
ಹಾಸನ : ತಾಲೂಕಿನ ಕಾರೆಕೆರೆ ಕೃಷಿ ಮಹಾವಿದ್ಯಾಲಯದ ಅಂತಿಮ ಬಿ. ಎಸ್ಸಿ (ಹಾನ್ಸ್) ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಹಾಸನ ತಾಲ್ಲೂಕು ದುದ್ದ ಹೋಬಳಿಯ ಕೆ. ಹೊಸಹಳ್ಳಿ ಗ್ರಾಮದಲ್ಲಿ ದಿನಾಂಕ ಇಪ್ಪತ್ತಾರು ಆಗಸ್ಟ್ ರಂದು ಮಣ್ಣು ಆರೋಗ್ಯ ಮತ್ತು ಅದರ ಪ್ರಾಮುಖ್ಯತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಡಾ|| ಅಶೋಕ್ ಎಲ್ ಬಿ ಮಣ್ಣು ವಿಜ್ಞಾನ ಮತ್ತು ಕೃಷಿ ರಾಸಾಯನಿಕ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರು ಆಗಮಿಸಿದ್ದರು.
ಇವರು ಮಣ್ಣು ಎಂದರೇನು? ಮಣ್ಣು ಆರೋಗ್ಯ ಎಂದರೇನು? ಹಾಗೂ ಮಣ್ಣು ಆರೋಗ್ಯದ ಪ್ರಾಮುಖ್ಯತೆ ಏನೇನು ಎಂಬುದನ್ನು ತಿಳಿಸಿದರು. ಹಾಗೂ ಮಣ್ಣಿನ ಮಾದರಿಯನ್ನು ಮತ್ತು ಮಣ್ಣು ಪರೀಕ್ಷೆ ಮಾಡುವುದರ ಪ್ರಾಮುಖ್ಯತೆಯನ್ನು ತಿಳಿಸಿದರು.
ಅದಲ್ಲದೆ ಮುಂದಿನ ದಿನಮಾನಗಳಲ್ಲಿ ಪುನಃ ಅವರು ಬಂದು ಮಣ್ಣಿನ ಪರಿಕ್ಷೆಯ ಪ್ರಾತ್ಯಕ್ಷಿಕೆಯನ್ನು ನಡೆಸುವೆವು ಎಂಬುದಾಗಿ ಭರವಸೆ ನೀಡಿದರು. ಹಾಗೂ ಇನ್ನೋರ್ವ ಪ್ರಾಧ್ಯಾಪಕರಾದ ಡಾ|| ಎಚ್ ಮಂಜುನಾಥ್ ಅವರು ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು .
ಇವರು ರೈತರು ಕೇಳಿದ ತಮ್ಮ ತೊಂದರೆಗಳಿಗೆ ಪರಿಹಾರದ ಮಾಹಿತಿಯನ್ನು ನೀಡಿದರು. ಅವುಗಳೆಂದರೆ ಅಲುಗಡ್ಡೆಯಲ್ಲಿನ ಸೊರಗು ರೋಗ ಹಾಗೂ ಶುಂಠಿಯಲ್ಲಿನ ಕೊಳೆರೋಗದ ಬಗ್ಗೆ ರೈತರು ಕೇಳಿದ ಪ್ರಶ್ನೆಗಳಿಗೆ ಪರಿಹಾರವನ್ನು ನೀಡಿದರು .
ಊರಿನ ಎಲ್ಲಾ ರೈತ ಬಾಂಧವರಿಂದ ಕಾರ್ಯಕ್ರಮವು ಯಶಸ್ವಿಯಾಗಿತು.


