ಹಾಸನ: ಹಾಸ್ಟೇಲ್ ಮೂಲಭೂತ ಸೌಕರ್ಯದ ಕೊರತೆ ಖಂಡಿಸಿ ವಿದ್ಯಾರ್ಥಿಗಳೆಲ್ಲಾ ತಮ್ಮ ರೂಮಿನಿಂದ ಹೊರಗೆ ಬಂದು ಉಪವಾಸ ಸತ್ಯಗ್ರಹದೊಂದಿಗೆ ಅನಿರ್ಧಿಷ್ಟವಧಿ ಪ್ರತಿಭಟನಾ ಧರಣಿ ಮಾಡಿದ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.

ನಗರದ ಆಕಾಶವಾಣಿ ಹಿಂಬಾಗದ ರಸ್ತೆ ಬಳಿ ಇರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮೆಟ್ರಿಕ್ ನಂತರ ಬಾಲಕರ ವಿದ್ಯಾಥಿ ನಿಲಯ ಕಲ್ಲು ಕಟ್ಟೆ ಹಾಸ್ಟೇಲ್ ನಲ್ಲಿ ಯಾವ ಮೂಲಭೂತ ಸೌಕರ್ಯವಿಲ್ಲ ಎಂದು ವಿದ್ಯಾರ್ಥಿಗಳು ಹಾಸ್ಟೇಲ್ ನಿಂದ ಹೊರಗೆ ಬಂದು ದಿಡೀರ್ ಪ್ರತಿಭಟಿಸಿ ಆಕ್ರೋಶವ್ಯಕ್ತಪಡಿಸಿದರು.

ಎನ್.ಎಸ್.ವಿ ಮೈಸೂರು ಯೂನಿವರ್ ಸಿಟಿ ಉಪಾಧ್ಯಕ್ಷ ಪ್ರವೀಣ್ ಚೌಹಣ್ ಮತ್ತು ಹಾಸ್ಟೇಲ್ ವಿದ್ಯಾರ್ಥಿ ಯಶವಂತ್ ಮಾಧ್ಯಮದೊಂದಿಗೆ ಮಾತನಾಡಿ, ಈ ಕಲ್ಲುಕಟ್ಟಡ ವಿದ್ಯಾರ್ಥಿನಿಲಯದಲ್ಲಿ ಹಲವಾರು ಸಮಸ್ಯೆಗಳಿದ್ದು, ಈ ಬಗ್ಗೆ ವಾರ್ಡನ್ ಬಗ್ಗೆ ಹಲವಾರು ಬಾರಿ ಸಮಸ್ಯೆ ಹೇಳಿಕೊಂಡರೂ ಬಗೆಹರಸಿರುವುದಿಲ್ಲ. ಇಲ್ಲಿನ ಹಾಸ್ಟೇಲ್ ಹುಡುಗರು ಮನನೊಂದು ಮಂಗಳವಾರದಂದು ಬೆಳಿಗ್ಗೆ ೬ ಗಂಟೆಯಿಂದಲೇ ಪ್ರತಿಭಟನೆಗೆ ಕುಳಿತುಕೊಂಡಿದ್ದಾರೆ.

ಇಲ್ಲಿ ಸರಿಯಾದ ಊಟ ಇಲ್ಲದೆ ಇರುವ ವಿಚಾರ, ಹಾಸಿಗೆ, ಶೌಚಾಲಯದ ಅವ್ಯವಸ್ಥೆ, ಹಾಸ್ಟೇಲ್ ಸಮಸ್ಯೆ ವಿಚಾರವನ್ನು ವಾರ್ಡನ್ ಗೆ ಪ್ರಶ್ನೆ ಹಾಗೂ ಹೇಳಬಾರದೆಂದು ಹೊರಗಿನಿಂದ ಬಂದು ಜೀವ ಬೆದರಿಕೆ ಹಾಕುವುದು, ವಾರ್ಡನ್ ಮೊಬೈಲ್ ಮೂಲಕ ಹೇಳಿದಂತೆ ಹೊರಗಿನಿಂದ ಬಂದು ಈ ಜೀವ ಬೆದರಿಕೆಗೆ ಮುಖ್ಯ ಕಾರಣ ಎಂದು ದೂರಿದರು.

ಪ್ರಶ್ನೆ ಮಾಡಿದವರನ್ನು ಈ ಹಾಸ್ಟೇಲ್ ನಿಂದ ತೆಗೆದು ಹಾಕುವುದು, ವರ್ಗಾವಣೆ ಮಾಡುವುದು, ಈ ಹಾಸ್ಟೇಲ್ ನ್ನು ಹೊರಗಿನಿಂದ ನೋಡುವುದಕ್ಕೆ ಮಾತ್ರ ಅದ್ಭುತವಾಗಿ ಕಾಣುತ್ತದೆ. ಹಾಸ್ಟೇಲ್ ಒಳಗೆ ನೋಡಿದರೇ ಸಲ್ಪವೂ ಕೂಡ ಸ್ವಚ್ಛತೆ ಇರುವುದಿಲ್ಲ. ಕಿಟಿಕೆಗಳು ಸರಿಯಾಗಿರದೇ ನಮ್ಮ ವಸತಿಗಳಿಗೆ ಹಾವುಗಳು ಹಾಗಾಗ್ಗೆ ನುಗ್ಗುತ್ತಿರುತ್ತದೆ..

ಹಾಸ್ಟೇಲ್ ಕಸವನ್ನು ಈ ಆವರಣದಲ್ಲೆ ಎಸೆಯಲಾಗುತ್ತಿದ್ದು, ಸರಿಯಾದ ಶೌಚಾಲಯ ಇಲ್ಲದೇ ಗಬ್ಬ ನಾರುತ್ತಿದೆ. ಬೆಳಗಿನಿಂದ ಪ್ರತಿಭಟನೆ ನಡೆಸುತ್ತಿದ್ದರೂ ಸಂಬಂಧಪಟ್ಟ ಯಾವ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿರುವುದಿಲ್ಲ. ಈ ಸಮಸ್ಯೆ ಎಲ್ಲಾವೂ ಕೂಡಲೇ ಬಗೆಹರಿಯಬೇಕು. ಇಲ್ಲವಾದರೇ ಸಮಸ್ಯೆ ಬಗೆಹರಿಯುವವರೆಗೂ ಹಾಸ್ಟೇಲ್ ಒಳಗೆ ಹೋಗದೇ ಉಪವಾಸ ಕೂರುವುದಾಗಿ ಎಚ್ಚರಿಸಿದರು.

ಇಲ್ಲವಾದರೇ ಮುಂದೆ ಉಗ್ರವಾದ ಹೋರಾಟ ಆಗಬಹುದು. ಹಾಸ್ಟೇಲ್ ಗೆ ಬೀಗ ಹಾಕಿ ಹೊರಗೆ ಧರಣಿ ಕೂರಲಾಗುವುದು ಎಂದರು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡ ಸಿದ್ದಪ್ಪ, ಹಾಸ್ಟೇಲ್ ವಿದ್ಯಾರ್ಥಿಗಳಾದ ಕೀರ್ತಿ, ದಯಾನಂದ್, ವಿಕ್ರಮ್, ವಿನಯ್, ಪ್ರವೀಣ್, ಶಶಾಂಕ್, ಜೀವನ್, ರಾಘವೇಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *