ಬದಲಾದ ಹವಾಮಾನ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿ, ಮತ್ತು ಕಾಳು ಮೆಣಸಿನ ಬೆಲೆಯಲ್ಲಿ ವೆತ್ಯಾಸ, ತೋಟಗಳಿಗೆ ಕಾರ್ಮಿಕರ ಸಮಸ್ಯೆ, ಕಡಿಮೆ ಜಾಗದಲ್ಲಿ ಅತೀ ಹೆಚ್ಚು ಇಳುವರಿ ಪಡೆಯುವ ಅನಿವಾರ್ಯತೆ ಇರುವುದರಿಂದ
ಕಾಫಿ ಬೆಳೆಗಾರ ಲಾಭದಾಯಕವನ್ನಾಗಿಸುವ ಸಲುವಾಗಿ ಕಾಫಿ ಬೆಳೆಗೆ ಗೊಬ್ಬರವನ್ನು, ಹೇಗೆ, ಎಷ್ಟು, ಯಾವ ಮಿಶ್ರಣ, ಎಷ್ಟು ಅಂತರ, ಮಣ್ಣಿನ ಫಲವತ್ತಾತೆ ಉಳಿಸುವ ನಿಟ್ಟಿನಲ್ಲಿ ಪಾಲಿಯರ್ ಸ್ಪ್ರೇ ಮಾಡುವುದು ಹೇಗೆ, ಎಷ್ಟು ಎಂಬುದರ ಬಗ್ಗೆ
ಹಿರಿಯ, ಅನುಭವಿ ಬೆಳೆಗರಾರು ಹಾಗೂ ಬಾಳೆಹೊನ್ನೂರ್ ಕಾಫಿ ಸಂಶೋಧನಾಲಾಯದ ರಾಸಾಯನ ಶಾಸ್ತ್ರದ ವಿಜ್ಞಾನಿಗಳಿಂದ ವಿಚಾರ ವಿನಿಮಯ, ಹಾಗೂ ಪ್ರಾತ್ಯಕ್ಷತೆ ಕಾರ್ಯಕ್ರಮವನ್ನು, ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ವತಿಯಿಂದ ಬೇಲೂರ್ ತಾಲ್ಲೂಕು ಗೆಂಡೆಹಳ್ಳಿ ಜಿ ಕೆ ಕುಮಾರ ತೋಟದಲ್ಲಿ ದಿನಾಂಕ 25 5 2024 ನೇ ಶನಿವಾರ ನೆಡೆಸಲು ತೀರ್ಮಾನಿಸಲಾಗಿದ್ದು, ಇದರ ಸದುಪಯೋಗವನ್ನು ಬೆಳೆಗರಾರು ಪಡೆಯಬೇಕಾಗಿ ಕೋರಿದೆ