ಬೇಲೂರು : ಪಟ್ಟಣದ ಸುದನ್ವ ಗೌಡ ಒಕ್ಕಲಿಗರ ಕಲ್ಯಾಣ ಮಂಟಪದ ಬಳಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು ತಾಲೂಕು ಒಕ್ಕಲಿಗರ ಸಂಘದ ಅಡಾಕ್ ಸಮಿತಿಯ ಹಂಗಾಮಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳಾಗಿದ್ದವರು ೨೦೧೭ ರಿಂದ ೨೦೨೨ ರ ವರಗೆ ವಾರ್ಷಿಕ ಮಹಾಸಭೆ ನಡೆಸದೆ ಸರಿಯಾದ ಲೆಕ್ಕ‌ಪತ್ರ ಮಂಡಿಸದಿದ್ದರಿಂದ ಆ ಹಂಗಾಮಿ ಅಧ್ಯಕ್ಷರಾಗಿರುವ ಶೈಲೇಶ್ ಗೌಡ. ಕಾರ್ಯದರ್ಶಿ ಸುರೇಶ್ ಸೇರಿದಂತೆ ಅಡಾಕ್ ಸಮಿತಿಯನ್ನು ರದ್ದುಗೊಳಿಸಿ ನೂತನ ಆಡಳಿತ ಮಂಡಳಿಗೆ ಅವಕಾಶ ಕಲ್ಪಿಸಬೇಕೆಂದು ಜಿಲ್ಲಾ ಉಪನಿಂಭಂದಕರ ಕಚೇರಿಗೆ ಕೆಲವು ದಿನಗಳಿಂದ ಮನವಿ ಸಲ್ಲಿಸಲಾಗಿತ್ತು

ಅದರಂತೆ ಹಂಗಾಮಿ ಆಡಳಿತ ಮಂಡಳಿಗೆ ನೊಟಿಸ್ ನೀಡಿ ಸಂಪೂರ್ಣ ದಾಖಲಾತಿಗಲನ್ನು ಕಚೇರಿಗೆ ಒದಗಿಸುವಂತೆ 2 ಬಾರಿ ನೋಟಿಸ್ ನೀಡಿದರೂ ಅಡಾಕ್ ಸಮಿತಿಯವರು ಉದ್ದಟತನ ತೋರಿದ ಹಿನ್ನಲೆಯಲ್ಲಿ ಇವರ ವಿರುದ್ದ ಶಿಸ್ತುಕ್ರಮ ಕೈಗೊಳ್ಳಲು ಉಪ ನಿಭಂದಕರ ಕಚೇರಿಯಿಂದ ಆಡಳಿತ ಆಧಿಕಾರಿಯನ್ನು ನೇಮಿಸಿತ್ತು

ಅದರಂತೆ ಸೋಮವಾರ ಈ ಹಿಂದೆ ಇದ್ದ ಹಂಗಾಮಿ ಅಧ್ಯಕ್ಷರಾದ ಶೈಲೇಶ್ ಗೌಡ ಮತ್ತು ಕಾರ್ಯದರ್ಶಿಗಳು ಯಾವುದೇ ಲೆಕ್ಕ ಪತ್ರ ನೀಡದೆ ಉದ್ದಟತನ ಮುಂದುವರೆಸಿದ ಕಾರಣ ಅನಿವಾರ್ಯವಾಗಿ ಪೊಲಿಸರ ಸಮಕ್ಷಮದಲ್ಲಿ ಮಹಜರು ಮಾಡಿ ಕ್ರಮ ಕೈಗೊಂಡು ಸಂಘದ ಕಾರ್ಯ ಚಟುವಟಿಕೆಯನ್ನು ಆಡಳಿತ ಅಧಿಕಾರಿ ಸುಪರ್ದಿಗೆ ಪಡೆಯಲಾಗಿದೆ

ಸಂಘದ ಜವಾಬ್ದಾರಿಯನ್ನು ಆಡಳಿತ ಅಧಿಕಾರಿಗೆ ಕೊಡದೆ ಉದ್ದಟತನ ತೋರಿದ ಇವರಿಗೆ ಮುಂದಿನ ದಿನದಲ್ಲಿ ಜನರೇ ತಕ್ಕ ಶಾಸ್ತಿ ಮಾಡಲಿದ್ದಾರೆ ಎಂದ ಅವರು ಈ ಹಂಗಾಮಿ ಕಾರ್ಯಕಾರಿ ಸಮಿತಿಯಿಂದ ಮುಂದೆ ನಡೆಯುವ ಚುನಾವಣೆ ಪಾರದರ್ಶಕವಾಗಿ ನಡೆಯುವುದಿಲ್ಲ ಎಂದು ತಿಳಿದು ನಿಷ್ಪಕ್ಷಪಾತವಾಗಿ ಹಾಗೂ ಪಾರದರ್ಶಕವಾಗಿ ಚುನಾವಣೆ ನಡೆಸುವಂತೆ ತಾಲೂಕು ಒಕ್ಕಲಿಗರ ಸಂಘದ ಪರವಾಗಿ ಸರ್ವಸದಸ್ಯರು ಮನವಿ ಮಾಡಲಾಗಿದೆ.

ತಾಲೂಕಿನಲ್ಲಿ ಇಂತಹ ಸುಂದರವಾದ ಒಕ್ಕಲಿಗರ ಸಮುದಾಯದ ಭವನವಿದ್ದು ಕೊಡುಗೈ ದಾನಿಗಳಾದ ವೈಡಿ ನಂಜೇಗೌಡ ಕುಟುಂಬದವರು ಈ ಹಿಂದೆ ಆರ್ಥಿಕ ಸಹಾಯವನ್ನು ಮಾಡಿದ್ದಾರೆ.ಅಲ್ಲದೆ ಮಾಜಿ ಶಾಸಕ ಹಾಗೂ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿದ್ದ ದಿವಂಗತ ವೈ ಎನ್ ರುದ್ರೇಶಗೌಡರವರ ನೇತೃತ್ವದಲ್ಲಿ ಸುಂದರವಾದ ಕಲ್ಯಾಣ ಮಂಟಪ ನಿರ್ಮಾಣ ಮಾಡಿ ಒಕ್ಕಲಿಗರ ಜನಾಂಗಕ್ಕೆ ಸೀಮಿತವಾಗದೆ ಎಲ್ಲಾ ಜನಂಗದವರಿಗೂ ಕೈಗೆಟುಕುವ ಬೆಲೆಯಲ್ಲಿ ಕಲ್ಯಾಣ ಮಂಟಪ ಬಾಡಿಗೆ ನೀಡುವ ಮೂಲಕ ಅಭಿವೃದ್ಧಿ ಮಾಡಿಕೊಂಡು ಬರುತ್ತಿದ್ದರು ಅದರೆ ಹಂಗಾಮಿ ಅದ್ಯಕ್ಷರು ಹಾಗೂ ಆಡಳಿತ ಮಂಡಳಿಯವರು ಸುಮ್ಮನೆ ಮಾಜಿ ಅಧ್ಯಕ್ಷ ರಾಗಿದ್ದ ವೈ ಎನ್ ರುದ್ರೇಶ್ ಗೌಡರ ಮೇಲೆ ಇಲ್ಲ ಸಲ್ಲದ ಅರೋಪ ಮಾಡುವ ಮೂಲಕ ತಮ್ಮ ಹಂಗಾಮಿ ಅವಧಿಯಲ್ಲಿ ಮಾಡಿರುವ ಹಗರಣಗಳನ್ನು ಮುಚ್ಚಿಕ್ಕೊಳ್ಳಲು ಆರೋಪ ಮಾಡುತ್ತಿರುವುದು ಖಂಡನೀಯ.

ಇಂತಹ ಸುಳ್ಳು ಆರೋಪಗಳನ್ನು ನಾವು ಖಂಡಿಸುತ್ತೇವೆ ಅದನ್ನು ನಿಲ್ಲಿಸದಿದ್ದರೆ ಅವರ ವಿರುದ್ಧ ಸೂಕ್ತ‌ಕಾನೂನು ರೀತಿ ಹೋರಾಟ ಮಾಡಲಾಗುತ್ತದೆ ಎಂದವರು ಹಂಗಮಿಯಾಗಿ ನೇಮಕವಾಗಿದ್ದ ಅಡಾಕ್‌ ಸಮಿತಿಯವರು ಸುಮಾರು ೬ ವರ್ಷಗಳಿಂದ ಕಾನೂನು ಬಾಹಿರವಾಗಿ ಆಡಳಿತ ನಡೆಸಿಕೊಂಡು ಬಂದಿರುತಾರೆ ಇದನ್ನು ಸಮುದಾಯದ ಎಲ್ಲಾ ಸದಸ್ಯರು ನ್ಯಾಯಾಲಯದಲ್ಲಿ ಈಗಾಗಲೇ ಇವರನ್ನು ಪ್ರಶ್ನಿಸಿದ್ದೇವೆ.

ಆದರೆ ಸುಳ್ಳು ನ್ಯಾಯಾಲಯದ ಪ್ರತಿ ನೀಡುವ ಮೂಲಕ ಸಮುದಾಯವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಇದಕ್ಕೆ ನಾವು ಕಾನೂನು ಮೂಲಕ ಉತ್ತರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *