ಸಕಲೇಶಪುರ : ತುರ್ತು ಚಿಕಿತ್ಸಾ ವಾರ್ಡನಲ್ಲಿ ಎತ್ತರದ ಸೀಲಿಂಗ್ ನಲ್ಲಿ ಅಳವಡಿಸಲಾಗಿದ್ದ ಫ್ಯಾನ್ ಪ್ರತಿನಿತ್ಯ ನೇತಾಡುತ್ತ ತಿರುಗುತಿತ್ತು ಕೆಲವು ದಿನಗಳ ಹಿಂದೆ ಫ್ಯಾನ್ ಕಳಚಿ ಕೊಂಡು ಬೀಳಬಹುದು ಎಂದು ರೋಗಿಗಳು ಆತಂಕದಲ್ಲೇ ಬೆಡ್ ಮೇಲೆ ಜೀವ ಕೈಯಲ್ಲಿಡಿದು ಇತ್ತ ನಿದ್ರೇನೂ ಮಾಡದೆ ಯಾವಕ್ಷಣದಲ್ಲಿ ಮೈಮೇಲೆ ಫ್ಯಾನ್ ಬೀಳುತ್ತದೆ ಎಂದು ಆತಂಕ ಪಡುವಾಗಲೇ ಇಂದು ಎಂಟು ವರ್ಷದ ಮಗುವಿನ ಕುತ್ತಿಗೆಯ ಮೇಲೆ ಫ್ಯಾನ್ ಮೇಲಿನಿಂದ ಕಳಚಿ ಬಿದ್ದ ಪರಿಣಾಮ ಅದೃಷ್ಟವಶಾತ್ ಮಗುವು ಪ್ರಾಣಾಪಾಯದಿಂದ ಪಾರಾಗಿದೆ.

ಮಗುವಿನ ತಂದೆ ಈ ಘಟನೆಯ ಬಗ್ಗೆ ವಿವರಣೆ ನೀಡಿದ್ದಾರೆ. ಮಗುವಿನ ಪೋಷಕರು ಘಟನೆ ನಡೆದ ನಂತರ ಚಿಕಿತ್ಸೆ ಕೊಡಿಸಿ ಎಕ್ಸರೇ ಮತ್ತು ಸ್ಕ್ಯಾನ್ ಮಾಡಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ

ಕ್ರಾಫರ್ಡ್ ಆಸ್ಪತ್ರೆಯ ವಾರ್ಡ್ಗಳಿಗೆ ಅಳವಡಿಸಲಾಗಿರುವ ಫ್ಯಾನ್ ಗಳು ತುಂಬ ಹಳೆಯ ಫ್ಯಾನ್ ಗಳಾಗಿದ್ದು ಅದು ಅಲ್ಲದೆ ಫ್ಯಾನ್ ಗಳಿಗೆ ಉದ್ದವಾದ ಪೈಪ್ ನ್ನು ಹಾಕಿರುವ ಕಾರಣ ಈ ಫ್ಯಾನ್ ಗಳು ತಿರುಗುವಾಗ ತೂಗಾಡಿಕೊಂಡು ತಿರುಗುವುದರಿಂದ ಫ್ಯಾನ್ ಗೆ ಅಳವಡಿಸಿರುವ ಹ್ಯಾಂಗ್ಲರ್ ಸವೆದು ಯಾವ ಕ್ಷಣದಲ್ಲಿಯಾದರೂ ಉಳಿದಿರುವ ಫ್ಯಾನ್ ಗಳು ರೋಗಿಗಳ ಅಥವಾ ರೋಗಿಗಳ ಪೋಷಕರಿಗೆ ಬಿದ್ದು ಮತ್ತೊಂದು ಘಟನೆ ನಡೆಯುವ ಮುನ್ನ ಆಸ್ಪತ್ರೆಯ ಆಡಳಿತಾದಿಕಾರಿಗಳು ಎಚ್ಚರ ವಹಿಸಬೇಕು ಎಂದು ಸಾಮಾಜಿಕ ಹೋರಾಟಗಾರ ವಳಲಹಳ್ಳಿ ವೀರೇಶ್ ಆಗ್ರಹಿಸಿದ್ದಾರೆ.

ವಾರ್ಡನಲ್ಲಿ ರೋಗಿಗಳಿಗೆ ಇಂತಹ ಘಟನೆ ನಡೆದರೆ ನೇರವಾಗಿ ಆಡತಾದಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡುವ ಮೂಲಕ ಅವರ ನಿರ್ಲಕ್ಷ್ಯದಿಂದಲೆರ ಇಂತಹ ಘಟನೆಗಳು ಸಂಭವಿಸುವುದರಿಂದ ಅವರ ಮೇಲೆ ಪೊಲೀಸ್ ಎಫ್.ಐ.ಆರ್ ದಾಖಲಿಸಬೇಕು ಎಂದಿದ್ದಾರೆ.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed