ಸಕಲೇಶಪುರ :- ತಾಲ್ಲೂಕಿನ ವಳಲಹಳ್ಳಿ ಗ್ರಾಮ ಪಂಚಾಯಿತಿಯ ಹೆಚ್. ವಿ ಹಳ್ಳಿ ಕಿರಿಯ ಪ್ರಾಥಮಿಕ ಪಾಠಶಾಲೆಯ 24 ವಿದ್ಯಾರ್ಥಿಗಳಿಗೆ ಸಮಾಜ ಸೇವಕರಾದ ಪುನೀತ್ ಬನ್ನಹಳ್ಳಿಯವರು ಉಚಿತ ಟ್ರ್ಯಾಕ್ ಸೂಟ್ ಗಳನ್ನು ಕಳಿಸಿಕೊಟ್ಟರು.

ಶಾಲೆಯ ಮುಖ್ಯೋಪಾಧ್ಯಾಯಿನಿರಾದ ಪುಷ್ಪಾಲಾತ ಅವರು ಶಾಲಾ ಮಕ್ಕಳಿಗೆ ಟ್ರ್ಯಾಕ್ ಸೂಟ್ ಗಳ ಅವಶ್ಯಕತೆ ಇದ್ದು, ಯಾರಾದರೂ ದಾನಿಗಳಿದ್ದರೆ ಸಂಪರ್ಕಿಸುವಂತೆ ಕರಡಿಗಾಲ ಹರೀಶ್ ಅವರಿಗೆ ತಿಳಿಸಿದ್ದರು.

ಕರಡಿಗಾಲ ಹರೀಶ್ ಸಮಾಜ ಸೇವಕರದ ಪುನೀತ್ ಬನ್ನಹಳ್ಳಿ ಅವರನ್ನು ಸಂಪರ್ಕಿಸಿ ಸರ್ಕಾರಿ ವಿದ್ಯಾರ್ಥಿಗಳಿಗೆ ಟ್ರ್ಯಾಕ್ ಸೂಟ್ ಗಳ ಅವಶ್ಯಕತೆ ಬಗ್ಗೆ ವಿವರಿಸಿದ್ದರು.

ಇಂದು ಸಮಾಜ ಸೇವಕರಾದ ಪುನೀತ್ ಬನ್ನಳ್ಳಿಯವರು 24 ವಿದ್ಯಾರ್ಥಿಗಳಿಗೆ ಟ್ರ್ಯಾಕ್ ಸೂಟ್‌ಗಳನ್ನು ಕಳಿಸಿಕೊಟ್ಟಿದ್ದು ವಿದ್ಯಾರ್ಥಿಗಳಿಗೆ ಪುನೀತ್ ಬನ್ನಹಳ್ಳಿ ಅವರ ಅನುಪಸ್ಥಿತಿಯಲ್ಲಿ ಕರಡಿಗಾಲ ಹರೀಶ್ ಹಾಗೂ ಮಾಜಿ ಸೈನಿಕರಾದ ನಂದೀಶ್ ,ಪತ್ರಕರ್ತರಾದ ಅರುಣ್ ಗೌಡರ ನೇತೃತ್ವದಲ್ಲಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕರಡಿಗಾಲ ಹರೀಶ್ ಪುನೀತ್ ಬನ್ನಳ್ಳಿ ಅವರು ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ನಾವು ನಮ್ಮ ಸರ್ಕಾರಿ ಶಾಲೆಯ ಮಕ್ಕಳಿಗೆ ಅಗತ್ಯ ಇರುವ ಟ್ಯಾಕ್ ಸೂಟ್ ಗಳ ಬಗ್ಗೆ ವಿಚಾರಿಸಿದಾಗ, ಸರ್ಕಾರಿ ಶಾಲಾ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದಾರೆ.

ಇಂತಹ ದಾನಿಗಳು ಅತಿ ಹೆಚ್ಚು ಮುಂದೆ ಬಂದರೆ ಸರ್ಕಾರಿ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗುತ್ತದೆ ಎಂದು ಹೇಳಿದರು

ಮುಖ್ಯೋಪಾಧ್ಯಾಯನಿಯಾದ ಪುಷ್ಪಲತಾ ದಾನಿಗಳಿಗೆ ಧನ್ಯವಾದ ಹೇಳುತ್ತಾ ಪುನೀತ್ ಬನ್ನಹಳ್ಳಿ ಅವರ ಈ ಸಮಾಜ ಮುಖಿ ಕೆಲಸವೂ ಅತ್ಯಂತ ಶ್ಲಾಘನಿಯಾವದುದ್ದು ನಮ್ಮ ವಿದ್ಯಾರ್ಥಿಗಳ ಪರವಾಗಿ ಅವರಿಗೆ ಧನ್ಯವಾದಗಳು ಇವರ ಸೇವೆ ಇನ್ನಷ್ಟು ಸರ್ಕಾರಿ ವಿದ್ಯಾರ್ಥಿಗಳಿಗೆ ಸಿಗುವಂತಾಗಲಿ. ಎಂದು ಹೇಳಿದರು

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *