ಶ್ರೀ ಗುಹೆಕಲ್ಲಮ್ಮ ದೇವಸ್ಥಾನ ಟ್ರಸ್ಟ್ (ರಿ.)ರಾಘವೇಂದ್ರನಗರ (ಬಾಳೆಗದ್ದೆ), ಸಕಲೇಶಪುರ.

ಭಕ್ತ ಮಹಾಶಯರೇ,ಪ್ರತಿವರ್ಷದಂತೆ ಈ ವರ್ಷವೂ ಆದಿಶಕ್ತಾತ್ಮಿಕೆ ಶ್ರೀ ಗುಹೆಕಲ್ಲಮ್ಮ ದೇವಿಯವರ ಕಾರ್ತಿಕ ಪೂಜಾ ಮಹೋತ್ಸವವನ್ನು ವಿಜೃಂಭಣೆಯಿಂದ ದಿನಾಂಕ : 25-11-2024ನೇ ಸೋಮವಾರ ನಡೆಸಲು ತೀರ್ಮಾನಿಸಿರುತ್ತೇವೆ.

ಭಕ್ತಾಧಿಗಳು ಈ ಕಾರ್ತಿಕ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ತನು, ಮನ, ಧನಗಳಿಂದ ಸಹಕಾರವನ್ನಿತ್ತು ಶ್ರೀ ಗುಹೆಕಲ್ಲಮ್ಮ ದೇವಿಯವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.

ಗಂಗೆ ಪೂಜೆ : ಸಂಜೆ 6-30ಕ್ಕೆ ಪವಿತ್ರ ಹೇಮಾವತಿ ನದಿ ತೀರದಲ್ಲಿ ನಡೆಯಲಿದೆ.ನಂತರ ದೇವಿಯವರ ಮುಖವಾಡಗಳು, ಗಂಗೆ ಕಳಸಗಳೊಂದಿಗೆ ಮೆರವಣಿಗೆಯು ಸಂಜೆ 7-00 ರಿಂದ ಮಂಗಳ ವಾಧ್ಯಗಳೊಂದಿಗೆ ಹೊರಡುತ್ತದೆ.

ಈ ಮೆರವಣಿಗೆಯಲ್ಲಿ ಊರಿನ ಎಲ್ಲಾ ಭಕ್ತಾಧಿಗಳು ಭಾಗವಹಿಸಬೇಕಾಗಿ ಕೋರುತ್ತೇವೆ.ರಾತ್ರಿ 9-30ಕ್ಕೆ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಹಾಗೂ ಅನ್ನದಾಸೋಹ ನಡೆಸಲಾಗುತ್ತದೆ.

ವಿಶೇಷ ಸೂಚನೆ : ಪ್ರತೀ ಶುಕ್ರವಾರ ಹಾಗೂ ವಿಶೇಷ ದಿನಗಳಲ್ಲಿ ದೇವಿಯವರಿಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ಹಾಗೂ ಸಂಜೆ 7-00 ರಿಂದ ಭಜನೆ ರಾತ್ರಿ 8-30ಕ್ಕೆ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಇರುತ್ತದೆ.

ಶ್ರೀ ಗುಹೆಕಲ್ಲಮ್ಮ ದೇವಿಯವರ ಸನ್ನಿಧಿಯಲ್ಲಿ ನಡೆಯುವ ಪೂಜೆಗಳ ವಿವರ :ಅಷ್ಟೋತ್ತರ ಅರ್ಚನೆ, ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ, ಎಳನೀರು ಅಭಿಷೇಕ, ವಾಹನ ಪೂಜೆ, ಪ್ರತಿ ಮಂಗಳವಾರ, ಶುಕ್ರವಾರ ಸಂಕ್ರಮಣ ವಿಶೇಷ ಪೂಜೆ ಹಾಗೂ ವಿಶೇಷ ದಿನಗಳಲ್ಲಿ ದೇವಿಯವರಿಗೆ ಬೆಳ್ಳಿ ಮುಖವಾಡ ಧರಿಸಲಾಗುವುದು.

ಹೆಚ್ಚಿನ ವಿವರಗಳಿಗೆ ದೇವಸ್ಥಾನದ ಅರ್ಚಕರನ್ನು ಸಂಪರ್ಕಿಸಬೇಕಾಗಿ ವಿನಂತಿಸುತ್ತೇವೆ.ಶ್ರೀ ರವಿಶಾಸ್ತ್ರಿ, ಮೊ : 9740378329

ಅನ್ನದಾಸೋಹಕ್ಕೆ ಅಕ್ಕಿ, ತರಕಾರಿ, ತೆಂಗಿನಕಾಯಿ, ಧವಸಧಾನ್ಯ ಹಾಗೂ ದೇವರಿಗೆ ದೀಪದ ಎಣ್ಣೆ ನೀಡುವ ಭಕ್ತಾಧಿಗಳು ದೇವಸ್ಥಾನದಲ್ಲಿ ಕೊಟ್ಟು ರಶೀದಿಯನ್ನು ಪಡೆಯಿರಿ.

ದಿನಾಂಕ : 26-11-2024ನೇ ಮಂಗಳವಾರ ಬೆಳಗ್ಗೆ 6-30 ರಿಂದಶ್ರೀ ದೇವಿಯವರ ಭಂಟ ದೇವರಿಗೆ ಬಲಿಪೂಜೆ ದಿನಾಂಕ : 29-11-2024ನೇ ಶುಕ್ರವಾರ ಸಂಜೆ 7-00 ರಿಂದಶ್ರೀ ದೇವಿಯವರ ಸನ್ನಿಧಿಯಲ್ಲಿ “ಕಾರ್ತಿಕ ದೀಪೋತ್ಸವ” ಏರ್ಪಡಿಸಲಾಗಿದೆ.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *