ಸಕಲೇಶಪುರ : ತಾಲೂಕು ಹಾನುಬಾಳು ಹೋಬಳಿಯ ಜೈ ಕರ್ನಾಟಕ ಸಂಘ ಬೆಳ್ಳೆಕೆರೆ ಹಾಗೂ ಕಸ್ತೂರ್ ಬಾ ಮೆಡಿಕಲ್ ಕಾಲೇಜು ಮಣಿಪಾಲ್ ಇವರ ಸಂಯುಕ್ತ ಆಶ್ರಯದಲ್ಲಿ ಬಾನುವಾರ ರಕ್ಷಿದಿಯ ಪೂರ್ಣಚಂದ್ರ ತೇಜಸ್ವಿ ಅವರ ರಂಗ ಮಂಟಪದಲ್ಲಿ ಮಾನಸಿಕ ಆರೋಗ್ಯ ಮಾಹಿತಿ ಅರಿವು ಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಗಿತ್ತು

ಈ ಸಂದರ್ಭದಲ್ಲಿ ರಂಗ ಕರ್ಮಿ ಹಾಗೂ ಚಿಂತಕ ಪ್ರಸಾದ್ ರಕ್ಷಿದಿ ಅವರು ಮಾತನಾಡಿ ಜನರಿಗೆ ಅನುಕೂಲವಾಗುವ ಉದ್ದೇಶದಿಂದ ಆರೋಗ್ಯ ಶಿಬಿರವನ್ನು ಮಾಡಲಾಗುತ್ತಿದ್ದು ಮಣಿಪಾಲ ಆಸ್ಪತ್ರೆಯ ಹೆಸರಾಂತ ವೈದ್ಯರಾದ ಡಾ.Psvn ಶರ್ಮಾ ,ಡಾ.ಅಭಿರಾಮ ,ಡಾ.ಸೊಯಜ್ ಜಾನ್ ,ಡಾ.ಅನಿರುದ್ ಅವರು ಆಗಮಿಸಿ ಮಾನಸಿಕ ತೊಂದರೆ ,ನರದ ಸಮಸ್ಯೆ ,ಮೂರ್ಚೆ ರೋಗ ಈಗೆ ಹಲವು ನರದಿಂದ ಉಂಟಾಗುವ ಸಮಸ್ಯೆಗಳಿಗೆ ತಪಾಸಣೆ ಮಾಡುವ ಮೂಲಕ ಪರಿಹಾರ ಮಾರ್ಗೋಪಯೋಗದ ಮಾಹಿತಿಯನ್ನು ನೀಡುತ್ತಿದ್ದು ಈ ಶಿಬಿರವು ಪ್ರತಿ ತಿಂಗಳಲ್ಲಿ ಒಂದು ದಿನ ನಡೆಯಲಿದ್ದು ಇದರ ಉಪಯೋಗವನ್ನು ನಮ್ಮ ಸಕಲೇಶಪುರದ ಜನತೆ ಬಳಸಿಕೊಳ್ಳಬೇಕು ಎಂದರು.

ಅನೇಕ ಜನರು ಇಂದು ಡಾಕ್ಟರ್ ಸಂಪರ್ಕಮಾಡಿ ಮಾಹಿತಿ ಹಾಗೂ ಪರಿಹಾರೋಪಾಯಗಳನ್ನು ಪಡೆದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed