
ಸಕಲೇಶಪುರ : ಶ್ರೀ ಗಣಪತಿ ಸೇವಾ ಸಮಿತಿ ವನಗೂರು ಕೂಡ ರಸ್ತೆ ಇವರ ಆಶ್ರಯದಲ್ಲಿ ಹತ್ತನೇ ವರ್ಷದ ಗಣಪತಿ ಮೂರ್ತಿ ವಿಸರ್ಜನೆ ಭಾನುವಾರ ಬೆಳಿಗ್ಗೆ 10 ಗಂಟೆಯಿಂದ ಗಣಪತಿಗೆ ಮಹಾ ಮಂಗಳಾರತಿ ಮತ್ತು ವಿಸರ್ಜನಾ ಕಾರ್ಯಕ್ರಮವನ್ನು ಸಾವಿರಾರು ಭಕ್ತರ ನಡುವೆ ನಡೆಸಲಾಯಿತು
ಗ್ರಾಮದ ಮುಖ್ಯ ದ್ವಾರದಲ್ಲಿ ನೀಡಿದ ಕಾರ್ಯಕ್ರಮದಲ್ಲಿ ಹಲವು ಸಾಧಕರನ್ನು ಸನ್ಮಾನಿಸಲಾಯಿತು ಶಾಲಾ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮ ಸ್ಥಳೀಯ ಪ್ರತಿಭೆ ಶರತ್ ಮಿಮಿಕ್ರಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು
ಗ್ರಾಮದ ಮಹಿಳೆಯರ ಪ್ರಮುಖ ಬೀದಿಗಳಲ್ಲಿ ರಂಗೋಲೆ ಹಾಕುವ ಮೂಲಕ ಕಾರ್ಯಕ್ರಮದ ಮೆರಗು ಹೆಚ್ಚಿಸಿದರು ಇದೇ ವೇಳೆ ಕೂಡ ರಸ್ತೆ ಸುಂದರ ವೃತ್ತ ನಿರ್ಮಾಣ ಮಾಡಲು ಸಹಕರಿಸಿದ ನಿವೃತ್ತ ಲೋಕೋಪಯೋಗಿ ಇಂಜಿನಿಯರ್ ಅಶ್ವಥ್ ನಾರಾಯಣ್ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಕೂಡ ರಸ್ತೆ ಗ್ರಾಮದಲ್ಲಿರುವ ವೃತ್ತವನ್ನು ಹಾಸನ ಜಿಲ್ಲೆಯ ಹಳೇಬೀಡಿನಲ್ಲಿರುವ ವೃತ್ತವನ್ನು ನೋಡಿ ಮಾದರಿಯಾಗಿ ಮಾಡಿದ್ದು ಈ ಹಿಂದೆ ಇಲ್ಲಿ ಕರ್ತವ್ಯ ನಿರ್ವಹಿಸುವಾಗ ಗ್ರಾಮಸ್ಥ ಲಿಂಗರಾಜ್ ನೇತೃತ್ವದಲ್ಲಿ ಸ್ಥಳೀಯರು ಮನವಿ ಮಾಡಿಕೊಂಡಾಗ ವಿಶೇಷ ಕಾಳಜಿ ವಹಿಸಿ ವೃತ್ತವನ್ನು ನಿರ್ಮಿಸಿದ್ದು ಇದೀಗ ಗ್ರಾಮಸ್ಥರು ನೆನಪಿನಲ್ಲಿಟ್ಟು ಸನ್ಮಾನ ಮಾಡುತ್ತಿರುವುದು ವೃತ್ತಿ ಸಾರ್ಥಕತೆ ಆಗುತ್ತಿದೆ ಎಂದು ತಿಳಿಸಿದರು
ಗ್ರಾಮದ ನಾಲ್ಕು ಪ್ರಮುಖ ರಸ್ತೆಗಳಿಗೆ. ಮಲೆನಾಡು ಶೈಲಿಯ ತೋರಣಗಳನ್ನು ಸಿಂಗರಿಸಲಾಗಿತ್ತು ದಕ್ಷಿಣ ಕನ್ನಡ ಜಿಲ್ಲೆಯ ಭಜನೆ ತಂಡ ಸಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟಿತು
ಕಾರ್ಯಕ್ರಮದಲ್ಲಿ ಸೇವ ಸಮಿತಿಯ ಅಧ್ಯಕ್ಷ ರಾಜು ಕಾಫಿ ಬೆಳೆಗಾರ ತಂಬಲಗೇರಿ ಆನಂದ್ ಕ್ಯಾಂಟೀನ್ ಲೋಹಿತ್ ಬ್ಯಾಗಡಹಳ್ಳಿ ಶ್ರೀನಿ ಕೊಂಗಳ್ಳಿ ಕೃಷ್ಣ ತಿಪ್ಪಳ್ಳಿ ನರೇಂದ್ರ ಉಮೇಶ್ ಬ್ಯಾಗಡ ಹಳ್ಳಿ ಬಿಸಿಲೆ ರಸ್ತೆಯ ಎಲ್ಲಾ ಪದಾಧಿಕಾರಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.




