ಹಾಸನ: ದಕ್ಷಿಣ ಶಿಕ್ಷಕರ ವಿಧಾನ ಪರಿಷತ್ತು ಚುನಾವಣೆ ಹಿನ್ನಲೆಯಲ್ಲಿ ನಗರದ ಗಂಧದ ಕೋಠಿಯಲ್ಲಿ ನಡೆಯುತ್ತಿರುವ ಮತದಾನ ಸ್ಥಳದ ಬಳಿ ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ಅವರು ಭೇಟಿ ನೀಡಿ ವಿಚಾರಿಸಿ ಗೆಲುವಿನ ನಗೆ ಬೀರಿದಲ್ಲದೇ ಎಂ.ಎಲ್.ಸಿ. ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಗೆಲ್ಲಲಿದ್ದು, ಎಂಪಿ ಚುನಾವಣೆಯಲ್ಲಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ೧ ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ಪಡೆಯುವುದಾಗಿ ವಿಶ್ವಾಸವ್ಯಕ್ತಪಡಿಸಿದರು.
ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ದಕ್ಷಿಣ ಶಿಕ್ಷಕರ ವಿಧಾನ ಪರಿಷತ್ತು ಚುನಾವಣೆ ನಡೆಯುತ್ತಿದ್ದು, ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಪಕ್ಷದ ಅಭ್ಯರ್ಥೀಯಾಗಿ ವಿವೇಕಾನಂದರು ಸ್ಪರ್ದೆ ಮಾಡಿದ್ದು, ಎರಡು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸೇರಿ ಮತವನ್ನು ಕೇಳಲಾಗುತ್ತಿದೆ.
ಹಾಸನ ಜಿಲ್ಲೆಯಲ್ಲಿ ೩೬೦೦ ಮತಗಳಿದ್ದು, ಜಿಲ್ಲೆಯಲ್ಲಿ ೨೫೦೦ ಮತಗಳು ಮೈತ್ರಿ ಅಭ್ಯರ್ಥಿಗೆ ಬೀಳಲಿದೆ. ನೂರಕ್ಕೆ ನೂರರಷ್ಟು ಗೆಲ್ಲುವ ವಾತವರಣ ನಮ್ಮ ಅಭ್ಯರ್ಥಿ ಪರ ಇದೆ ಎಂದರು. ಇನ್ನು ಲೋಕಸಭಾ ಚುನಾವಣೆಯ ಮತ ಏಣಿಕೆ ಕಾರ್ಯ ಮಂಗಳವಾರದಂದು ನಡೆಯಲಿದ್ದು, ಹಾಸನ ಜಿಲ್ಲೆಯನ್ನು ಒಳಪಡಿಸಿ ರಾಜ್ಯದಲ್ಲಿ ಮೂರಕ್ಕೆ ೩ ಸ್ಥಾನವು ನಮ್ಮ ಮೈತ್ರಿ ಪಕ್ಷ ಗೆಲ್ಲಲಿದೆ.
ನಾವು ಕೂಡ ನಿರೀಕ್ಷೆಯಲ್ಲಿದ್ದು, ಮತ ಏಣಿಕೆ ಕೇಂದ್ರಕ್ಕೆ ನಾವು ಕುಡ ಬರುವುದಾಗಿ ಹೇಳಿದಲ್ಲದೇ ಒಂದು ಲಕ್ಷಕ್ಕೂ ಅಧಿಕ ಮತಗಳಿಂದ ನಾವು ಗೆಲ್ಲುವುದಾಗಿ ಭರವಸೆ ನೀಡಿದರು.