
ನಾರ್ವೆ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ 2023-24 ಇಂದು ನಾರ್ವೆಯಲ್ಲಿ 2023-24ನೇ ಸಾಲಿನ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಅಧ್ಯಕ್ಷರಾದ ಗೀತಾ ಲಕ್ಷ್ಮಣ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮದ ಸ್ವಾಗತವನ್ನು ನಿರ್ದೇಶಕ ಸೋಮಯ್ಯ ನಡೆಸಿಕೊಟ್ಟರು ಮರಣ ಹೊಂದಿದ ರೈತರಿಗೆ ಸಂತಾಪ ಸೂಚಿಸಲಾಯಿತು.
ರೈತ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಿ ಕಾರ್ಯಕ್ರಮದ ಉದ್ಘಾಟನೆಯನ್ನು HDCC ಬ್ಯಾಂಕಿನ ಮಾಜಿ ಉಪಾಧ್ಯಕ್ಷರಾದ ಎಂ. ಎ. ನಾಗರಾಜ್ ಉದ್ಘಾಟಿಸಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ನಾರ್ವೆ ಸಂಘವು ತಾಲೂಕಿನ ಪ್ರಥಮ ಸ್ಥಾನದಲ್ಲಿ ಕಾರ್ಯಗಾರ ನಡೆಸಿಕೊಂಡು ಹೋಗುತ್ತಿರುವುದು ಸಂತಸದ ವಿಚಾರ ಈ ಸಂಘಕ್ಕೆ ಹೆಚ್ಚುವರಿ ಸಾಲವನ್ನು 25. ಲಕ್ಷ ರೂ ತಂದಿರುತ್ತೇನೆ ಸಂಘದ ಫಲಾನುಭವಿಗಳು ರೈತರು ಅನುಕೂಲ ಪಡೆದುಕೊಳ್ಳಬೇಕು
ಈ ಸಂಘವು ಈ ವರ್ಷದ ನಿವ್ವಳ 1,70,000/ ಬಂದಿದೆ ಆದರಿಂದ ನಾರ್ವೆ ಕೃಷಿ ಪತ್ತಿನ ಸಹಕಾರ ಸಂಘ ಒಳ್ಳೆ ಪ್ರಗತಿಯಲ್ಲಿ ಇದೆ ಎಂದು ಸಂತೋಷಪಟ್ಟರು
ಲಾಭ ಅತಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಸನ್ಮಾನಿಸಲಾಯಿತು
ಕಾರ್ಯಕ್ರಮದ ಸಂದರ್ಭದಲ್ಲಿ ಎನ್. ಎಂ. ಶಿವಪ್ರಸಾದ್ ಉಪಾಧ್ಯಕ್ಷ ಮದು ಕುಮಾರ್, ಸಂಘದ ನಿರ್ದೇಶಕರುಗಳು ಗ್ರಾಮ ಪಂಚಾಯತ್ ಅಧ್ಯಕ್ಷರು,ಉಪಾಧ್ಯಕ್ಷರು, ಉತ್ಪಾದಕ ಸಂಜಯ್ ನಾರ್ವೆ, ಸದಸ್ಯರು, ಮೇಲ್ವಿಚಾರಕ ದಿನೇಶ್ ಕುಮಾರ್ ಕಾರ್ಯನಿರ್ವಾಣ ಅಧಿಕಾರಿ ಜ್ಯೋತಿ ಎಸ್ ಹೇಮರಾಜ್, ಸಂಘದ ಷೇರುದಾರರು, ಸ್ತ್ರೀ ಶಕ್ತಿ ಸಂಘದವರು ಗ್ರಾಮಸ್ಥರು ಹಾಜರಿದ್ದರು.



