ಹೆತ್ತೂರು : ಸುಧೀರ್ಘವಾಗಿ ಸುಮಾರು 42 ವರ್ಷ ಸಾರ್ವಜನಿಕ ಶಿಕ್ಷಣ ಇಲಾಖೆ ಸೇವೆ ಸಲ್ಲಿಸಿ ಜನ ಮೆಚ್ಚಿದ ಶಿಕ್ಷಕಿ ಪ್ರಶಸ್ತಿ, 2022ನೇ ಜನಗಣತಿ ಬೆಳ್ಳಿ ಪದಕ ಪಡೆದು ಹೆತ್ತೂರು, ದೊಡ್ಡಕುಂದೂರು, ಭುವನಹಳ್ಳಿ ಮತ್ತು ಶುಕ್ರವಾರ ಸಂತೆ ಸರಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಮುಖ್ಯ ಶಿಕ್ಷಕಿಯಾಗಿ ವಯೋ ನಿವೃತ್ತಿ ಹೊಂದಿದ್ದ ಮೀನಾಕ್ಷಿ ಅವರಿಗೆ ಕುರಭತ್ತೂರು ಗ್ರಾಮ ಪಂಚಾಯತಿ ಕುವೆಂಪು ಸಭಾಂಗಣದಲ್ಲಿ ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹೆತ್ತೂರು ಹೋಬಳಿ ಘಟಕದ ಅಧ್ಯಕ್ಷ ಹೆಚ್. ಪಿ ರವಿಕುಮಾರ್, ಬಿ ಆರ್ ಸಿ ಗಂಗಾಧರ್, ತಾಲೂಕು ಶಿಕ್ಷಕರ ಸಂಘದ ಅಧ್ಯಕೆ ರೇಣುಕಾ, ಉಪಾಧ್ಯಕ್ಷೆ ದೇವಕಿ,ನೌಕರ ಸಂಘದ ಕಾರ್ಯದರ್ಶಿ ತಮ್ಮಣ್ಣ ಶೆಟ್ಟಿ, ತಾಲೂಕು ನೌಕರರ ಸಂಘದ ಕ್ರೀಡಾ ಕಾರ್ಯದರ್ಶಿ ಪ್ರವೀಣ್, ಖಜಾಂಚಿ ಜಗದೀಶ್, ಸಿದ್ದೇಶ್, ತಾಲೂಕು ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಎಚ್. ಕೆ ಸತೀಶ್, ಶುಕ್ರವಾರ ಸಂತೆ ಹಿರಿಯ ಪ್ರಾಥಮಿಕ ಪಾಠ ಶಾಲೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಶ್ವತ್. ಶಿಕ್ಷಕಿ ಸುಧಾಮಣಿ, ಶಾಲಾ ಅಭಿವೃದ್ಧಿ ಸದಸ್ಯರು, ಶಿಕ್ಷಕರು,ವಿದ್ಯಾರ್ಥಿಗಳು, ಪೋಷಕರು,ಹಳೆ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed