ಸಕಲೇಶಪುರ : ತಾಲ್ಲೂಕು, ಯಸಳೂರು ಹೋಬಳಿಯಲ್ಲಿ ಸಾರ್ವಜನಿಕರ ಆಸ್ತಿ-ಪಾಸ್ತಿಗೆ ಹಾನಿಯುಂಟು ಮಾಡುತ್ತಿದ್ದ ಕಾಡಾನೆಗಳನ್ನು ಸೆರೆಹಿಡಿಯುವ ಸಲುವಾಗಿ, ಇತ್ತೀಚೆಗೆ ಅರಣ್ಯ ಇಲಾಖೆಯವರು,8 ವರ್ಷಗಳ ಕಾಲ ದಸರ ನಾಡಹಬ್ಬದ ಸಮಯದಲ್ಲಿ ರಾಜ್ಯದ ನಾಡದೇವತೆ ಚಾಮುಂಡೇಶ್ವರಿ ದೇವಿಯನ್ನು ಅಂಬಾರಿ ಹೊರುತ್ತಿದ್ದ ಅರ್ಜುನ ಹೆಸರನ್ನು ಬಳಸಿಕೊಂಡು, ಇತ್ತೀಚೆಗೆ ಸಕಲೇಶಪುರ ತಾಲ್ಲೂಕು, ಮೀಸಲು ಅರಣ್ಯಕ್ಕೆ ಸೇರಿದ ದಬ್ಬಳ್ಳಿ ಕಟ್ಟೆಯ ಬಳಿ ಕಾಡಾನೆಯನ್ನು ಸೆರೆಹಿಡಿಯುವ ಕಾರ್ಯಾಚರಣೆ ನಡೆಸುತ್ತಿದ್ದ ಸಮಯದಲ್ಲಿ ಅರ್ಜುನ ಆನೆಯು ಮೃತಪಟ್ಟಿದ್ದರಿಂದ, ಸರ್ಕಾರದ ಸಕಲ ಗೌರವಗಳೊಂದಿಗೆ ಅರ್ಜುನ ಸಾಕಾನೆಯನ್ನು ದಬ್ಬಳ್ಳಿ ಕಟ್ಟೆಯಲ್ಲಿ ವಿಧಿ ವಿಧಾನದಂತೆ ಶವಸಂಸ್ಕಾರ ಕಾರ್ಯ ನಡೆಸಲಾಗಿರುತ್ತದೆ.
ಆದರೆ ಇತ್ತೀಚೆಗೆ ಚಲನಚಿತ್ರ ನಟ ತೂಗದೀಪ ದರ್ಶನ್ ರವರು ಇನ್‌ಸ್ಟೋಗ್ರಾಂ ಮತ್ತು ಟ್ವಿಟ್ಟರ್ ಖಾತೆಯ ಸಾಮಾಜಿಕ ಜಾಲಾತಾಣಗಳಲ್ಲಿ ಅರ್ಜುನ ಸಾಕಾನೆಗೆ ಸ್ಮಾರಕ ನಿರ್ಮಿಸುವುದಾಗಿ ಸಾರ್ವಜನಿಕವಾಗಿ ಹೇಳಿಕೆಗಳನ್ನು ನೀಡುತ್ತಾ ಬಂದಿರುತ್ತಾರೆ.
ಇದಕ್ಕೆ ಪೂರಕವಾಗಿ ಕೆಲವು ದಿನಗಳಿಂದ ತೂಗದೀಪ ದರ್ಶನ್‌ರವರ ಕಡೆಯ ಹುಡುಗರು ಕರ್ನಾಟಕ ಅರಣ್ಯ ಕಾಯ್ದೆ 1953 ಸೆಕ್ಷನ್ 64(ಎ)ಅನ್ನು ದುರುಪಯೋಗಪಡಿಸಿಕೊಂಡು, ಸಂಬಂಧಪಟ್ಟ ಯಾವುದೇ ಅಧಿಕಾರಿಗಳ ಅನುಮತಿ ಇಲ್ಲದೆ, ಅರ್ಜುನ ಆನೆಯನ್ನು ಶವಸಂಸ್ಕಾರ ನಡೆಸಿರುವ ಮೀಸಲು ಅರಣ್ಯ ಪ್ರದೇಶಕ್ಕೆ ಅತಿಕ್ರಮ ಪ್ರವೇಶಮಾಡಿ, ಸ್ಥಳಕ್ಕೆ ಕೆಲವು ಸಾಮಗ್ರಿಗಳನ್ನು ತಂದು ಸುರಿದಿರುವುದಲ್ಲದೆ, ಅರ್ಜುನ ಆನೆಯ ಸಮಾದಿ ಸ್ಥಳವನ್ನು ವಿರೂಪಗೊಳಿಸಿರುತ್ತಾರೆ ಅಲ್ಲದೆ, ತೂಗದೀಪ ದರ್ಶನ್ ಮತ್ತು ಆತನ ಕಡೆಯ ಹುಡುಗರು, ವಾಟ್ಸ್ ಅಪ್ ಗ್ರೂಪ್‌ಗಳಲ್ಲಿ ಅರ್ಜುನ ಆನೆಗೆ ಸ್ಮಾರಕ ನಿರ್ಮಿಸಲು ಹಣಕಾಸಿನ ನೆರವು ನೀಡುವಂತೆ ಪ್ರಚಾರವನ್ನು ಮಾಡಿಕೊಂಡು, ಈಗಾಗಲೇ ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿಗಳನ್ನು ಖಾಸಗಿ ವ್ಯಕ್ತಿಯ ಹೆಸರಿನಲ್ಲಿರುವ ಬ್ಯಾಂಕ್ ಖಾತೆಗೆ ಹಣವನ್ನು ವಸೂಲಿ ಮಾಡುತ್ತಿರುವುದಲ್ಲದೆ, ಮುಂದಿನ ದಿನಗಳಲ್ಲಿ, ಕೆಲಸ ಹಣಕಾಸಿನ ಕೊರತೆಯಿಂದ ನಿಂತಿರುವುದಾಗಿ ಹೇಳಿಕೊಂಡು, ರಾಜ್ಯಾದ್ಯಂತ, ದೇಶಾದ್ಯಂತ ಕೋಟ್ಯಾಂತರ ರೂಪಾಯಿಗಳ ಸಾರ್ವಜನಿಕರ ಹಣವನ್ನು ವಸೂಲಿ ಮಾಡಿ ಮೋಸಮಾಡಲು ಪ್ರಯತ್ನಿಸುತ್ತಿರುತ್ತಾರೆ
ಆದುದರಿಂದ ತಾವುಗಳು ತಕ್ಷಣ ಅರ್ಜುನ ಆನೆಯ ಸಮಾದಿಯನ್ನು ವಿರೂಪಗೊಳಿಸಿರುವ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆಯೂ ಹಾಗೂ ಈ ಕೃತ್ಯ ಎಸಗಲು ಉಪಯೋಗಿಸಿರುವ ವಾಹನಗಳನ್ನು ಇಲಾಖೆಯ ವಶಕ್ಕೆ ಪಡೆದುಕೊಳ್ಳುವಂತೆಯೂ ಹಾಗೂ ಈಗಾಗಲೇ ಅಜು೯ನ ಸ್ಮಾರಕ ನಿರ್ಮಾಣದ ಹೆಸರೇಳಿಕೊಂಡು ವಸೂಲಿ ಮಾಡುತ್ತಿರುವ ಸಂಪೂರ್ಣ ಹಣವನ್ನು ಸರ್ಕಾರದ ಖಜಾನೆಗೆ ಜಮಾ ಆಗುವ ವ್ಯವಸ್ಥೆ ಮಾಡಿಸಿಕೊಟ್ಟು, ಮುಗ್ಧ ಸಾರ್ವಜನಿಕರಿಗೆ ಆಗುತ್ತಿರುವ ಕಷ್ಟನಷ್ಟಗಳನ್ನು ತಪ್ಪಿಸುವಂತೆ ಸಂಘಟನೆಯ ವತಿಯಿಂದ ಸಾಗರ್ ಜಾನೆಕೆರೆ ಸಂಬಂದಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದು.
ಒಂದು ವೇಳೆ ತಾವುಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದಿದ್ದಲ್ಲಿ, ಮುಂದಿನ ದಿನಗಳಲ್ಲಿ ಈ ಅಕ್ರಮದ ವಿರುದ್ಧ ರಾಜ್ಯಾಧ್ಯಂತ ಉಗ್ರ ಹೋರಾಟವನ್ನು ನಡೆಸುವುದು ಅನಿವಾರ್ಯವಾಗಿರುತ್ತದೆ ಎಂದು ಎಚ್ಚರಿಸಿದ್ದಾರೆ.