ಅರೇಹಳ್ಳಿ: ಬೇಲೂರು ತಾಲೂಕಿನ ಅರೇಹಳ್ಳಿ ಸುತ್ತಮುತ್ತ ದಿನ ನಿತ್ಯ ಕಾಡಾನೆ ಹಾವಳಿ ಹೆಚ್ಚಾಗುತ್ತಿದ್ದು ರೈತರು ತೋಟದ ಕೂಲಿ ಕಾರ್ಮಿಕರು ಜೀವ ಕೈಯಲ್ಲಿ ಹಿಡಿದುಕೊಂಡು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುವ ಕ್ಲಿಷ್ಟಕರ ಪರಿಸ್ಥಿತಿಯ ನಡುವಿನಲ್ಲಿ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರ ಮೇಲು ದಾಳಿ ಮುಂದುವರೆಯುತ್ತಿದೆ.
ಕೆಲ ದಿನಗಳ ಹಿಂದೆ ಆಟೋ ಮೇಲೆ ದಾಳಿ ನಡೆಸಿದಂತೆ ಇಂದು ಬೆಳಿಗ್ಗೆ ಸುಮಾರು 7 ರ ಸಮಯದಲ್ಲಿ ಪಟ್ಟಣದ ರೋಟರಿ ಶಾಲೆಯಲ್ಲಿ ವಾಚ್ ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಸುಮಾರು 55 ವರ್ಷದ ಡೆಸಿನ್ ಡಿಸೋಜಾ ಎಂಬುವವರು ಕಾರ್ಯ ನಿಮಿತ್ತ ಮಲಸಾವರಕ್ಕೆ ತನ್ನ ಸ್ಕೂಟರ್ ನಲ್ಲಿ ತೆರಳುತ್ತಿದ್ದ ವೇಳೆ ಕಲ್ಲಗಂಡಿ ತಿರುವಿನಲ್ಲಿ ಎರಡು ಕಾಡಾನೆಗಳು ಕಾಣಿಸಿಕೊಂಡವು
ಇದನ್ನು ಕಂಡು ತಕ್ಷಣ ಬೈಕನ್ನು ತಿರುಗಿಸುವ ವೇಳೆ ಒಂಟಿ ಕಾಡಾನೆಯೊಂದು ಬೈಕ್ ನ್ನು ಎಳೆದಾಡಿ ತನ್ನ ಸೊಂಡಿಲಿನಿಂದ ಅವರ ಮೇಲೆ ತಿವಿದು ಅಲ್ಲಿಂದ ಕಾಲ್ಕಿತ್ತಿದೆ.
ನಂತರ ಸ್ಥಳೀಯರು ಹತ್ತಿರದ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.