1. ಡೇಂಘೀ ರೋಗ ಲಕ್ಷಣಗಳು :- ತೀವ್ರ ಜ್ವರ, ತಲೆನೋವು, ಕಣ್ಣುಗಳ ಹಿಂಭಾಗ ನೋವು, ಮಾಂಸಕಂಡ ಮತ್ತು ಕೀಲುಗಳಲ್ಲಿ ನೋವು, ಮೂಗು ಮತ್ತು ಒಸಡಿನಲ್ಲಿ ರಸ್ತಸ್ರಾವ, ಕಪ್ಪು ಮಲವಿಸರ್ಜನೆ ಮತ್ತು ಚಡಪಡಿಸುವಿಕೆ ಅಥವಾ ಜ್ಞಾನ ತಪ್ಪುವುದು ಅಥವಾ ಸಾವು ಸಂಭವಿಸುವುದು.
2. ನಗರ/ಪಟ್ಟಣ ಪ್ರದೇಶಗಳಲ್ಲಿ ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಕಟ್ಟಡದ ಮಾಲೀಕರು ಸ್ಥಳದಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗದ ರೀತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದು. (ಸೊಳ್ಳೆ ನಿಯಂತ್ರಣ/ ನಾಶದ ಕ್ರಮಗಳನ್ನು ಅಳವಡಿಸಿ ಕೊಳ್ಳುವುದು)
3. ಎಲ್ಲಾ ನೀರಿನ ಸಂಗ್ರಹಣೆಗಳನ್ನು ಮುಚ್ಚಿಡುವುದು. ಮತ್ತು ವಾರಕ್ಕೊಮ್ಮೆ ಶುಚಿಗೊಳಿಸುವುದು.
4. ಮನೆಯಲ್ಲಿ ಏರ್ ಕೂಲರ್/ರೆಫ್ರಿಜರೇಟರ್‌ಗಳಲ್ಲಿ ಹಾಗೂ ಅಲಂಕಾರಿತ ಹೂ ಕುಂಡ/ಗಿಡಗಳಲ್ಲಿ ನೀರು ನಿಲ್ಲದಂತೆ ಹೆಚ್ಚರ ವಹಿಸುವುದು.
5. ಮನೆಯೊಳಗೆ ಹಾಗೂ ಹೊರಗೆ ಸೊಳ್ಳೆಯ ಸಂತಾನೋತ್ಪತ್ತಿಯನ್ನು ನಿಯಂತ್ರಿಸುವುದು.
6. ನಿರುಪಯುಕ್ತ ಘನತ್ಯಾಜ್ಯಗಳಲ್ಲಿ ನೀರು ನಿಲ್ಲದಂತೆ ಹೆಚ್ಚರ ವಹಿಸಿ ಈಡಿಸ್ ಸೊಳ್ಳೆಗಳ ಉತ್ಪತ್ತಿತಾಣಗಳನ್ನು ನಾಶಪಡಿಸುವುದು. ಘನತ್ಯಾಜ್ಯ ವಸ್ತುಗಳನ್ನು ಶೀಘ್ರ ವಿಲೇವಾರಿ ಮಾಡುವುದು.
7. ಖಾಲಿ ನಿವೇಶನಗಳಲ್ಲಿ ಘನತ್ಯಾಜ್ಯ ವಸ್ತುಗಳು ಸಂಗ್ರಹವಾಗದಂತೆ ಕ್ರಮವಹಿಸುವುದು.
8. ಎಳನೀರು ಮಾರುವವರು ಚಿಪ್ಪುಗಳನ್ನು ಸೂಕ್ತ ಸಮಯದಲ್ಲಿ ವಿಲೇವಾರಿ ಮಾಡುವಂತೆ ನೋಡಿಕೊಳ್ಳುವುದು.
9. ಗ್ಯಾರೇಜ್‌ಗಳ ಟೈರುಗಳನ್ನು ಹೊರಾಂಗಣದಲ್ಲಿಟ್ಟು ನೀರು ಸಂಗ್ರಹವಾಗಿ ಸೊಳ್ಳೆಗಳ ಲಾರ್ವಾ ಬೆಳೆಯದಂತೆ ನೋಡಿಕೊಳ್ಳುವುದು.
10. ಸಿಮೆಂಟ್ ಟ್ಯಾಂಕ್/ಹೂ ಕುಂಡ ತಯಾರಿಕಾ ಘಟಕಗಳಲ್ಲಿ ಕ್ಯೂರಿಂಗ್ ನೀರಿನಲ್ಲಿ ಸೊಳ್ಳೆ ಬೆಳೆಯುವ ಸಾಧ್ಯತೆ ಇದ್ದು ಸೊಳ್ಳೆನಾಶ ಕ್ರಮಗಳನ್ನು ಅಳವಡಿಸಿ ಕೊಳ್ಳುವುದು.
11. ಸೊಳ್ಳೆ ಲಾರ್ವಾ ಉತ್ಪತ್ತಿಯಾಗದಂತೆ ಕ್ರಮವಹಿಸುವುದು.
12. ಸೊಳ್ಳೆಗಳು ಮನೆಯೊಳಗೆ ನುಸುಳದಂತೆ ಕಿಟಕಿ ಬಾಗಿಲುಗಳಿಗೆ ಜಾಲರಿ ಅಳವಡಿಸುವುದು.
13. ಸೊಳ್ಳೆ ನಿರೋಧಕಗಳನ್ನು ಬಳಸಿ ಸೊಳ್ಳೆ ಕಡಿತದಿಂದ ರಕ್ಷಿಸಿಕೊಳ್ಳುವುದು.
14. ದೇಹ ಮುಚ್ಚುವಂತೆ ಬಟ್ಟೆ ಧರಿಸುವುದು/ರಾತ್ರಿ ವೇಳೆಯಲ್ಲಿ ಸೊಳ್ಳೆ ಪರದಬಳಸುವುದು.