ಸಕಲೇಶಪುರ ಪಟ್ಟಣದ ಒಕ್ಕಲಿಗರ ಸಮುದಾಯದ ಭವನದಲ್ಲಿ ಇಂದು ನಾಡ ಪ್ರಭು ಕೆಂಪೇಗೌಡರ 515 ನೇ ಜಯಂತಿ ಕಾರ್ಯಕ್ರಮವನ್ನು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಸಕಲೇಶಪುರ ವತಿಯಿಂದ ಆಚರಿಸಲಾಯಿತು.

ಉಪವಿಭಾಗಧಿಕಾರಿ ಡಾ. ಶ್ರುತಿ ದೀಪ ಬೆಳಗುವ ಮೂಲಕ ಸಭಾ ಕಾರ್ಯಕ್ರಮ ಉದ್ಘಾಟನೆ ಮಾಡಿ ಕೆಂಪೇಗೌಡ ನಾಡು ಕಟ್ಟುವ ಕೆಲಸವನ್ನು ಹಾಗೂ ಅವರ ದೂರ ದೃಷ್ಟಿ ನಮಗೆ ದಾರಿ ದೀಪ ಆಗಲಿ. ಎಂದು ಆಶೀಸಿದರು.

ಈ ಸಂದರ್ಭದಲ್ಲಿ ಶಾಸಕ ಸಿಮೆಂಟ್ ಮಂಜು,ಉಪವಿಭಾಗಾಧಿಕಾರಿ ಶ್ರುತಿ, ತಹಸೀಲ್ದಾರ್ ಮೇಘನಾ, ಡಿ. ವೈ ಎಸ್. ಪಿ ಪ್ರಮೋದ್ ಕುಮಾರ್, ಮಾಜಿ ಶಾಸಕ ಎಚ್ ಎಂ ವಿಶ್ವನಾಥ್ ಎಚ್. ಕುಮಾರಸ್ವಾಮಿ, ಸಮಾಜ ಸೇವಕ ಪ್ರತಾಪ್ ಗೌಡ ಬಾಚಿಹಳ್ಳಿ, ಇಓ ರಾಮಕೃಷ್ಣ ಬಿ.ಇ.ಓ ಪುಷ್ಪ, ಕೆಜಿಎಫ್ ಅಧ್ಯಕ್ಷ ಮೋಹನ್ ಕುಮಾರ್,ಕಾಂಗ್ರೆಸ್ ಮುಖಂಡ ಮುರುಳಿ ಮೋಹನ್, ತಾಲೂಕು ಒಕ್ಕಲಿಗ ಸಂಘದ ಉಪಾಧ್ಯಕ್ಷ ನಂದಿ ಕೃಪಾ ರಾಜು, ಮಹಿಳಾ ಘಟಕದ ಅಧ್ಯಕ್ಷೆ ವಸಂತ, ನಾಡು ಪ್ರಭು ಕೆಂಪೇಗೌಡ ಯುವ ವೇದಿಕೆ ವಿಶಾಲ್,ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಉದಯ್,ಮಲೆನಾಡು ವೀರಶೈವ ಸಮಾಜದ ಅಧ್ಯಕ್ಷ ದೇವರಾಜ್(ದಿವಾನ್), ವಲಯ ಅರಣ್ಯಾಧಿಕಾರಿ ಶಿಲ್ಪಾ, ಪುರಸಭಾ ಮುಖ್ಯಾಧಿಕಾರಿ ರಮೇಶ್,ಸೇರಿದಂತೆ ತಾಲೂಕಿನ ಒಕ್ಕಲಿಗ ಸಮಾಜದ ಹೋಬಳಿ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *