ಲದೆ ಸಂಘದಲ್ಲಿ ಈಗಾಗಲೇ 1 ಕೋಟಿಗೂ ಅಧಿಕ ಹಣವನ್ನು ಕ್ರೂಢೀಕರಿಸಲಾಗಿದೆ ಇದನ್ನ ಸಹಿಸದ ಈ ಹಿಂದಿನ ಆಡಳಿತ ಮಂಡಳಿಯ ಗುಂಪೊಂದು ತಮ್ಮ ಈ ಹಿಂದೆ ನಡೆದ ಅವ್ಯವಹಾರವನ್ನು ಮುಚ್ಚಿ ಕೊಳ್ಳಲು ಸಂಘದ ವಿರುದ್ಧ ಇಲ್ಲಸಲ್ಲದ ದೂರುಗಳನ್ನು ನೀಡಿ ಸಂಘವನ್ನು ಬೀದಿಗೆ ತರುವ ಹುನ್ನಾರ ನಡೆಸುತ್ತಿದ್ದಾರೆ

ಈಗಾಗಲೇ ಈ ವಿಚಾರವಾಗಿ ನಾವು ನ್ಯಾಯಾಲಯದಿಂದ ಆಡಳಿತ ಕಮಿಟಿ ವಜಾಗೊಳಿಸದಂತೆ ತಡೆಯಾಜ್ಞೆ ತಂದಿದ್ದೇವೆ ಆದರೂ ಸಹ ಹಾಸನ ಜಿಲ್ಲಾ ಸಹಾಯಕ ನಿಬಂಧಕರ ಕಚೇರಿ ಅಧಿಕಾರಿಗಳು ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಇಂದು ಏಕಾಏಕಿ ಪೊಲೀಸ್ ಸಿಬ್ಬಂದಿಯ ಸಹಕಾರ ಪಡೆದು ಕಚೇರಿಯ ಬೀಗ ಮುರಿದು ಒಳ ಪ್ರವೇಶ ಮಾಡಿ ಸಂಘದ ದಾಖಲಾತಿಗಳನ್ನು ವಶಪಡಿಸಿಕೊಂಡು ನ್ಯಾಯಾಲಯದ ಆದೇಶಕ್ಕೆ ದಕ್ಕೆ ಉಂಟು ಮಾಡಿದ್ದಾರೆ

ಇದರ ವಿರುದ್ಧ ನಾವು ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ನಡೆಸುತ್ತೇವೆ ಎಂದ ಅವರು ಈಗಾಗಲೇ ಈ ಹಿಂದೆ ಸಂಘದ ಚುನಾವಣೆ ನಡೆಸುವಂತೆ ನಮ್ಮ ಆಡಳಿತ ಮಂಡಳಿ ಸಂಬಂಧಪಟ್ಟ ಅಧಿಕಾರಿಗಳಿಗೆ ಲಿಖಿತವಾಗಿ 2 ಬಾರಿ ಮನವಿ ಮಾಡಿದ್ದೇವೆ.

ಅದರಂತೆ ಚುನಾವಣೆ ನಡೆಸಲು ನಿಬಂಧಕ ರ ಕಚೇರಿ ಅಧಿಕಾರಿಗಳು ಕೇಳಿದಂತೆ ಸಂಘದಿಂದ 50 ಸಾವಿರದ ಚುನಾವಣೆ ವೆಚ್ಚವನ್ನು ಸಹ ಬರಿಸಿದ್ದೇವೆ ಆದರೆ ಚುನಾವಣೆ ನಡೆಸದೆ ಸಂಘಕ್ಕೆ ಸಂಬಂಧ ಪಡೆದೆ ಇದ್ದವರ ಮಾತು ಕೇಳಿಕೊಂಡು ಇಂದು ಏಕಾಯಕಿ ಆಗಮಿಸಿದ ಜಿಲ್ಲಾ ಸಹಕಾರ ನಿಬಂಧಕರ ಕಚೇರಿಯ ಇಲಾಖೆ ಅಧಿಕಾರಿಗಳು ಸಂಘದ ಕಚೇರಿಯ ಬೀಗ ಮುರಿದು ವಶಪಡಿಸಿಕೊಂಡಿದ್ದಾರೆ

ಇದರ ವಿರುದ್ಧ ಕಾನೂನು ಹೋರಾಟ ನಡೆಸಲು ಮುಂದಾಗುತ್ತೇವೆ ಎಂದರು .

ಈ ಸಂದರ್ಭ ಪುನೀತ್ ಗೌಡ. ಸೋಮನಹಳ್ಳಿ ನಾಗೇಶ್. ಎಂ ಜೆ ನಿಶಾಂತ್. ಸೇರಿದಂತೆ ಇತರರು ಹಾಜರಿದ್ದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed