ಅರಸೀಕೆರೆ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಹಾಗೂ ನಾಡಿನಾದ್ಯಂತ ಭಕ್ತರ ಮನದಲ್ಲಿ ಮನೆ ಮಾತಾಗಿರುವ ಶಕ್ತಿ ದೇವತೆ ತಾಲೂಕಿನ ಕಣಕಟ್ಟೆ ಹೋಬಳಿ ಮಾಡಾಳು ಸುಕ್ಷೇತ್ರ ಮೂಲಸ್ಥಾನ ಸ್ವರ್ಣಗೌರಮ್ಮ ದೇವಿಯವರ ಪ್ರತಿಷ್ಠಾಪನ ಮಹೋತ್ಸವವು ಗೌರಿ ಹಬ್ಬದ ದಿನದಂದು ಹಾರನಹಳ್ಳಿ ಕೋಡಿಮಠದ ಉತ್ತರಾಧಿಕಾರಿ ಚೇತನ್ ಮುರಿದೇವರು ಮತ್ತು ಗ್ರಾಮದ ಆರಾಧ್ಯ ಆರಾಧ್ಯ ದೇವರು ಚನ್ನಬಸವೇಶ್ವರ ಸ್ವಾಮಿ ಸಮ್ಮುಖದಲ್ಲಿ ನೂತನ ದೇವಾಲಯದಲ್ಲಿ ಶುಕ್ರವಾರ ಪ್ರತಿಷ್ಠಾಪನೆಗೊಂಡಿತು

ಶುಕ್ರವಾರ ಬೆಳಗ್ಗೆ ಮೂಲಸ್ಥಾನ ಸ್ವರ್ಣ ಗೌರಮ್ಮ ದೇವಿಯವರ ಮೂಲ ಸನ್ನಿಧಿಯಲ್ಲಿ ಚೇತನ್ ಮುರಿದೇವರ ಲಿಂಗ ಪೂಜೆ ನೆರವೇರಿದ ನಂತರ ಕೋಡಿಮಠದ ಮಹಾ ತಪಸ್ವಿ ಲಿಂಗೈಕ್ಯ ಶಿವಲಿಂಗ ಸ್ವಾಮಿಗಳು ಆಶೀರ್ವದಿಸಿ ನೀಡಿದ ಮೂಗುತಿಯನ್ನು ಶ್ರೀಗಳು ಸ್ವರ್ಣ ಗೌರಮ್ಮ ದೇವಿಯವರಿಗೆ ಧಾರಣೆ ಮಾಡಿದರು

ಬಳಿಕ ದೇವಿಯವರಿಗೆ ಮುತ್ತೈದೆಯರು ಧಾರ್ಮಿಕ ವಿಧಿ ವಿಧಾನಗಳಿಂದ ಪೂಜೆ ಸಲ್ಲಿಸಿದ ನಂತರ ಮಂಗಳ ಮಂಗಳ ಕರಡೆವು ವಾದ್ಯದೊಂದಿಗೆ ಶ್ರೀಗಳು ಮತ್ತು ಚನ್ನಬಸವೇಶ್ವರ ಸ್ವಾಮಿ ಸಮ್ಮುಖದಲ್ಲಿದಲ್ಲ ಮೆರವಣಿಗೆಯೊಂದಿಗೆ ನೂತನ ದೇವಾಲಯಕ್ಕೆ ಕರೆತರಲಾಯಿತು ಮೊದಲೇ ಸಿದ್ದಗೊಂಡಿದ್ದ ಅಶ್ವರೂಢ ಮಂಟಪದಲ್ಲಿ ಪ್ರತಿಷ್ಠಾಪಿಸಲಾಯಿತು

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು ಕಳೆದ 150 ವರ್ಷಗಳ ಹಿಂದೆ ಕೋಡಿಮಠದ ಮಹಾತಪಸ್ವಿ ಲಿಂಗೈಕ್ಯ ಶಿವಲಿಂಗ ಸ್ವಾಮಿಗಳು ತಮ್ಮ ಭಕ್ತ ಮಾಡಾಳು ಮುದ್ದೇಗೌಡರಿಗೆ ನಿಮ್ಮ ಗ್ರಾಮದಲ್ಲಿ ಗೌರಿ ದೇವಿಯನ್ನು ಪ್ರತಿಷ್ಠಾಪಿಸಿ ಎಂದು ಬಂಗಾರದ ಮೂಗುತಿಯನ್ನು ಆಶೀರ್ವದಿಸಿ ತಾಯಿ ಜಗನ್ಮಾತೆ ಗೌರಮ್ಮ ದೇವಿ ಈ ಭಾಗದ ಜನರನ್ನು ಕಾಪಾಡಲಿ ಎಂದು ಹರಸಿದ್ದರು ಅದೇ ಸಂಪ್ರದಾಯ ಈಗಲೂ ಮುಂದುವರಿದುಕೊಂಡು ಬರುತ್ತಿದೆ ತಾಯಿ ಜಗನ್ಮಾತೆ ಹಾಗೂ ವರುಣದೇವ ನಾಡಿಗೆ ಒಳ್ಳೆ ಮಳೆ ಬೆಳೆ ನೀಡಲಿ ಎಂದು ಆಶಿಸಿದರು

ಈ ಸಂದರ್ಭದಲ್ಲಿ ಮೂಲಸ್ಥಾನ ಸ್ವರ್ಣ ಗೌರಮ್ಮ ದೇವಿ ಟ್ರಸ್ಟ್ ಅಧ್ಯಕ್ಷ ಎಂಎಸ್ ನಟರಾಜ್ ಗೌರವಾಧ್ಯಕ್ಷ ಎಸ್ ಮಲ್ಲಿಕಾರ್ಜುನಪ್ಪ ಗ್ರಾಮದ ಮುಖಂಡರಾದ ಎಂ ಸಿ ನಟರಾಜ್ ಎಂಎಸ್ ಮರಳೇಗೌಡ ಅಶೋಕ್ ಮಾಡಾಳು ಶಿವಲಿಂಗಪ್ಪ ಗ್ರಾಮ ಪಂಚಾಯಿತಿ ಸದಸ್ಯ ಕೊಡ್ಲಿ ಬಸವರಾಜ್ ಹೊಸಳ್ಳಿ ಸಂತೋಷ್ ದಲಿತ ಮುಖಂಡರಾದ ಸೋಮಶೇಖರ್ ದಾಸಪ್ಪ ಚಂದ್ರಪ್ಪ ಸಾವಿರಾರು ಮಂದಿ ಭಕ್ತರು ಭಾಗವಹಿಸಿದ್ದರು

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed