ಚನ್ನರಾಯಪಟ್ಟಣ : ಪಟ್ಟಣದ ಮೈಸೂರ್ ರಸ್ತೆಯ ಡಾಕ್ಟರ್ ಅಂಬೇಡ್ಕರ್ ಭವನದಲ್ಲಿ ವೈದ್ಯ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಅಂಡ್ ಪ್ಯಾರಾಮೆಡಿಕಲ್ ಇವರ ವತಿಯಿಂದ ನಡೆದಂತಹ ದಾದಿಯರ ದಿನಾಚರಣೆ ಮತ್ತು ಪ್ರಯೋಗಾಲಯ ತಂತ್ರಜ್ಞಾನರ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ ವೈದ್ಯರಿಗಿಂತ ದಾರಿಯರ ಸೇವೆಯು ಅತ್ಯಮೂಲ್ಯವಾಗಿದೆ ಯಾವುದೇ ಆಸ್ಪತ್ರೆಗೆ ತೆರಳಿದರೆ ಮೊದಲು ದಾದಿಯರು ರೋಗಿಯನ್ನು ಹಾರೈಕೆ ಮಾಡಿ ನಂತರ ಅವರ ಯೋಗಕ್ಷೇಮವನ್ನು ವಿಚಾರಿಸಿ ವೈದ್ಯರ ಬಳಿ ಕರೆತಂದು ನಂತರ ರೋಗಿಯ ದೇಹದಲ್ಲಿ ದೇಹದಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ವೈದ್ಯರಿಗೆ ಸಂಪೂರ್ಣ ವಿವರಣೆಯನ್ನು ನೀಡಲು ಸಹಕಾರಿಯಾಗಿದ್ದಾರೆ

ಜೊತೆಗೆ ವೈದ್ಯರಿಗಿಂತ ರೋಗಿಯ ಜೊತೆ ಹೆಚ್ಚಿನ ಒಡನಾಟವನ್ನು ದಾದಿಯರು ಹೊಂದಿರುತ್ತಾರೆ ಜೊತೆಗೆ ಎಷ್ಟೋ ಮಕ್ಕಳು ತಮ್ಮ ತಂದೆ ತಾಯಿಯವರನ್ನು ಪೋಷಣೆ ಮಾಡದೆ ದಾದಿಯರ ನೆರವನ್ನು ಕೂಡ ಆಲಿಸುತ್ತಿದ್ದಾರೆ ಆದರೂ ಯಾವುದೇ ರೀತಿಯ ಅಸೂಹೆ ಇವುಗಳನ್ನು ಇಟ್ಟುಕೊಳ್ಳದೆ ವಯೋವದ್ಧರನ್ನು ಹಾರೈಕೆ ಮಾಡುವಲ್ಲಿ ದಾದಿಯರ ಪಾತ್ರ ಪ್ರಮುಖವಾಗಿದೆ

ಇಂದು ಮನುಷ್ಯನ ಆರೋಗ್ಯ ಸ್ಥಿತಿ ದಿನೇ ದಿನೇ ವ್ಯತ್ಯಾಸಗಳು ಕಂಡುಬರುತ್ತವೆ ಆದರೆ ಆರೋಗ್ಯವನ್ನು ಹಣ ಕೊಟ್ಟು ಕೊಂಡುಕೊಳ್ಳಲು ಸಾಧ್ಯವಿಲ್ಲ ನೀವು ರೋಗಿಯನ್ನು ಹಾರೈಕೆ ಮಾಡಿ ನಿಮ್ಮ ಭಾವನಾತ್ಮಕ ಪ್ರೀತಿಯ ಮಾತುಗಳನ್ನು ಹಾಡಿದರೆ ಸಾಕು ಅಷ್ಟೇ ರೋಗಿಯು ಗುಣಮುಕ್ತನಾಗುವ ಸಾಧ್ಯತೆಗಳು ಇವೆ ಎಂದರು

ಇದೇ ಸಂದರ್ಭದಲ್ಲಿ. ಮಾಜಿ ಪುರಸಭಾ ಸದಸ್ಯ ಶಶಿಧರ್ ಮಾತನಾಡಿ ದಾದಿಯರು ನಮ್ಮ ಭಾರತ ದೇಶದ ಕಾಯುವ ಯೋಧರಿಗೆ ಸಮಾನರು ನಾವು ಇಂದು ಭಾರತ ದೇಶದಲ್ಲಿ ಸುಖವಾಗಿದ್ದೇವೆ ಎಂದರೆ ಅದು ನಮ್ಮ ಸೈನಿಕರ ಪಾತ್ರ ಪ್ರಮುಖವಾಗಿದೆ ಅದೇ ರೀತಿ ನಾವು ಆರೋಗ್ಯಕರವಾಗಿದ್ದೇವೆ ಎಂದರೆ ದಾದಿಯರ ಪಾತ್ರವೂ ಕೂಡ ಮುಖ್ಯವಾಗಿದೆ ಏಕೆಂದರೆ ನಮ್ಮಗಳ ಹಾರೈಕೆಯಲ್ಲಿ ದಾದಿಯರ ಪಾತ್ರ ಬಹುಮುಖ್ಯ ನಮ್ಮ ಜೊತೆಯಲ್ಲಿದ್ದವರೇ ನಮ್ಮನ್ನು ಹಾರೈಕೆ ಮಾಡುವುದು ಕಷ್ಟಕರದ ಸಂಗತಿ ಅದರಲ್ಲೂ ಆಸ್ಪತ್ರೆಗಳಲ್ಲಿ ಯಾವುದೇ ರೋಗವಿದ್ದರೂ ಕೂಡ ಅದನ್ನು ಗಣನೀಯಕೆ ತೆಗೆದುಕೊಳ್ಳದೆ ನಮ್ಮೊಂದಿಗೆ ವಿಶ್ವಾಸದಿಂದ ಹಾಗೂ ಸಹನೆಯಿಂದ ರೋಗಿಯ ಒಡನಾಟದ ಮೂಲಕ ಆರೈಕೆಯಲ್ಲಿ ತೊಡಗುವುದೇ ಒಂದು ದೊಡ್ಡ ಸಂಗತಿಯಾಗಿದೆ

ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ತೆರಳಿದರೆ ಮೊದಲು ಸಿಗುವುದೇ ದಾದಿಯರು ಅವರು ಮೊದಲು ನಮ್ಮ ಯೋಗ ಕ್ಷೇಮವನ್ನು ವಿಚಾರಿಸಿ ರೋಗಲ ಲಕ್ಷಣಗಳ ಬಗ್ಗೆ ಹಾರೈಕೆ ಮಾಡಿ ಪೋಷಿಸಿ ನಂತರ ವೈದ್ಯರ ಬಳಿ ಕರೆದೊಯಲು ಮುಂದಿನ ಹಾರೈಕೆಗೆ ಮುಂದಾಗುತ್ತಾರೆ ಆದರೆ ಆರೈಕೆ ಗಿಂತ ಅವರು ಮಾತನಾಡುವ ಪ್ರೀತಿಯ ಮಾತುಗಳಲ್ಲೇ ಸುಮಾರು ಶೇಕಡ 50ರಷ್ಟು ರೋಗಿಯು ಗುಣಮುಕ್ತನಾಗುತ್ತಾನೆ ಎಂದರು

ಇದೇ ಸಂದರ್ಭದಲ್ಲಿ ಸುಮಾರು 20ಕ್ಕೂ ಅಧಿಕ ದಾದಿಯರಿಗೆ ಹಾಗೂ ಲ್ಯಾಬ್ ಟೆಕ್ನಿಷಿಯನ್ ರವರಿಗೆ ಗೌರವಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ವೈದ್ಯ ಸ್ಕೂಲ್ ಆಫ್ ಪ್ಯಾರಾಮೆಡಿಕಲ್ ಅಂಡ್ ನರ್ಸಿಂಗ್ ಪ್ರಾಂಶುಪಾಲ ಅರುಣ್ ಬಿಎಲ್ ಗೌಡ, ಶ್ರೀಮತಿ ಮೋನಿಕಾ ಅರುಣ್ ಕುಮಾರ್,ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಹಿರಿಯ ದಾದಿ ನೀಲಮ್ಮ ಇನ್ನಿತರ ಹಾಜರಿದ್ದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *