ಬೇಲೂರು : ತಾಲೂಕು ಆಡಳಿತ ವತಿಯಿಂದ ನಾಡಪ್ರಭು ಕೆಂಪೇಗೌಡರ ೫೧೫ ನೇ ಜಯಂತೋತ್ಸವವನ್ನು ಪಟ್ಟಣದ ತಾಲೂಕು ಕಚೆರಿಯಲ್ಲಿ ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ನಾಡಪ್ರಭು ಕೆಂಪೇಗೌಡರು ಒಮದ ಜಾತಿಗೆ ಸೀಮಿತವಾದವರಲ್ಲ ಅವರು ಒಕ್ಕಲುತನ ಮಾಡಯವ ಎಲ್ಲಾ ಜಾತಿ ಜನಾಂಗದ ಪ್ರಭುಗಳು, ಯಾವುದೇ ದೇಶದ ಪ್ರಮುಖ ಒಂದು ಜಾತಿ ಧರ್ಮಕ್ಕೆ ಸೀಮಿತವಾಗದೆ ಎಲ್ಲಾ ಪಂಗಡಗಳನ್ನು ನಾಯಕರನ್ನು ಒಗ್ಗೂಡಿಸಿಕೊಂಡು ನಾಡದೊರೆ ಎಂಬ ಬಿರುದನ್ನು ಪಡೆಯುವ ಮೂಲಕ ವಿಶ್ವವೆ ಬೆರಗುಮೂಡಿಸುವ ಬೆಂಗಳೂರನ್ನು ಕಟ್ಟಿದ ಮಹಾನ್ ನಾಯಕ.

ನಾಡಿಗೆ ಕೆಂಪೇಗೌಡರು ಕೊಟ್ಟಿರುವ ಕೊಡುಗೆ ಮತ್ತು ಸಂದೇಶವನ್ನು ನೆನಪಿಸುವುದರ ಜೊತೆಗೆ ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ರೂಡಿಸಿಕೊಂಡಾಗ ಉತ್ತಮ ಸಮಾಜ ನಿರ್ಮಾಣ ಮಾಡುವುದರ ಜೊತೆಗೆ ಭ್ರಷ್ಟಾಚಾರ ರಹಿತ ಸಮಾಜ ನಿರ್ಮಾಣ ಮಾಡಲು ಸಾಧ್ಯ.

ಇಂದು ರಾಜ್ಯಮಟ್ಟದಲ್ಲಿ ಕಾರ್ಯಕ್ರಮ ಮಾಡುವಾಗ ತಾಲೂಕು ಕೇಂದ್ರಗಳನ್ನು ಕಡರಗಣಿಸಬೇಡಿ ಎಂದು ಉಪಮುಖ್ಯಮಂತ್ರಿಗಳಲ್ಲಿ ನಾವು ಮನವಿ ಮಾಡಿದ ಹಿನ್ನಲೆಯಲ್ಲಿ ತಾಲೂಕು ಮಟ್ಟದ ಕೆಂಪೇಗೌಡ ಜಯಂತಿಗೆ ೧ ಲಕ್ಷ ರೂಗಲನ್ನು ಸರ್ಕಾರ ನೀಡಿದ್ದು ಅವರಿಗೆ ಧನ್ಯವಾದಗಳನ್ನು ಹೇಳುತ್ತೇನೆ.

ಅದರಂತೆ ಇದೇ ಜುಲೈ ೧ ರಂದು ಬೇಲೂರಿನಲ್ಲಿ ನಮ್ಮ ಒಕ್ಕಲಿಗರ ಸಂಘಟನೆಗಳು ಪಟ್ಟಣದಲ್ಲಿ ಅದ್ದೂರಿ ಆಚರಿಸುತ್ತಿರುವುದರಿಂದ ತಾಲೂಕಿನ ಸಮಸ್ತ ಜನತೆ ಕಾರ್ಯಕ್ರಮಕ್ಕೆ ಆಗಮಿಸುವಂತೆ ಮನವಿ ಮಾಡಿದರು.

ಕೆಂಪೇಗೌಡ ಸಮಿತಿ ಅಧ್ಯಕ್ಷ ಎಂ ಎ ನಾಗರಾಜ್ ಮಾತನಾಡಿ ೫೦೦ ವರ್ಷಗಳ ಹಿಂದೆ ಕೆಂಪೇಗೌಡರ ದೂರದೃಷ್ಟಿಯಿಂದ ಜನಹಿತ ಕಾರ್ಯ ಕ್ರಮಗಳು ಬೆಂಗಳೂರಿನ ನಿರ್ಮಾಣದ ಜೊತೆಗೆ ಕೆರೆಕಟ್ಟೆಗಳ ನಿರ್ಮಾಣ ಹಾಗು ನಮ್ಮ ಸಮುದಾಯಕ್ಕೆ ಹತ್ತಾರು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ದೇಶದ ಹೆಮ್ಮೆಯ ನಾಯಕರಾಗಿ ನಮ್ಮ ಜನಾಂಗದ ಬಹುದೊಡ್ಡ ನಾಯಕರಾಗಿದ್ದಾರೆ.

ಬೇಲೂರಿನಲ್ಲಿ ಕೆಂಪೇಗೌಡ ಪುತ್ಥಳಿ ಅನಾವರಣ ಸಂದರ್ಭದಲ್ಲಿ ಜಾತ್ಯಾತೀತವಾಗಿ ಎಲ್ಲರೂ ಒಗ್ಗಟ್ಟಾಗಿ ಕೆಂಪೇಗೌಡರ ಪುತ್ಥಳಿ ನಿರ್ಮಾಣ ಮಾಡಿದ್ದೇವೆ.ಅದರಂತೆ ಕೆಂಪೇಗೌಡ ಯುವ ವೇಧಿಕೆ ಸದಸ್ಯರು ಸೇರಿದಂತೆ ತಾಲೂಕಿನ ಎಲ್ಲಾ ಕುಲಭಾಂದವರು ಸೇರಿದಂತೆ ಆಚರಿಸಿಕೊಂಡು ಬರುತ್ತಿದ್ದೇವೆ.ಜುಲೈ ೧ ರಂದು ನಡೆಯುವ ನಾಡಪ್ರಭು ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ತಮ್ಮೆಲ್ಲರ ಸಹಕಾರ ಅತಿ ಮುಖ್ಯ ಎಂದರು.

ನಂತರ ತಹಶಿಲ್ದಾರ್ ಎಂ ಮಮತಾ ಮಾತನಾಡಿ ಕೆಂಪೇಗೌಡರು ಸ್ಥಾಪಿಸಿದ ಬೆಂಗಳೂರು ನಗರ ವಿರಾಟ ಸ್ವರೂಪದಲ್ಲಿ ಬೆಳೆದು ಅವರು ಕಂಡಂತ ಕನಸು ನನಸಾಗುವುದರ ಜೊತೆಗೆ ವಿಶ್ವಮಾನ್ಯತೆಯನ್ನು ಪಡೆದಿದೆ.

ಇಲ್ಲಿ ಎಲ್ಲಾ‌ ಜಾತಿ ವರ್ಗ ಧರ್ಮದವರು ಬದುಕನ್ನು ಕಟ್ಟಿಕೊಂಡಿದ್ದಾರೆ.ಅದರಂತೆ ಬ್ರಿಟೀಷರೆ ರಾಜ್ಯವನ್ನು ನಿರ್ಮಿಸುತ್ತಿದ್ದ ಕಾಲಘಟ್ಟದಲ್ಲಿ ರೈತ ಕುಟುಂಬದಿಂದ ಬಂದ ಕೆಂಪೇಗೌಡರು ಬೆಂಗಳೂರು ಎಂಬ ರಾಜ್ಯವನ್ನು ಕಟ್ಟಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ಒಕ್ಕಲಿಗರ ಯುವ ವೇಧಿಕೆ ಅಧ್ಯಕ್ಷ ಸಿ ಎಂ ಪೃಥ್ವಿ ಮಾತನಾಡಿ ಈ ಬಾರಿ ಸರಳವಾದರೂ ಸಹ ಒಂದು ಉತ್ತಮ ವ್ಯವಸ್ಥೆಯನ್ನು ಮಾಡುವ ಮೂಲಕ ತಾಲೂಕು ಆಡಳಿತ ಜಯಂತಿಯನ್ನು ಆಚರಿಸುತ್ತಿದೆ.ಎಲ್ಲಾ ಮಹನೀಯರ ಪರಿಚಯಗಳು ಪಠ್ಯಗಲಲ್ಲಿ ಲಭ್ಯವಿದ್ದು ಆದರೆ ನಮ್ಮ ನಾಡಪ್ರಭುವಿನ ಬಗ್ಗೆ ಯಾವುದೇ ಪಠ್ಯ ಪುಸ್ತಕದಲ್ಲಿ ಇಲ್ಲದೆ ಇರುವುದು ಶೋಚನೀಯ .

ಈ ಬಾರಿಯ ಜಯಂತಿ ದಿನದಂದು ನಮ್ಮೆಲ್ಲಾ ಕುಲಬಾಂಧವರಿಗೆ ಅವರ ಜೀವನ ಬಗ್ಗೆ ಎಲ್ ಇ ಡಿ ಪರದೆ ಮೂಲಕ ತೋರಿಸುವ ಪ್ರಯತ್ನ ಮಾಡುತ್ತಿದ್ದು ಮುಂದಿನ ದಿನದಲ್ಲಿ ಸರ್ಕಾರ ಅವರ ಬಗ್ಗೆ ಪಠ್ಯ ಪುಸ್ತಕದಲ್ಲಿ ಸೇರಿಸಬೇಕೆಂದು ಮನವಿಮಾಡಿದರು.

ಈ ಸಂದರ್ಭದಲ್ಲಿ ತಾಲೂಕು ಮಹಿಳಾ ಅಧ್ಯಕ್ಷೆ ಭಾರತಿಗೌಡ,ಸಮಾಜದ ಮುಖಂಡರಾದ ಸಿಹೆಚ್ ಪ್ರಕಾಶ್,ವಿಷ್ಣುಕುಮಾರ್,ಎಂಡಿ ದಿನೇಶ್,ಅಭಿಗೌಡ,ಸತೀಶ್, ಯುವರಾಜ್ ಗಣೇಶ್,ರಂಜೀತ್ ಹಾಗು ತಾಪಂ ಇಒ ಸತೀಶ್,ಬಿಇಒ ನಾರಾಯಣ್,ಮುಖ್ಯಾಧಿಕಾರಿ ಸುಜಯ್,ವೃತ್ತನಿರೀಕ್ಷಕ ಜಯರಾಂ ,ಮುದ್ದಮ್ಮ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *