ರೋಗಗಳನ್ನು ಹರಡುವಲ್ಲಿ ಕೈಗಳು ಪ್ರಮುಖ ಪಾತ್ರವಹಿಸುತ್ತವೆ. ನಿಮ್ಮ ಕೈಗಳನ್ನು ನಿಯಮಿತವಾಗಿ ನೀರು ಮತ್ತು ಸಾಬೂನಿನಿಂದ ಅಥವಾ ಆಲ್ಕೋಹಾಲ್ ಆಧಾರಿತ ರಬ್‌ನಿಂದ ಸ್ವಚ್ಛಗೊಳಿಸುವುದು ಜನರ ಆರೋಗ್ಯವನ್ನು ರಕ್ಷಿಸಲು ಹೆಚ್ಚು ವೆಚ್ಚ-ಪರಿಣಾಮಕಾರಿ ಮಾರ್ಗವಾಗಿದೆ.
ಹಾಸನ ತಾಲೂಕಿನ ದುದ್ದ ಹೋಬಳಿಯ ಜೋಡಿಕೃಷ್ಣಾಪುರ ಗ್ರಾಮದಲ್ಲಿ ಕಾರೇಕೆರೆ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ.ಎಸ್.ಸಿ(ಹಾನರ್ಸ) ಕೃಷಿ ಮತ್ತು ಆಹಾರ ತಂತ್ರಜ್ಞಾನ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯನುಭವ ಶಿಬಿರ ೨೦೨೪-೨೫ ರ ಅಂಗವಾಗಿ ವೈಯಕ್ತಿಕ ನೈರ್ಮಲ್ಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಕೈ ನೈರ್ಮಲ್ಯ ಸೋಂಕು ತಡೆಗಟ್ಟುವಿಕೆ ಮತ್ತು ಸೋಂಕುಗಳ ಅಪಾಯವನ್ನು ಕಡಿಮೆ ಮಾಡುವ ಮತ್ತು ಆರೋಗ್ಯ ರಕ್ಷಣೆ ಮಾಡಲು ಕೈ ನೈರ್ಮಲ್ಯ ಪ್ರಮುಖವಾಗಿದೆ .ಶಾಲಾ ಮಕ್ಕಳಿಗಾಗಿ 7 ಹಂತಗಳ ಹ್ಯಾಂಡ್ ವಾಶ್ ಕುರಿತು ಬಾಬುರವರು ವಿವರಿಸಿದರು
ಸ್ಟೆಪ್ 1: ಕೈಗಳನ್ನು ಒದ್ದೆ ಮಾಡುವುದುಕೈಗಳನ್ನು ನೀರಿನಲ್ಲಿ ನೆನೆಸಿ, ಸೋಪು ಹಚ್ಚಿ
ಸ್ಟೆಪ್ 2: ಅಂಗೈಗಳನ್ನು ತಿಕ್ಕಿ, ಕೈಗಳ ಮೇಲ್ಭಾಗ, ಬೆರಳುಗಳನ್ನು ಚೆನ್ನಾಗಿ ತಿಕ್ಕಿ.
ಸ್ಟೆಪ್ 3: ಅಂಗೈ ಹಿಂಬದಿ ತಿಕ್ಕಿಎಡಗೈ ಬಳಸಿ ಬಲಗೈಯ ಹಿಂಬದಿ, ಬಲಗೈಯ ಬಳಸಿ ಎಡಗೈ ಹಿಂಬದಿ, ಬೆರಳುಗಳನ್ನು ತಿಕ್ಕಿ.
ಸ್ಟೆಪ್ 4: ಕೈಗಳನ್ನು ಜೋಡಿಸಿಎರಡು ಕೈಯ ಕೈಬೆರಳನ್ನು ಜೋಡಿಸಿ ತಿಕ್ಕಿ
ಸ್ಟೆಪ್ 5: ಬೆರಳಗಳನ್ನು ಮಡಚಿ, ಅದರ ಮೇಲ್ಭಾಗವನ್ನು ಮತ್ತೊಂದು ಕೈಯಿಂದ ಸೋಪು ಹಚ್ಚಿ ತಿಕ್ಕಿ
ಸ್ಟೆಪ್ 6: ಹೆಬ್ಬರಳು ಸ್ವಚ್ಛ ಮಾಡಿಬಲಗೈ ಹಾಗೂ ಎಡಗೈ ಹೆಬ್ಬರಳನ್ನು ಸ್ವಚ್ಚಗೊಳಿಸಿ
ಸ್ಟೆಪ್ 7: ಅಂಗೈಯನ್ನು ನಿಮ್ಮ ಉಗುರುಗಳಿಂದ ಸ್ವಚ್ಛಗೊಳಿಸಿ ನಂತರ ನೀರಿನಲ್ಲಿ ತೊಳೆಯಬೇಕು
ಈ ಕಾರ್ಯಕ್ರಮದಲ್ಲಿ ಜೋಡಿಕೃಷ್ಣಾಪುರದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಹಾಗು ಶಿಕ್ಷಕರು ಭಾಗವಹಿಸಿ ಯಶಸ್ವಿಗೊಳಿಸಿದರು.