ಸಕಲೇಶಪುರ : ತಾಲೂಕು ಹೆತ್ತೂರು ಹೋಬಳಿ ಹೆತ್ತೂರು ಗ್ರಾಮದ ಸರ್ವೆ ನಂಬರ್ 302 ರಲ್ಲಿ ಟ್ರಾನ್ಸ್ ಫಾರ್ಮನ್ನು ಕೆ ಪಿ ಎಸ್ ಶಾಲೆಯ ಪಕ್ಕಕ್ಕೆ ಸ್ಥಳಾಂತರಿಸಿದ್ದ ವಿಚಾರವಾಗಿ ಈ ಹಿಂದೆ ಫೆಬ್ರವರಿ 20 2024 ರಂದು AEE ರವರಿಗೆ ಪತ್ರದ ಮುಖೇನ ವಿಚಾರವನ್ನು ಗ್ರಾಮಸ್ಥರು ತಿಳಿಸಿರುತ್ತಾರೆ
ಈ ವಿಚಾರ ತಿಳಿದು AEE ರವರು ಸ್ಥಳಕ್ಕೆ ಬಂದು ಪರಿಶೀಲಿಸಿ 15 ರಿಂದ 20 ದಿನಗಳೊಳಗೆ ಸಮಸ್ಯೆ ಬಗೆಹರಿಸಿಕೊಡುವುದಾಗಿ ಹೇಳಿರುತ್ತಾರೆ
ಆದರೆ 9 ತಿಂಗಳಾದರೂ ಸಮಸ್ಯೆ ಬಗೆಹರಿಸದೆ ಕಾಲಹರಣ ಮಾಡಿರುತ್ತಾರೆ ಈ ಸದರಿ ಜಾಗದಲ್ಲಿ ಪ್ರತಿನಿತ್ಯ 400 ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಹೋಗುವದರಿಂದ ಭಾರಿ ಅನಾಹುತ ಆಗುವ ಸಾಧ್ಯತೆ ಇದೆ ಹಾಗೂ ಸದರಿ ಜಾಗದಲ್ಲಿ ಕೆಪಿಎಸ್ ಶಾಲೆಯ ಎಲ್ ಕೆ ಜಿ ಮತ್ತು ಯು ಕೆ ಜಿ ಯ ಕೊಠಡಿಗಳು ಇದಕ್ಕೆ ತಾಗಿಕೊಂಡು ಇರುವುದರಿಂದ ಭಾರಿ ಅನಾಹುತ ಸಂಭವಿಸಬಹುದಾಗಿದೆ
ಈ ಸಮಸ್ಯೆಯನ್ನು ಚಸ್ಕಾಂ ಅಧಿಕಾರಿಗಳು ಒಂದು ವಾರದೊಳಗೆ ಬಗೆಹರಿಸದಿದ್ದಲ್ಲಿ ವಿದ್ಯಾರ್ಥಿಗಳು ಪೋಷಕರು ಮತ್ತು ಸಾರ್ವಜನಿಕರು ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರು ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷರು ಹಾಗೂ ಸಧಸ್ಯರುಗಳು ಭಾರಿ ದೊಡ್ಡ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.