ಹಾಸನ : ೨೪ನೇ ವಾರ್ಡಿನ ಅಜಾದ್ ರಸ್ತೆ ಹಿಂಬಾಗ ಶಾಫಿ ಮಸೀದಿ ಬಳಿ ಡ್ರೈನೇಜ್ ಕಟ್ಟಿಕೊಂಡು ಮನೆ ಒಳಗೆ, ರಸ್ತೆ ಚರಂಡಿಯಲ್ಲಿ ನೀರು ನಿಂತಿದ್ದು, ಕಸದ ರಾಶಿ, ಇನ್ನು ಪೈಪ್ ಲೈನ್ ಮಾಡುವ ಸಲುವಾಗಿ ಗುಂಡಿ ತೋಡಿ ಪ್ರತಿನಿತ್ಯ ನರಕಯಾತನೆ ಹಾಗೂ ಈ ಭಾಗದಲ್ಲಿ ಯಾರಾದರೂ ಬಂದರೇ ಗಬ್ಬು ವಾಸನೆ ಸ್ವಾಗತ ಮಾಡಲಿದ್ದು, ಮೂಗು ಮುಚ್ಚಿಕೊಂಡು ತಿರುಗಾಡಬೇಕಾಗಿದೆ.

ಇಲ್ಲಿನ ನಿವಾಸಿಗಳು ನಗರಸಭೆ ಅಧಿಕಾರಿಗಳಿಗೆ ಹಾಗೂ ಇಲ್ಲಿನ ಸದಸ್ಯರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ನಿವಾಸಿ ಕೌನ್ಸರ್ ಭಾನು ಹಾಗೂ ತೋಫೀಕ್ ಪಾಷ ಹಾಗೂ ನಿವಾಸಿಗಳು ಮಾಧ್ಯಮದೊಂದಿಗೆ ಮಾತನಾಡಿ, ಅಜಾದ್ ರಸ್ತೆ ಹಿಂಬಾಗದ ಶಾಫಿ ಮಸೀದಿ ರಸ್ತೆಯ ೨೪ನೇ ವಾರ್ಡಿನಲ್ಲಿ ರಸ್ತೆ ಮಧ್ಯೆ ಡ್ರೈನೇಜ್ ಪೈಪ್ ಹಾಕುವುದಾಗಿ ರಸ್ತೆ ಹಗೆದು ಒಂದುವರೆ ತಿಂಗಳೇ ಕಳೆದಿದ್ದು, ಇಲ್ಲಿ ನೀರು ಹರಿಯುತ್ತಿಲ್ಲ. ಸಾರ್ವಜನಿಕರು ಓಡಾಡಲು ಅಡಚಣೆಯಾಗಿದೆ.

ನಮಾಜುಗೆ ಬಂದ ಸಮಯದಲ್ಲಿ ಅನೇಕರು ಎಡವಿ ಕೆಳಗೆ ಬಿದ್ದಿದ್ದಾರೆ. ಇಲಿ ಡ್ರೈನೇಜು ಕಟ್ಟಿಕೊಂಡು ಕೊಳಚೆ ನೀರು ತುಂಬ ದಿನದಿಂದ ನಿಂತಿದೆ. ಶೌಚಾಲಯ ತುಂಬಿಕೊಂಡು ಮನೆ ಒಳಗೆ ಗಲೀಜು ಹರಿಯುತ್ತಿದೆ. ಕಸವನ್ನು ಕೂಡ ರಸ್ತೆ ಮೇಲೆ ಬಿಟ್ಟಿದ್ದು, ಸ್ವಚ್ಛತೆಯನ್ನು ಸರಿಯಾಗಿ ಮಾಡುತ್ತಿಲ್ಲ ಎಂದು ದೂರಿದರು.

ಇನ್ನು ಕಸದ ಸಾಗಿಸುವ ಆಫೆ ವಾಹನ ಬಂದರೂ ಕೂಡ ನಿವಾಸಿಗಳು ಕೂಡ ಕಸವನ್ನು ರಸ್ತೆ ಮೇಲೆ ಎಸೆಯುತ್ತಿದ್ದು, ಈ ಭಾಗದಲ್ಲಿ ಯಾರು ನಡೆದಾಡುವುದಕ್ಕೆ ಆಗುವುದಿಲ್ಲ. ಗಬಬು ವಾಸನೆ. ಡೆಂಗ್ಯೂ ಜ್ವರ ಬಂದು ಅನೇಕರು ಆಸ್ಪತ್ರೆ ಸೇರಿದ್ದಾರೆ. ಇಲ್ಲಿ ಬೀದಿ ಲೈಟ್ ಕೂಡ ಸರಿಯಾಗಿ ಬರುವುದಿಲ್ಲ. ಕಸ ಗುಡಿಸುವವರು ಬಂದು ಇದು ನಮ್ಮ ಬೀದಿ ಅಲ್ಲ ಎಂದು ಅವರೆ ಜಗಳ ಮಾಡಿಕೊಂಡು ಇಲ್ಲಿ ಯಾವ ಸ್ವಚ್ಛತೆ ಮಾಡುತ್ತಿಲ್ಲ ಎಂದು ಗಂಭೀರವಾಗಿ ಆರೋಪಿಸಿದರು.

೨೪ನೇ ವಾರ್ಡಿನ ಈ ಭಾಗದ ನಗರಸಭೆ ಸದಸ್ಯರು ಇತ್ತ ಕಡೆ ಗಮನವೇ ಹರಿಸುತ್ತಿಲ್ಲ. ಮಳೆ ಬಂದರೇ ಸಾಕು ಈ ಭಾಗದ ಜನರು ಮನೆಯಲ್ಲಿ ವಾಸ ಮಾಡುವಾಗಿಲ್ಲ. ಕೊಳಚೆ ನೀರು ಮನೆಯಲ್ಲಿ ಇರುತ್ತದೆ. ಇನು ೨೩ನೇ ವಾರ್ಡ್ ಕೂಡ ಇದೆ ಸಮಸ್ಯೆ ಇದ್ದು, ಸಮಸ್ಯೆಯನ್ನು ಕೂಡಲೇ ಬಗೆಹರಿಸುವಂತೆ ಮನವಿ ಮಾಡಿದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *