ಬೇಲೂರ : ಸಮೀಪದ ತಗರೆ ಗ್ರಾಮದ ಚೌಡನಹಳ್ಳಿ ಗ್ರಾಮದ ದೊಡ್ಡ ಕೆರೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಹೂಳೆತ್ತುವ ಕಾಮಗಾರಿ ಪೂರ್ಣವಾಗಿರುವುದನ್ನು ವೀಕ್ಷಣೆ ಮಾಡಿ ಮಾತನಾಡಿದ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಮ್ಮ ಊರು ನಮ್ಮ ಕೆರೆ ಕಾರ್ಯಕ್ರಮದಡಿ ಕೆರೆಗಳನ್ನು ಪುನಶ್ಚೇತನಗೊಳಿಸಿದೆ

ಈ ಕೆರೆ ಜನರ ಅನುಕೂಲಕ್ಕಾಗಿ ಕೆರೆ ಹೂಳೆತ್ತುವ ಕಾಮಗಾರಿಯನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸಲಾಗಿದ್ದು ಜನರು ಇದರ ಸದುಪಯೋಗ ಪಡೆಯಬೇಕು ಎಂದು ಹೇಳಿದರು.

ಪ್ರಕೃತಿಯು ನಮಗೆ ಹಲವಾರು ಉಪಯೋಗಗಳನ್ನು ನೀಡಿದೆ ಆದರೆ ನಾವುಗಳು ಪ್ರಕೃತಿಯನ್ನು ನಾಶಪಡಿಸಲು ಮುಂದಾಗಿರುವುದು ನಿಜಕ್ಕೂ ವಿಪರ್ಯಾಸ ಆದ್ದರಿಂದ ಮುಂದಿನ ಪೀಳಿಗೆಗೆ ಕೆರೆಕಟ್ಟೆಗಳು ಉಳಿದಾಗ ಮಾತ್ರ ಉತ್ತಮ ಜೀವನ ನಡೆಸಲು ಸಾಧ್ಯ ,ತಾಲ್ಲೂಕಿನಲ್ಲಿ ಎಲ್ಲಿ ಕೆರೆಗಳು ಅಭಿವೃದ್ಧಿಯಾಗಿಲ್ಲ ಅವುಗಳನ್ನು ಅಭಿವೃದ್ಧಿಗೋಳಿಸಲಾಗುವುದು

ಯಾರೆ ಕೆರೆ ಒತ್ತುವರಿ ಮಾಡಿರುವುದು ಕಂಡು ಬಂದರು ತೆರವುಗೊಳಿಸಿ ಕೆರೆಗಳನ್ನು ಉಳಿಸಲಾಗುವುದು ಎಂದರು.

ತಾಲೂಕು ರೈತ ಸಂಘದ ಅಧ್ಯಕ್ಷ ಹಾಗೂ ಕೆರೆ ಅಭಿವೃದ್ಧಿ ಸಮಿತಿಯ ಸದಸ್ಯ ಭೋಗಮಲ್ಲೇಶ್ ಮಾತನಾಡಿ ಗ್ರಾಮದಲ್ಲಿ ಕೆರೆ ಪುನಶ್ಚೇತನಗೊಳಿಸಿರುವುದರಿಂದ ಇಲ್ಲಿನ ರೈತರಿಗೆ ಜನ ಜಾನುವಾರುಗಳಿಗೆ ತುಂಬಾ ಅನುಕೂಲವಾಗಲಿದೆ ಸರ್ಕಾರ ಇಂತಹ ಕೆರೆ ಅಭಿವೃದ್ಧಿಗೆ ಕೋಟ್ಯಾಂತರರು ಖರ್ಚು ವೆಚ್ಚ ಮಾಡಿದರು ಇಷ್ಟೊಂದು ಅಚ್ಚುಕಟ್ಟಾಗಿ ಸ್ವಚ್ಛ ಮಾಡಲು ಸಾಧ್ಯವಿಲ್ಲ ಆದರೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಮ್ಮ ಊರು ನಮ್ಮ ಕೆರೆ ಕಾರ್ಯಕ್ರಮದಡಿ ಕೇವಲ 25 ದಿನಗಳಲ್ಲಿ ಅಂದಾಜು ಏಳುವರೆ ಲಕ್ಷ ವೆಚ್ಚದಲ್ಲಿ ಕಾಮಗಾರಿ ಪೂರ್ಣಗೊಳಿಸಿದ್ದು ಶ್ಲಾಘನೀಯ ಎಂದು ಹರ್ಷ ವ್ಯಕ್ತಪಡಿಸಿದರೆ.

ಅಲ್ಲದೆ ಅವರು ಕೆರೆಗಳನ್ನು ಅಭಿವೃದ್ಧಿಪಡಿಸಿ ಹೋಗಿರುವುದು ನಮ್ಮೆಲ್ಲರ ಅನುಕೂಲಕ್ಕಾಗಿ ಪ್ರತಿಯೊಬ್ಬ ಗ್ರಾಮದ ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳುವುದರ ಜೊತೆಗೆ ಆಕೆರೆಯನ್ನು ಉಳಿಸುವಂತಹ ಕೆಲಸವನ್ನು ನಾವು ಮುಂದಿನ ದಿನಗಳಲ್ಲಿ ಮಾಡುತ್ತೇವೆ ಎಂದು ಭರವಸೆ ನೀಡಿದರು.

ನಂತರ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕ ಚಂದ್ರಶೇಖರ್ ನಾವು ಮೊದಲಿಗೆ ಈ ಕೆರೆಗೆ ಬಂದು ಗಮನಿಸಿದಾಗ ಸಂಪೂರ್ಣವಾಗಿ ಕೆರೆ ಮಣಿನಿಂದ ತುಂಬಿ ಹೋಗಿತ್ತು ನಂತರ ಗ್ರಾಮಸ್ಥರ ಹಾಗೂ ರೈತರ ಸಹಕಾರದಿಂದ ಕೇವಲ 25 ದಿನಗಳಲ್ಲಿ ಸುಮಾರು ಶ್ರೀ ಕ್ಷೇತ್ರ ಧರ್ಮಸ್ಥಳದ ವೆಚ್ಚ 5 ಲಕ್ಷ ಹಾಗೂ ಸುಮಾರು 7,000 ಸಾವಿರದಷ್ಟು ಮಣ್ಣನ್ನ ರೈತರ ಪಡೆದುಕೊಂಡ ಹಿನ್ನೆಲೆಯಲ್ಲಿ ಸುಮಾರು 2.50 ಲಕ್ಷ ಹಣ ಬಂದು ಒಟ್ಟು ಏಳುವರೆ ಲಕ್ಷ ವೆಚ್ಚದಲ್ಲಿ ಉತ್ತಮವಾದಂತಹ ಕೆರೆಯನ್ನು ನಿರ್ಮಾಣ ಮಾಡಿದ್ದೇವೆ ಇದರಿಂದ ಸುಮಾರು 100 ಎಕರೆ ಭೂಮಿಯ ಪ್ರದೇಶದ ರೈತರಿಗೆ ಅನುಕೂಲವಾಗುವುದರಿಂದ ಕೆರೆಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನ ಕೃಷಿ ಅಧಿಕಾರಿ ಗೋವಿಂದಪ್ಪ, ಗ್ರಾಮಸ್ಥರಾದ ಶಿವಣ್ಣ ಸೇರಿದಂತೆ ಗ್ರಾಮಸ್ಥರು ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *