ನಾಡಪ್ರಭು ಕೆಂಪೇಗೌಡ ಪ್ರತಿಮೆ ನಿರ್ಮಾಣಕ್ಕೆ ಭೂಮಿ ಪೂಜೆ.ಸಕಲೇಶಪುರ:ಸಕಲೇಶಪುರ ತಾಲೂಕು ಒಕ್ಕಲಿಗರ ಸಂಘ, ನಾಡಪ್ರಭು ಕೆಂಪೇಗೌಡ ಯುವ ವೇದಿಕೆ ಮತ್ತು ಅಂಗ ಸಂಸ್ಥೆಗಳ ವತಿಯಿಂದ ಇಂದು ಪಟ್ಟಣದ ಹೊಸ ಬಸ್ ನಿಲ್ದಾಣದ ಎದುರು ನಾಡಪ್ರಭು ಕೆಂಪೇಗೌಡರ ಪ್ರತಿಮೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು.ಈ ಸಂದರ್ಭದಲ್ಲಿ ಮಾಜಿ ಶಾಸಕರು ಹಾಗೂ ಸಕಲೇಶಪುರ ತಾಲೂಕು ಒಕ್ಕಲಿಗ ಸಂಘದ ಅಧ್ಯಕ್ಷರಾದ ಹೆಚ್.ಎಂ.ವಿಶ್ವನಾಥ್ ಮಾತನಾಡಿ ನಾವು ಸಕಲೇಶಪುರದ ಒಕ್ಕಲಿಗ ಸಂಘ ಹಾಗೂ ಅಂಗ ಸಂಸ್ಥೆಗಳ ವತಿಯಿಂದ ಪ್ರತಿಮೆ ನಿರ್ಮಾಣ ಮಾಡಬೇಕು ಎಂದು ಉದ್ದೇಶಿಸಿದ್ದೆವು ಸಕಲೇಶಪುರದಲ್ಲಿ ಎಲ್ಲಾ ಸಮುದಾಯದ ಪ್ರತಿಮೆಗಳು ನಿರ್ಮಾಣ ಆಗುತ್ತಿವೆ ಹಾಗೆ ಈ ರಾಷ್ಟ್ರಕ್ಕೆ ಹೊಸ ದಿಕ್ಕನ್ನು ತಂದುಕೊಟ್ಟ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಎಲ್ಲಾ ವರ್ಗದ ಜನರ ಪರವಾದಂತಹ ಸಂವಿಧಾನ ಕೊಟ್ಟಂತಹ ,ಸಮಾನತೆ ಸಾರಿದ ಮಹಾಪುರುಷರ ಶಿಲೆಯನ್ನು ಕೂಡ ಈಗಾಗಲೇ ಬಸ್ ನಿಲ್ದಾಣ ಹಾಗೂ ತಾಲೂಕು ಕಚೇರಿ ಮುಂದೆ ನಿರ್ಮಾಣ ಆಗಿದೆ.ಕಾಫಿಯ ನಾಡು ಸಕಲೇಶಪುರ ಜಗತ್ತಿಗೆ ಪ್ರಸಿದ್ಧಿ ಜೊತೆಗೆ ಬಯಲು ಸೀಮೆಗೆ ನೀರು ಕೊಡುವ ಮಹಾಶಕ್ತಿಯುತವಾದ ನದಿ ಹೇಮಾವತಿ ನದಿ ಆ ನದಿ ಇಲ್ಲಿ ಹುಟ್ಟಿ ಗೊರೂರು ಸೇರಿ ಅಲ್ಲಿಂದ ಕಾವೇರಿ ಸೇರಿ ತಮಿಳುನಾಡಿನಲ್ಲಿ ಹರಿಯುತ್ತಾಳೆ ಈ ನದಿಯ ಮಹತ್ವ ಅರಿತು ನಮ್ಮ ಸ್ನೇಹಿತರುಗಳು ಹೇಮಾವತಿ ನದಿಯ ದಡದಲ್ಲಿ ಹೇಮಾವತಿ ಶಿಲೆಯನ್ನು ಕೂಡ ಮಾಡಿ ಈಗಾಗಲೇ ಊರಿನ ಮುಂಭಾಗದಲ್ಲಿ ಇಡುವ ವ್ಯವಸ್ಥೆ ಮಾಡಿದ್ದಾರೆ.ಕರ್ನಾಟಕವನ್ನು ಒಂದು ಮಾದರಿ ರಾಜ್ಯವನ್ನಾಗಿ ಮಾಡಿ ಬೆಂಗಳೂರು ಅಂತರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಮಟ್ಟದಲ್ಲಿ ಹೆಸರು ಮಾಡಲು ಪ್ರಮುಖ ಕಾರಣಕರ್ತ ನಾಡ ಪ್ರಭು ಕೆಂಪೇಗೌಡ.ಕೆಂಪೇಗೌಡರು ಬುದ್ಧ , ಬಸವ, ಅಂಬೇಡ್ಕರ್ , ಮಹಾತ್ಮ ಗಾಂಧಿ ಈ ಎಲ್ಲಾ ಸಾಲಿಗೆ ಸೇರುವ ಆಡಳಿತಗಾರ ಹಾಗೂ ಸಾಮಾಜಿಕ ನ್ಯಾಯಕೊಟ್ಟವರು ಎಲ್ಲಾ ಜಾತಿ ಜನಾಂಗಗಳಿಗೆ ನ್ಯಾಯ ದೊರಕಿಸುವ ದೃಷ್ಟಿಯಲ್ಲಿ ಬೆಂಗಳೂರಿನ ಎಲ್ಲಾ ಬೀದಿಗಳಿಗೆ ಒಂದೊಂದು ಬೀದಿಗಳನ್ನಾಗಿ ಮಾಡಿ ಬೆಂಗಳೂರನ್ನು ಅತ್ಯುನ್ನತ ಸಿಲಿಕಾನ್ ಸಿಟಿ ಮಾಡಿ ಜಗತ್ತಿನಲ್ಲಿ ಯಾವುದೇ ರಾಷ್ಟ್ರ ನಾಯಕನ ಬಾಯಲ್ಲಿ ಬೆಂಗಳೂರು ಹೆಸರು ಬರುವಂತೆ ಮಾಡಿದ ಒಬ್ಬ ಮಹಾ ನಾಯಕನ ಹೆಸರನ್ನು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಾಗೂ ಬಸ್ಸ್ ನಿಲ್ದಾಣಕ್ಕೆ ಹೆಸರು ಇಟ್ಟಿದ್ದಾರೆ .ಈ ರಾಜ್ಯದ ಆಡಳಿತ ನಡೆಯುತ್ತಿದ್ದರೆ ಅದು ಕೆಂಪೇಗೌಡ ಮಾಧರಿಯ ಆಡಳಿತದ ಹಿನ್ನೆಲೆ ಕಾರಣಕ್ಕೆ ನಾವು ಕಳೆದ ಆರು ವರ್ಷಗಳಿಂದ ಪ್ರತಿಮೆ ನಿರ್ಮಾಣಕ್ಕೆ ಪ್ರಯತ್ನಿಸುತ್ತಿದೇವು ನಾವು 30 *40 ಅಳತೆಯ ಜಾಗವನ್ನು ತಾಲೂಕು ಪಂಚಾಯತ್ ಅವರಿಗೆ ಈ ಜಾಗದಲ್ಲಿ ಪ್ರತಿಮೆ ನಿರ್ಮಾಣಕ್ಕೆ ಕೇಳಿದ್ದೇವೆ. ಪ್ರತಿಮೆ ನಿರ್ಮಾಣಕ್ಕೆ ಇವತ್ತು ಸಮಯ ಕೂಡಿಬಂದಿದೆ ನನಗೆ ಹೆಮ್ಮೆ ಇದೆ ಸಕಲೇಶಪುರ ತಾಲೂಕಿನ ಎಲ್ಲ ನಾಗರಿಕರು ಇದಕ್ಕೆ ಬೆಂಬಲ ಸೂಚಿಸಿದ್ದಾರೆ ಅಂತ ನಂಬಿಕೆ ಇದೆ ಹಾಗೆ ಈ ಕೆಂಪೇಗೌಡರ ಪ್ರತಮೆ ನಿರ್ಮಾಣಕ್ಕೆ ಈ ದಿನ ಹಾಸನ ಶಾಖಾ ಮಠದ ಶ್ರೀ ಶ್ರೀ ಶಂಭುನಾಥ ಸ್ವಾಮೀಜಿಗಳು ಬರಬೇಕಾಗಿತ್ತು ಅನಿವಾರ್ಯ ಕಾರಣಗಳಿಂದ ಆಗಮಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು . ಹಾಗೆ ಆದಿಚುಂಚನಗಿರಿ ಶಾಖಾ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅವರ ಆಶೀರ್ವಾದ ಪಡೆದಿದ್ದೇವೆ ಎಂದರು.ಈ ಸಂದರ್ಭದಲ್ಲಿ ಅನೇಕ ಗಣ್ಯರು ತಮ್ಮ ಕೈಲಾದಂತಹ ಹಣವನ್ನು ಈ ಪ್ರತಿಮೆ ನಿರ್ಮಾಣಕ್ಕೆ ಕೊಡುತ್ತೇವೆ ಎಂದು ಘೋಷಣೆ ಮಾಡಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ತಾಲೂಕು ಅಧ್ಯಕ್ಷರು ಭೈರಮುಡಿ ಚಂದ್ರು ಜೆಡಿಎಸ್ ಮುಖಂಡ ಸುಪ್ರದೀಪ್ ಯಜಮಾನ್, ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಹೆಚ್ ಹೆಚ್ ಉದಯ್, ಜೈ ಮಾರುತಿ ದೇವರಾಜ್, ಬೆಕ್ಕನಹಳ್ಳಿ ನಾಗರಾಜ್, ಕಂಟ್ರಾಕ್ಟರ್ ಅವಿನಾಶ್,ವಿ ಹೆಚ್ ಪಿ ಮುಖಂಡ ರಘು, ಕೌಶಿಕ್, ಧರ್ಮೇಶ್,ದುಷ್ಯಂತ, ಒಕ್ಕಲಿಗ ಸಂಘದ ನಿರ್ದೇಶಕರುಗಳಾದ ಅಣ್ಣೇಗೌಡ್ರು, ಪ್ರಸಾದ್ ವಳಲಹಳ್ಳಿ, ಅಶೋಕ್, ಬಾಗ್ರಳ್ಳಿ ಪುಟ್ಟಸ್ವಾಮಿ, ನಂದಿಕೃಪ ರಾಜು, ರಾಮಚಂದ್ರು ,ಸ್ವಾಮಿ , ನಾಗರಾಜು, ಕಾರ್ತಿಕ್, ಮಹೇಂದ್ರ, ಗುಲಗಳಲೆ ನೀಲಕಂಠ, ರಮೇಶ್, ಮಂಜೇಗೌಡ, ವಾಣಿ, ಶೋಭಾ, ಕಾರ್ಯದರ್ಶಿ ಉಮೇಶ್ ,ಪುರಸಭೆ ಸದಸ್ಯರಾದ ಎಸ್‌ ಡಿ ಆದರ್ಶ್, ಪ್ರಜ್ವಲ್ ಕೆಂಪೇಗೌಡ ಯುವ ವೇದಿಕೆ ತಾಲೂಕು ಅಧ್ಯಕ್ಷ ನಿಶ್ಚಲ್, ಕೆಂಪೇಗೌಡ ಯುವ ಸೇನೆ ಟ್ರಸ್ಟ್ (ರಿ)ಸಂಸ್ಥಾಪಕ ಅಧ್ಯಕ್ಷ ಎಂ ಬಿ ಉಮೇಶ್, ತಾಲೂಕು ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಮುಖರಾದ ಮಂಜು ಬಾಳೆಗದ್ದೆ, ಮಹೇಶ್, ವೆಂಕಟೇಶ್, ಸಂತೋಷ್, ಅರ್ಜುನ್ ಇತರರು ಇದ್ದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

One thought on “ಸಕಲೇಶಪುರದಲ್ಲಿ ಕೆಂಪೇಗೌಡ ಪುತ್ತಳಿ ನಿರ್ಮಾಣಕ್ಕೆ ಗುದ್ದಲಿ ಪೂಜೆ…….”
  1. The matters will posted repeatedly which consumes more place makes heritaion should be avoided to pay way for more new news

Leave a Reply

Your email address will not be published. Required fields are marked *

You missed