ದೇಶಕ್ಕೆ, ಹಾಗೂ ಸಮಾಜಕ್ಕೆ ಮಾರ್ಗದರ್ಶನ ನೀಡಬೇಕಾಗಿದ್ದ ಶಿಕ್ಷಣ ಇಲಾಖೆಯಲ್ಲಿ ಜಾತಿ ಹಾಗೂ ಧರ್ಮದ ಮೇಲೆ ಪ್ರಶಸ್ತಿ ನೀಡುತ್ತಿರುವುದು ಬಹಳ ಶೋಚನಿಯ ವಿಷಯವಾಗಿದೆ.

ಸಕಲೇಶಪುರ ತಾಲ್ಲೂಕು ಪ್ರೌಢ ಶಿಕ್ಷಕರ ಸಂಘದಲ್ಲಿ ಈಗಾಗಲೇ ಸುಮಾರು 20–30 ವರ್ಷ ಸಕಲೇಶಪುರದಲ್ಲೇ ಸೇವೆ ಸಲ್ಲಿಸುತ್ತಿರುವ, ಕೃಷ್ಣ ಮೂರ್ತಿ, ದೇವರಾಜ್, ಆನಂದ್,….. ಹೀಗೆ ಹತ್ತು ಹಲವು ಮಂದಿ ಉತ್ತಮ ಶಿಕ್ಷಕರು ಇದ್ದರು ಕೂಡಾ ಸಕಲೇಶಪುರ ತಾಲ್ಲೂಕುಗೆ ಕೇವಲ 6 ತಿಂಗಳ ಹಿಂದೆ ವರ್ಗಾವಣೆಗೊಂಡು ಬಂದಿರುವ ರಾಜಾನಯ್ಕ್ ಎಂಬ ವ್ಯಕ್ತಿಗೆ ಪ್ರಶಸ್ತಿ ಕೊಟ್ಟಿರಿವುದು ಖಂಡನೀಯ!!! ರಾಜಾನಯ್ಕ್ ಹಿನ್ನಲೆ ಏನು, ಅವರ ಹೆಸರನ್ನು ಪಟ್ಟಿಗೆ ಸೇರಿಸಿದವರು ಯಾರು, ಉತ್ತಮ ಕ್ಷೇತ್ರಶಿಕ್ಷಣಾಧಿಕಾರಿಗಳು ಎಂಬ ಹೆಸರು ತೆಗೆದುಕೊಂಡಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ಆಯ್ಕೆಯನ್ನು ಬೇರೆಯವರ ಉತ್ತಡಕ್ಕೆ ಮಣಿದು ಪ್ರಶಸ್ತಿ ಪ್ರಕಟಿಸಿದರೆ…..?ಮಾದರಿ ಆಗಬೇಕಿದ್ದ ಶಿಕ್ಷಣ ಇಲಾಖೆಯು ಹೀಗೆ ಆದರೆ ಭವಿಷ್ಯದ ಮಕ್ಕಳ ಕಥೆ ಏನು

ಪ್ರತಿ ವರ್ಷವೂ ಶಿಕ್ಷಕರ ಸೇವೆ ನೋಡಿ ದಿನಾಚರಣೆಗೆ ಯಾವುದೇ ಬಾಡಿಗೆ ಪಡೆಯದೇ ಗುರುವೇಗೌಡ ಕಲ್ಯಾಣ ಮಂಟಪವನ್ನು ಉಚಿತವಾಗಿ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇದರ ಉಚಿತವಾಗಿ ನೀಡುವುದನ್ನು ನಿಲ್ಲಿಸುವ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ ಎಂದು ಕಲ್ಯಾಣ ಮಂಟಪ ಅಭಿವೃದ್ಧಿ ಟ್ರಸ್ಟ್ ನವರು ತಿಳಿಸಿದ್ದಾರೆ

ಲೋಹಿತ್ ಕೌಡಳ್ಳಿ ಅಧ್ಯಕ್ಷರು ಸಕಲೇಶಪುರ ತಾಲ್ಲೂಕು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed