ಬೇಲೂರು : ೫೧೫ ನೇ ಕೆಂಪೇಗೌಡ ಜಯಂತಿ ಅಂಗವಾಗಿ ಪಟ್ಟಣದ ಕೆಂಪೇಗೌಡ ವೃತ್ತದ ಬಳಿ ಒಕ್ಕಲಿಗರ ಸಮುದಾಯ ಬಾಂಧವರಿಂದ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು.
ಕೆಂಪೇಗೌಡ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಕೆಂಪೇಗೌಡ ಸೇವಾ ಸಮಿತಿಯ ತಾಲೂಕು ಅಧ್ಯಕ್ಷ ಎಂ ಎ ನಾಗರಾಜು ಇಂದು ರಾಜ್ಯಾದ್ಯಂತ ಕೆಂಪೇಗೌಡರ ೫೧೫ ನೇ ಜಯಂತಿಯನ್ನು ಸರ್ಕಾರದ ವತಿಯಿಂದ ಮಾಡುತ್ತಿದ್ದು ನಮ್ಮ ನಾಡಪ್ರಭು ಜಯಂತಿಯನ್ನು ಇಡಿ ರಾಜ್ಯದಲ್ಲಿ ಎರಡು ಕೆಂಪೇಗೌಡರ ಪ್ರತಿಮೆ ನಿರ್ಮಾಣ ಮಾಡಲಾಗಿತ್ತು ಅದರಂತೆ ಬೇಲೂರಿನಲ್ಲಿ ಒಂದು ಪ್ರತಿಮೆ ಇದ್ದು ಪ್ರತೀವರ್ಷವೂ ವಿಶೇಷ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿದ್ದೇವೆ.
ನಾಡನ್ನು ಕಟ್ಟುವ ಸಂದರ್ಭದಲ್ಲಿ ಒಂದು ಜಾತಿ,ವರ್ಗಕ್ಕೆ ಕಟ್ಟದೆ ಎಲ್ಲಾ ಒಕ್ಕಲುತನ ಮಾಡುವ ಕುಟುಂಬಗಳ ಉದ್ದಾರಕ್ಕಾಗಿ ಕೆಂಪೇಗೌಡರು ಹಲವಾರು ಯೋಜನೆಗಳನ್ನು ತರುವ ಮೂಲಕ ಅವರು ನಾಡಪ್ರಭುವಾಗಿದ್ದಾರೆ.
ಜುಲೈ ೧ ರಂದು ನಡೆಯುವ ಅದ್ದೂರಿ ಜಯಂತಿಯಂದು ನಮ್ಮ ಆದಿಚುಮಚನಗಿರಿ ಮಹಾಸ್ವಾಮೀಜಿಗಳ ಆರ್ಶಿಋವಾದದೊಂದಿಗೆ ನಮ್ಮ ಶಂಬುನಾಥ ಮಹಾಸ್ವಾಮೀಜಿಗಳ ಹಾಗು ಶಾಸಕರ ನೇತೃತ್ವದಲ್ಲಿ ನಡೆಯಲಿದ್ದು ಕಾರ್ಯಕ್ರಮ ಕ್ಕೆ ತಾವೆಲ್ಲರೂ ಆಗಮಿಸಬೇಕೆಂದು ಮನವಿ ಮಾಡಿದರು.
ಪುತ್ಥಳಿಗೆ ಪುಷ್ಪಾರ್ಚನೆ ನಡೆಸಿ ಮಾತನಾಡಿದ ಶಾಸಕ ಹೆಚ್ ಕೆ ಸುರೇಶ್ ಈ ಬಾರಿಯ ಒಕ್ಕಲಿಗರ ಎಲ್ಲಾ ಸಂಘಟನೆಗಳಿಂದ ಈ ಬಾರಿ ೫೧೫ ನೇ ಹಾಗು ಯುವ ವೇಧಿಕೆಯ ೧೫ ನೆ ವರ್ಷದ ಕೆಂಪೇಗೌಡ ಜಯಂತಿಯನ್ನು ಹಬ್ಬದ ರೀತಿಯಲ್ಲಿ ಆಚರಿಸಲು ಸಿದ್ದತೆ ನಡೆಸಲಾಗಿದ್ದು ಅದರಂತೆ ಬಾಲಗಂಗಾಧರನಾಥ ಸ್ವಾಮೀಜಿ ಸೇತುವೆ ಬಳಿಯಿಂದ ಪರಮಪೂಜ್ಯ ಸ್ವಾಮೀಜಿಯವರನ್ನು ೧೦೮ ಕಳಸ ದೊಂದಿಗೆ, ವಿವಿಧ ಜಾನಪದ ಕಲಾ ತಂಡದೊಂದಿಗೆ ಕೆಂಪೇಗೌಡ ವೃತ್ತದ ಬಳಿ ಕರೆತಂದು ಪ್ರತಿಮೆಗೆ ಮಾಲಾರ್ಪಣೆ ನಡೆಸಿ ನಮ್ಮ ಸಮುದಾಯ ಭವನದಲ್ಲಿ ಪೂಜ್ಯರಿಂದ ಆರ್ಶಿರ್ವಚನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಹಾಗು ರೈತ ಕುಟುಂಬಗಳಿಗೆ ಅಭಿನಂದನೆ ಸಲ್ಲಿಸಲಾಗುವುದು.
ಈ ಕಾರ್ಯ್ರಮಕ್ಕೆ ಪಕ್ಷಾತೀತವಾಗಿ ಜಾತ್ಯಾತಿತವಾಗಿ ಬೇಲೂರು ತಾಲೂಕು ವಿಧಾನಸಭಾ ಕ್ಷೇತ್ರದ ಎಲ್ಲಾ ಜನಾಂಗದವರು ಆಗಮಿಸುವ ಮೂಲಕ ನಾಡಪ್ರಭುವಿಗೆ ನಮನ ಸಲ್ಲಿಸೋಣ ಎಂದರು.
ಈ ಸಂದರ್ಭದಲ್ಲಿ ತಹಶಿಲ್ದಾರ್ ಎಂ ಮಮತಾ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂಜೆ ನಿಶಾಂತ್,ಒಕ್ಕಲಿಗ ಯುವ ವೇಧಿಕೆ ಅಧ್ಯಕ್ಷ ಪೃಥ್ವಿ,ಕೆಂಪೇಗೌಡ ಯುವ ವೇಧಿಕೆ ಅಧ್ಯಕ್ಷ ಬಸವರಾಜು,ಮುಖಂಡರಾದ ಮಾರುತಿ ಚಂದ್ರು,ಎಂಡಿ ದಿನೇಶ್,ದಬ್ಬೆ ನಾರಾಯಣ್,ಅಭಿಗೌಡ,ಸಿಹೆಚ್ ಪ್ರಕಾಶ್,ಪುರಸಭೆ ಸದಸ್ಯ ಎಆರ್ ಅಶೊಕ್,ಮುದ್ದಮ್ಮ,ಭಾರತಿಗೌಡ,ಕುಮಾರ್,ಬಾಳೆಹಣ್ಣು ರಮೇಶ್,ಸುರೇಶ್,ಸತೀಶ್,ಪುಟ್ಟಸ್ವಾಮಿ ಗೌಡ,ಇತರರಯ ಹಾಜರಿದ್ದರು.