ಬೇಲೂರು : ತಾಲೂಕಿನ ಹಳೇಬೀಡು ಹೋಬಳಿಯ ಚಟಚಟನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರಸಿಂಹರಾಜಪುರ ಗ್ರಾಮದಲ್ಲಿ ಸೋಮವಾರ ರಾತ್ರಿ ಸುರಿದ ಭಾರಿ ಮಳೆ ಗಾಳಿಗೆ ಎರಡು ವಾಸದ ಮನೆಗಳು ಬಿದ್ದು ಅಪಾರ ನಷ್ಟವಾಗಿರುವ ಘಟನೆಯಿಂದ ಮನ ಕುಲುಕುವಂತಾಗಿದೆ.

ಇದೇ ವೇಳೆ ನಂಜಾಪುರ ಗ್ರಾಮಸ್ಥ ಪರಮೇಶ್ ಪತ್ರಿಕೆಯೊಂದಿಗೆ ಮಾತನಾಡಿ ಸೋಮವಾರ ರಾತ್ರಿ ಸುರಿದ ಬಾರಿ ಮಳೆಗಾಳಿಯಿಂದ ನರಸಿಂಹರಾಜಪುರ ಗ್ರಾಮದ ಚಿನ್ನ ಭೋವಿ ಹಾಗೂ ವೆಂಕಟಮ್ಮ ಮತ್ತು ಸಿದ್ಧಭೋವಿಯವರಿಗೆ ಸೇರಿದ ವಾಸದ ಮನೆಗಳು ಮಣ್ಣಿನಿಂದ ಕೂಡಿದ ಗೋಡೆಯಾಗಿರುತ್ತದೆ ಆದರೆ ಸೋಮವಾರ ರಾತ್ರಿ 1:30ರ ಸಮಯದಲ್ಲಿ ಸುರಿದ ಬಾರಿ ಮಳೆಗಾಳಿಯಿಂದಾಗಿ ಗೋಡೆಗಳು ಕುಸಿದು ಬಿದ್ದ ಪರಿಣಾಮದಿಂದಾಗಿ ಮನೆಯಲ್ಲಿದ್ದ ಅಪಾರ ಪ್ರಮಾಣದ ವಸ್ತುಗಳು ಜಖಂಗೊಂಡು ತುಂಬಲಾರದ ನಷ್ಟ ಉಂಟಾಗಿರುತ್ತದೆ

ಅದೃಷ್ಟಾವತ್ ಮನೆಯ ನಿವಾಸಿಗಳು ಬೇರೆ ಕಡೆ ಮಲಗಿದ್ದ ಕಾರಣ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದ ಅವರು ಸರ್ಕಾರ ಬುಡಕಟ್ಟು ಜನಾಂಗದ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ಅವರ ಬದುಕಿಗೆ ಆಸರೆ ಆಗಬೇಕು ಎಂದು ಸಾಂತ್ವಾನ ಹೇಳುವ ಮೂಲಕ ಸರ್ಕಾರ ಕೂಡಲೇ ಇತ್ತ ಗಮನ ಹರಿಸಿ ಇವರಿಗೆ ಆರ್ಥಿಕವಾಗಿ ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಮನವಿ ಮಾಡಿದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed